ಕಾಂಗ್ರೆಸ್ ಭದ್ರಕೋಟೆ ದಕ್ಷಿಣ ಕನ್ನಡದ ಗತವೈಭವ ಮರುಕಳಿಸಲಿದೆ -ಕಾವು ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ

0

ನಾನು, ಪದ್ಮರಾಜ್ ಹಿಂದು. ನಾವು ಮಾಡಿರುವಷ್ಟು ಧಾರ್ಮಿಕ ಕೆಲಸವನ್ನು ಹಿಂದುತ್ವದ ಬಗ್ಗೆ ಮಾತನಾಡುವವರು ಮಾಡಿಲ್ಲ; ಅಶೋಕ್ ರೈ

ಪುತ್ತೂರು: ಕಾಂಗ್ರೆಸ್ ಗೆಲ್ಲುವ ಸೂಚನೆ ಸ್ಪಷ್ಟವಾಗಿದೆ. ಹಿಂದೆ 40 ವರ್ಷ ಇದು ಕಾಂಗ್ರೆಸಿನ ಭದ್ರಕೋಟೆಯಾಗಿತ್ತು. ಈಗ ಮತ್ತೊಮ್ಮೆ ದಕ್ಷಿಣ ಕನ್ನಡ ಜಿಲ್ಲೆ ಕಾಂಗ್ರೆಸಿನ ಭದ್ರಕೋಟೆಯಾಗಿ ಪರಿವರ್ತನೆ ಆಗಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಹೇಳಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಕಾವುನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಗೆಲುವಿನ ಸೂಚನೆ ಸಿಗುತ್ತಿದ್ದಂತೆ ಬಿಜೆಪಿಗರು ಅಪಪ್ರಚಾರಕ್ಕೆ ಶುರು ಮಾಡಿದ್ದಾರೆ. ಇದಕ್ಕೆ ಎದೆಗುಂದದಿರಿ. ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಜನರಿಗೆ ತಿಳಿಸಿ. ಖಂಡಿತಾ ಮತದಾರರು ನಮ್ಮ ಕಡೆ ಒಲವು ತೋರಿಸುತ್ತಾರೆ. ಯಾವುದೇ ಕಾರಣಕ್ಕೂ ನಾವು ದ್ವೇಷದ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದರು.

ಹಿಂದುತ್ವದ ಬಗ್ಗೆ ಮಾತನಾಡುವವರು ನಾವು ಮಾಡಿರುವಷ್ಟು ಧಾರ್ಮಿಕ, ಸಾಮಾಜಿಕ ಕೆಲಸಗಳನ್ನು ಮಾಡಿಲ್ಲ. ಬರೀಯ ಅಪಪ್ರಚಾರದಿಂದಷ್ಟೇ ಅಧಿಕಾರ ಪಡೆದುಕೊಂಡಿದ್ದಾರೆ. ಇದೀಗ ದೈವಗಳಿಗೆ ನ್ಯಾಯ ಕೊಡಿಸುವ ಮಾತನ್ನು ಆಡುತ್ತಿದ್ದಾರೆ ಎಂದರು.

ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಐದು ಗ್ಯಾರೆಂಟಿಗಳನ್ನು ರಾಜ್ಯ ಸರಕಾರ ಜಾರಿಗೆ ತಂದಾಗ ಇನ್ನು ಅನುದಾನ ಇಲ್ಲ ಎಂದು ಬಿಜೆಪಿಗರು ಹೇಳಿದರು. ಪುತ್ತೂರು ಕ್ಷೇತ್ರಕ್ಕೆ 1400 ಕೋಟಿ ರೂ. ಅನುದಾನ ಬಂದಾಗ ಬಿಜೆಪಿಗರಿಗೆ ಉತ್ತರವೇ ಇಲ್ಲದಂತಾಗಿತ್ತು. ಹೀಗಿದ್ದರೂ ಕೆಲವರು ಪತ್ರಿಕಾಗೋಷ್ಠಿ ನಡೆಸಿ ಅನುದಾನದ ಬಗ್ಗೆ ಮಾತನಾಡಿದರು. ಇದಕ್ಕೆ ಉತ್ತರ ನೀಡಿಲ್ಲ. ಮುಂದೆ ಸಚಿವರನ್ನು ಕರೆಸಿ, ದೊಡ್ಡ ಕಾರ್ಯಕ್ರಮ ನಡೆಸಿ ಯೋಜನೆಯನ್ನು ಉದ್ಘಾಟಿಸಲಾಗುವುದು. ಈ ಮೂಲಕ ಕಾರ್ಯದಿಂದಲೇ ಉತ್ತರ ನೀಡುತ್ತೇನೆ ಎಂದರು.

ನಾನು, ಪದ್ಮರಾಜ್ ಹಿಂದು. ನಾವು ಮಾಡಿರುವಷ್ಟು ಧಾರ್ಮಿಕ ಕೆಲಸವನ್ನು ಹಿಂದುತ್ವದ ಬಗ್ಗೆ ಮಾತನಾಡುವವರು ಮಾಡಿಲ್ಲ; ಅಶೋಕ್ ರೈ

ನಾನು ಹಿಂದೂ ಎಂದು ಧೈರ್ಯವಾಗಿ ಹೇಳುತ್ತೇನೆ. ನಕಲಿ ಹಿಂದೂಗಳಂತಲ್ಲ. ಇವರ ಮುಂದೆ ನನ್ನನ್ನು ಹಾಗೂ ಪದ್ಮರಾಜ್ ಅವರನ್ನು ತುಲನೆ ಮಾಡಿ ನೋಡಿ; ನಾವು ಮಾಡಿರುವಷ್ಟು ಧಾರ್ಮಿಕ ಕೆಲಸವನ್ನು ಅವರು ಮಾಡಿಲ್ಲ. ನಾವು ಧಾರ್ಮಿಕ, ಸಾಮಾಜಿಕ ಕೆಲಸಗಳ ಜೊಯೆ ಅಭಿವೃದ್ಧಿ ವಿಚಾರವಾಗಿ ಹೋಗುತ್ತೇವೆ. ಉದ್ಯೋಗ ಸೃಷ್ಟಿಗೆ ಪ್ರಯತ್ನ ಮಾಡುತ್ತೇವೆ. ವಿದ್ಯಾವಂತ, ಬುದ್ಧಿವಂತ, ಸಮರ್ಥ ವ್ಯಕ್ತಿ ಪದ್ಮರಾಜ್ ಆರ್. ಪೂಜಾರಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ನೀಡಿದೆ. ಅವರನ್ನು ಗೆಲ್ಲಿಸುವ ಕೆಲಸ ಆಗಬೇಕು ಎಂದರು.

ಮಾಜಿ ಸಚಿವ, ಜಿಲ್ಲಾ ಚುನಾವಣಾ ಉಸ್ತುವಾರಿ ಬಿ. ರಮಾನಾಥ ರೈ ಮಾತನಾಡಿ, ಜಿಲ್ಲೆಗೆ ಅಭಿವೃದ್ಧಿಯ ಕೊಡುಗೆ ನೀಡಿರುವುದು ಕಾಂಗ್ರೆಸ್ ಪಕ್ಷದ ಸಂಸದರಿಂದ. ಹಾಗಾಗಿ ಮತ್ತೊಮ್ಮೆ ಕಾಂಗ್ರೆಸ್ ಸಂಸದರಾಗಿ ಪದ್ಮರಾಜ್ ಆರ್. ಪೂಜಾರಿ ಅವರನ್ನು ಗೆಲ್ಲಿಸಬೇಕು. ಉತ್ತಮ ಅಭ್ಯರ್ಥಿ ಮಾತ್ರವಲ್ಲ, ಬಡವರ ಬಗ್ಗೆ ಕಾಳಜಿ ಹೊಂದಿದ್ದಾರೆ ಎಂದರು.

ಬದಲಾವಣೆಯ ‘ಕಾವು’ ಇಲ್ಲಿಂದಲೇ ಆರಂಭ: ಕಾವು ಹೇಮನಾಥ ಶೆಟ್ಟಿ
ಚುನಾವಣಾ ಉಸ್ತುವಾರಿ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ನಮ್ಮ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರ ಬಗ್ಗೆ ವಿರೋಧ ಪಕ್ಷದವರಿಗೆ ಒಂದೇ ಒಂದು ಕಪ್ಪು ಚುಕ್ಕೆಯನ್ನು ಹುಡುಕಲು ಸಾಧ್ಯವಾಗಿಲ್ಲ. ಅಷ್ಟು ಉತ್ತಮ ಹಾಗೂ ಸಮರ್ಥರು ನಮ್ಮ ಅಭ್ಯರ್ಥಿ. ಗೆಲುವಿನ ಗುರಿ, ಬದಲಾವಣೆಯ ಕಾವು, ಕಾವಿನಿಂದಲೇ ಆರಂಭವಾಗಿದೆ ಎಂದರು.

ಇದೇ ಸಂದರ್ಭ ಗೋವಿಂದ ಮಣಿಯಾಣಿ ಮಡ್ಯಂಗಳ, ಕಿರಣ್ ಗೌಡ ಮಡ್ಯಂಗಳ, ಶಶಿಕಿರಣ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು.

ಅಗಲಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಬಿ. ವಿಶ್ವ‌ನಾಥ ರೈ, ನೆಟ್ಟಣಿಗೆ ಮುಡ್ನೂರು ಜಿಪಂ ಕ್ಷೇತ್ರದ ಮಹಿಳಾ ಉಸ್ತುವಾರಿ ಅನಿತಾ ಹೇಮನಾಥ ಶೆಟ್ಟಿ, ಮಹಮ್ಮದ್ ಬಡಗನ್ನೂರು, ಅಜೀಜ್ ಬುಶ್ರಾ, ವಿಜಯ್ ಕುಮಾರ್ ಸೊರಕೆ, ಅಮಲ ರಾಮಚಂದ್ರ, ಭಾಸ್ಕರ್ ಕೋಡಿಂಬಾಳ, ಎಂ.ಪಿ. ಅಬೂಬಕ್ಕರ್, ಎ.ಕೆ. ಜಯರಾಮ್ ರೈ, ಪುಡಾ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳ, ವಲಯ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಬಲ್ಯಾಯ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here