ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ ಪ್ರಕರಣ – ಅಂಗನವಾಡಿ ಕಾರ್ಯಕರ್ತರ ಮತ್ತು ಸಹಾಯಕಿಯರ ಸಂಘ ಖಂಡನೆ

0

ಪುತ್ತೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿ ಬೂತ್ ಮಟ್ಟದಲ್ಲಿ ಮನೆ ಮನೆ ಮತ ಚೀಟಿ ವಿತರಣೆ ಕರ್ತವ್ಯದಲ್ಲಿದ್ದ ಅಂಗನಾಡಿ ಕಾರ್ಯಕರ್ತೆಗೆ ಹಲ್ಲೆ ನಡೆಸಿದ ಪ್ರಕರಣವನ್ನು ಅಂಗನವಾಡಿ ಕಾರ್ಯಕರ್ತರ ಮತ್ತು ಸಹಾಯಕಿಯರ ಸಂಘ ಖಂಡಿಸಿದೆ.


ಕಸಬಾ ವಲಯದ ರೋಟರಿಪುರ ಅಂಗನವಾಡಿ ಕಾರ್ಯಕರ್ತ ಭಾಗ ಸಂಖ್ಯೆ 120 ರ ಬೂತ್ ಮಟ್ಟದ ಅಧಿಕಾರಿಯಾಗಿರುವ ಜಯಶ್ರೀ ಇವರು ಚುವಾವಣಾ ಕರ್ತವ್ಯ ಪ್ರಯುಕ್ತ ಮತದಾರರ ಚೀಟಿ ನೀಡುವ ಸಂದರ್ಭದಲ್ಲಿ ಪಾತಿಮ ಎಸ್ ಎಂಬವರು ಏಕಾಏಕಿಯಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿ ಅಂಗನವಾಡಿ ಕಾರ್ಯಕರ್ತರ ಸಂಘದ ಅಧ್ಯಕ್ಷೆ ಕಮಲ ಮತ್ತು ಸಂಘದ ಪದಾಧಿಕಾರಿಗಳು ಸರಕಾರಿ ಆಸ್ಪತ್ರೆಯಲ್ಲಿ ಗಾಯಾಳು ಜಯಶ್ರೀ ಅವರನ್ನು ಭೇಟಿ ಮಾಡಿದ್ದಾರೆ ಮತ್ತು ಅಂಗನವಾಡಿ ಕಾರ್ಯಕರ್ತೆಗೆ ನಡೆದ ಹಲ್ಲೆ ಘಟನೆಯನ್ನು ಖಂಡಿಸಿದ್ದಾರೆ.

ಮನೆ ಮನೆಗೆ ಒಬ್ಬೊಬ್ಬರೆ ಹೋಗಲಿರುವುದರಿಂದ ನಮಗೆ ರಕ್ಷಣೆ ಬೇಕಾಗಿದೆ:
ಪುತ್ತೂರು ತಾಲೂಕಿನಲ್ಲಿ ಹೆಚ್ಚಿನ ಅಂಗನವಾಡಿ ಕಾರ್ಯಕರ್ತೆಯವರು ಐಎಲ್‌ಓಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಘಟನೆಯಿಂದಾಗಿ ಎಲ್ಲಾ ಬಿಎಲ್ಓಗಳು ಭಯಬೀತರಾಗಿದ್ದಾರೆ. ಇಲಾಖೆಯ ಕೆಲಸದೊಂದಿಗೆ ಚುನಾವಣಾ ಕರ್ತವ್ಯವನ್ನು ಒತ್ತಡದಿಂದಲೇ ಮಾಡಬೇಕಾಗುತ್ತದೆ. ಬೂತ್ ಮಟ್ಟದ ಅಧಿಕಾರಿಗಳು ಓಟರ್ ಸ್ಲಿಪ್ ಮನೆ ಮನೆಗೆ ಹಂಚಲು ಒಬ್ಬೊಬ್ಬರೇ ಹೋಗಬೇಕಾಗಿರುತ್ತದೆ. ನಮಗೆ ಯಾವುದೇ ರಕ್ಷಣೆ ಇರುವುದಿಲ್ಲ. ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಹೆಚ್ಚಿನ ಬಿಎಲ್‌ಓಗಳು ಅಸ್ವಸ್ಥರಾಗಿದ್ದಾರೆ. ಆದುದರಿಂದ ಮತದಾರರ ಚೀಟಿಯನ್ನು ಒಂದು ಕಡೆ ನಿಗದಿತ ಜಾಗದಲ್ಲಿ ವಿತರಿಸುವಂತೆ ನಾವು ಸಹಾಯಕ ಚುನಾವಣಾಧಿಕಾರಿ ಮತ್ತು ತಹಸೀಲ್ದಾರ್ ಅವರಿಗೆ ಮನವಿ ಮಾಡಲಿದ್ದೇವೆ ಎಂದು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ಕಮಲ, ಜಿಲ್ಲಾಧ್ಯಕ್ಷೆ ತಾರಾ ಬಳ್ಳಾಲ್, ಮಾಜಿ ಜಿಲ್ಲಾಧ್ಯಕ್ಷೆ ಅರುಣಾ ಬಿ ಕೆ, ತಾಲೂಕು ಖಜಾಂಚಿ ಶೈಲಜಾ, ಮಾಜಿ ಕಾರ್ಯದರ್ಶಿ ಜಯಲತಾ, ಪ್ರಮೀಳಾ ರಾವ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here