ನರಿಮೊಗರು: ಬೈಕ್, ಜೀಪು ನಡುವೆ ಡಿಕ್ಕಿ -ಸವಾರ ಮೃತ್ಯು

0

ಪುತ್ತೂರು: ಪುತ್ತೂರು ಸುಬ್ರಹ್ಮಣ್ಯ ರಸ್ತೆಯ ನರಿಮೊಗರು ಸಮೀಪ ಎ.17ರಂದು ರಾತ್ರಿ ಬೈಕ್ ಮತ್ತು ಜೀಪು ನಡುವೆ ಡಿಕ್ಕಿ ಸಂಭವಿಸಿದ್ದು, ಬೈಕ್ ಸವಾರ ಮೃತಪಟ್ಟ ಇಬ್ಬರು ಮಕ್ಕಳು ಗಂಭೀರ ಗಾಯೊಂಡಿರುವ ಬಗ್ಗೆ ವರದಿಯಾಗಿದೆ.

ಲೋಕೇಶ್ ಗೌಡ(45ವ) ಎಂಬವರು ಮೃತಪಟ್ಟವರೆಂದು ತಿಳಿದು ಬಂದಿದೆ. ಲೋಕೇಶ್ ಗೌಡ ಅವರು ತನ್ನ ಇಬ್ಬರು ಮಕ್ಕಳನ್ನು ಬೈಕ್‌ನಲ್ಲಿ ಕೂತುಕೊಳಿಸಿಕೊಂಡು ಪುತ್ತೂರಿಗೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಗಂಭೀರ ಗಾಯಗೊಂಡ ಮಕ್ಕಳನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here