ಪುತ್ತೂರು: ವಿವೇಕಾನಂದ ಕಾಲೇಜ್‌ನಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿರುವ ಸಾಹಿತಿ, ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾರಾಯಣ ಕುಂಬ್ರರವರು ಸಾಹಿತ್ಯ ಬರೆದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಸ್ತುತಿಸುವ ‘ಬಿಲ್ವಾರ್ಚನೆ’ ಕನ್ನಡ ಭಕ್ತಿ ಪ್ರಧಾನ ಆಲ್ಬಮ್ ಹಾಡು ಇತ್ತೀಚೆಗೆ ಆರ್.ಪಿ ಕ್ರಿಯೇಷನ್ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿತು.
ಪುತ್ತೂರು ಅನುರಾಗ ವಠಾರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕು.ಶ್ರೇಯಾ ಮೇರ್ಕಜೆಯವರು ಆಲ್ಬಮ್ ಸಾಂಗ್ ಬಿಡುಗಡೆಗೊಳಿಸಿದರು. ಇದರ ಪೋಸ್ಟರ್ ಅನ್ನು ವಿವೇಕಾನಂದ ಕಾಲೇಜ್‌ನ ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್ ಪ್ರಾಂಶುಪಾಲರ ಕಛೇರಿಯಲ್ಲಿ ವಿದ್ಯುಕ್ತವಾಗಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ರಸಾಯನ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ. ಕೃಷ್ಣ ಕಾರಂತ್, ಗಣಕ ವಿಜ್ಞಾನ ವಿಭಾಗದ ಪ್ರಕಾಶ್ ಕುಮಾರ್.ಪಿ, ಕಛೇರಿ ಅಧೀಕ್ಷಕ ಗುರುರಾಜ್, ಅಲ್ಲದೇ ಶಿಕ್ಷಕೇತರ ಸಂಘದ ಅಧ್ಯಕ್ಷ ಶುಭ ಎಸ್ ರಾವ್ ಶಿಕ್ಷಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. ಮಿತ್ರಂಪಾಡಿ ಜಯರಾಮ್ ರೈ ಅಬುದಾಬಿ ನಿರ್ಮಾಣದ ಈ ಆಲ್ಬಮ್ ಹಾಡಿಗೆ ಸಂಗೀತ ಮತ್ತು ಗಾಯನದಲ್ಲಿ ರವಿ ಪಾಂಬಾರ್, ಸಹ ಗಾಯನ ಸಮನ್ವಿ ಆರ್.ರೈ ನುಳಿಯಾಲು ಧ್ವನಿ ನೀಡಿದ್ದಾರೆ. ಮಿಥುನ್ ರಾಜ್ ವಿದ್ಯಾಪುರರವರ ಶ್ರೀರಾಜ್ ಮ್ಯೂಸಿಕಲ್ ವಲ್ಡ್ ಕಬಕ ಇಲ್ಲಿ ರೆಕಾರ್ಡಿಂಗ್ ಮಾಡಿರುವ ಈ ಆಲ್ಬಮ್ ಸಾಂಗ್ ಅನ್ನು ಈಗಾಗಲೇ ಹಲವು ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.