ಸುದ್ದಿ ಅಂಕಣಕಾರ ಪ್ರೊ| ವಿ.ಬಿ.ಅರ್ತಿಕಜೆಯವರಿಗೆ ನಿರಂಜನ ಪ್ರಶಸ್ತಿ

0

ಪುತ್ತೂರು: ಸುದ್ದಿ ಬಿಡುಗಡೆ ಪತ್ರಿಕೆಯ ನಿರಂತರ ಅಂಕಣಕಾರ, ಲೇಖಕ, ಪ್ರೊ| ವಿ.ಬಿ. ಅರ್ತಿಕಜೆಯವರಿಗೆ 2024ನೇ ಸಾಲಿನ ’ನಿರಂಜನ ಪ್ರಶಸ್ತಿ’ಯನ್ನು ಘೋಷಿಸಲಾಗಿದೆ. ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಶಿವರಾಮ ಕಾರಂತ ಅಧ್ಯಯನ ಕೇಂದ್ರ ಕೊಡಮಾಡುವ ಈ ಪ್ರಶಸ್ತಿಯು ಅಖಿಲ ಕರ್ನಾಟಕ ವ್ಯಾಪ್ತಿ ಹೊಂದಿದ್ದು, ವಾಗ್ಮೀಯ ಲೋಕಕ್ಕೆ ಉತ್ತಮ ಸೇವೆ ಸಲ್ಲಿಸಿದವರಿಗೆ ಇದನ್ನು ನೀಡಲಾಗುತ್ತಿದೆ.


ಖ್ಯಾತ ಪತ್ರಕರ್ತರೂ, ಸಾಹಿತಿಯೂ ಆಗಿರುವ ಅರ್ತಿಕಜೆ ಅವರು ಈಗಾಗಲೇ ಸಾಹಿತ್ಯ ರತ್ನ, ಬಾಳಿಲ ಪ್ರಶಸ್ತಿ, ಬೋಳಂತಕೋಡಿ ಪ್ರಶಸ್ತಿ, ಒಡಿಯೂರು ಶ್ರೀ ಪ್ರಶಸ್ತಿ, ಸತ್ಯಶಾಂತಾ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ಮುಂತಾದ ಗೌರವಗಳಿಗೆ ಪಾತ್ರರಾಗಿದ್ದಾರೆ. ಇವರು ಐವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಲ್ಲದೆ ಪುತ್ತೂರು ಮತ್ತು ಸುತ್ತಮುತ್ತಲಿನ ಹಲವಾರು ಲೇಖಕರಿಗೆ, ಸಂಘ ಸಂಸ್ಥೆಗಳಿಗೆ ಉತ್ತೇಜನ ನೀಡಿದ ಹಿರಿಮೆ ಇವರದಾಗಿದೆ. ಸುದ್ದಿ ಬಿಡುಗಡೆಯಲ್ಲಿ ಹತ್ತಾರು ವರ್ಷಗಳಿಂದ ಅಂಕಣ ಬರೆಯುತ್ತಿರುವ ಇವರ ಬರಹಗಳ ಸಂಖ್ಯೆ ಐದು ಸಾವಿರಕ್ಕೂ ಹೆಚ್ಚಾಗಿದೆ ಎಂಬುದು ಗಮನಾರ್ಹ. ಒಂದು ಸಾವಿರ ಕಿರುಕತೆಗಳಿರುವ ’ಸಾವಿರದ ಕಥೆಗಳು’ ಇವರ ಇತ್ತೀಚಿಗಿನ ಪುಸ್ತಕ. ಮೇ 9 ರಂದು ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here