ಮತ್ತೆ ಸಕ್ರಿಯವಾಗಿದ್ದಾರೆ ಆನ್‌ಲೈನ್ ವಂಚಕರು-ಮೋಸ ಹೋಗುವ ಮುನ್ನ ಹುಷಾರ್!

0
Magnifying glass with the word fraud magnified in blue tone in square format

ಯೂಸುಫ್ ರೆಂಜಲಾಡಿ
ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎನ್ನುವ ಮಾತೊಂದಿದೆ. ಅದರಂತೆ ಪ್ರತಿದಿನ, ಮೋಸ ಮಾಡುವವರದ್ದು ಹಾಗೂ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ಆಧುನಿಕ ಡಿಜಿಟಲ್ ಯುಗದಲ್ಲಿ ಜನರನ್ನು ಯಾಮಾರಿಸಿ ಸುಲಭವಾಗಿ ವಂಚಕರು ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಆನ್‌ಲೈನ್ ಮೂಲಕ ವಂಚನೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು ಅಂತಹ ಮೋಸದ ಜಾಲಗಳಿಗೆ ಬಲಿಯಾಗದಿರಬೇಕಾದರೆ ಪ್ರತಿಯೋರ್ವರು ಸ್ವತಃ ಜಾಗೃತರಾಗುವುದು ಅತ್ಯವಶ್ಯಕವಾಗಿದೆ.


ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಮೂಲಕ ವಂಚನೆಗೊಳಗಾಗುವವರ ಸಂಖ್ಯೆ ಹೆಚ್ಚುತ್ತಿದ್ದು ವಿಶೇಷ ಎಂದರೆ ವಿದ್ಯಾವಂತರೇ ಹೆಚ್ಚು ಮೋಸ ಹೋಗುತ್ತಿದ್ದಾರೆ. ಹೊರ ರಾಜ್ಯದಲ್ಲೋ, ಹೊರ ದೇಶದಲ್ಲೋ ಕುಳಿತು ಮೊಬೈಲ್ ಮೂಲಕ ಕರೆ ಮಾಡುವ ವಂಚಕರು ನಿಮಗೆ ಬಂಪರ್ ಬಹುಮಾನ ಬಂದಿದೆ ಅದನ್ನು ಪಡೆಯಬೇಕಾದರೆ ನೀವು ಆನ್‌ಲೈನ್ ಮೂಲಕ ಹಣ ಪಾವತಿಸಬೇಕು…ನಿಮ್ಮ ಮೊಬೈಲ್ ಸಂಖ್ಯೆಗೆ ಲಕ್ಕಿ ಡ್ರಾ ಮೂಲಕ ಇಂತಿಷ್ಟು ಲಕ್ಷ ಹಣ ನೀವು ವಿಜೇತರಾಗಿದ್ದು, ಅದನ್ನು ನಿಮ್ಮ ಖಾತೆಗೆ ಜಮೆ ಮಾಡಬೇಕಾದರೆ ನೀವು ಆನ್‌ಲೈನ್ ಮೂಲಕ ನಾವು ಹೇಳಿದ ಖಾತೆಗೆ ಹಣ ಜಮೆ ಮಾಡಬೇಕು…ನಿಮ್ಮ ಎಟಿಎಂ ಕಾರ್ಡ್‌ನ ಅವಧಿ ಮುಗಿದಿದ್ದು ಅದನ್ನು ರಿನೀವಲ್ ಮಾಡಲು ನಿಮ್ಮ ಬ್ಯಾಂಕ್ ಖಾತೆ ದಾಖಲೆ ಮತ್ತು ಒಟಿಪಿ ನಂಬರ್ ಕೊಡಬೇಕು…ಸರಕಾರದ ಇಂತಿಂಥ ಯೋಜನೆಯ ಹಣ ನಿಮಗೆ ಪಾವತಿಯಾಗಲಿದೆ ಹಾಗಾಗಿ ನಿಮ್ಮ ಎಟಿಎಂ ನಂಬರ್ ಕೊಡಿ, ಅಥವಾ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಂಬರನ್ನು ಕೊಡಿನಿಮ್ಮ ಮೇಲೆ ಇಂತಿಂಥ ವಿಷಯದಲ್ಲಿ ಕೇಸ್ ದಾಖಲಾಗಿದೆ, ಅದನ್ನು ಕ್ಲಿಯರೆನ್ಸ್ ಮಾಡಬೇಕಾದರೆ ಹಣ ಕಳುಹಿಸಿನಿಮಗೆ ಕ್ಯಾಶ್‌ಬ್ಯಾಕ್ ಇದೆ ಇದನ್ನು ಸ್ಕ್ರ್ಯಾಚ್ ಮಾಡಿ ಎಂದು ಸಂದೇಶ ಬರುವುದು ಹೀಗೇ ನಾನಾ ರೀತಿಯ ಸುಳ್ಳುಗಳನ್ನು ಹೇಳಿ ನಂಬಿಕೆ ಬರುವಂತೆ ಮಾಡಿ ವಂಚಿಸುವ ಆನ್‌ಲೈನ್ ವಂಚಕರು ಸಕ್ರಿಯವಾಗಿದ್ದು ಅವರ ಮಾತನ್ನು ನಂಬಿದರೆ ಮೋಸ ಹೋಗುವುದಂತೂ ಗ್ಯಾರಂಟಿ.

ವಿದ್ಯಾವಂತರೇ ಹೆಚ್ಚು ಮೋಸ ಹೋಗುತ್ತಿದ್ದಾರೆ:
ವಿಪರ್ಯಾಸ ಎಂದರೆ ಈ ಆನ್‌ಲೈನ್ ವಂಚಕರ ಮೋಸದ ಜಾಲಕ್ಕೆ ಬಲಿಯಾದವರಲ್ಲಿ ಹೆಚ್ಚಿ ನವರು ವಿದ್ಯಾವಂತರು. ಲಕ್ಷ ಲಕ್ಷ ಹಣ ಕಳೆದುಕೊಂಡವರೂ ವಿದ್ಯಾವಂತರು. ಹಾಗಾಗಿ ಬಣ್ಣದ ಮಾತುಗಳ ಮೂಲಕ ವಿದ್ಯಾವಂತರನ್ನು ಮತ್ತು ಶ್ರೀಮಂತರನ್ನು ವಂಚಕರು ಸುಲಭವಾಗಿ ಬಲೆಗೆ ಬೀಳಿಸುತ್ತಾರೆ ಎನ್ನುವ ಮಾಹಿತಿಯಿದೆ. ಅವಿದ್ಯಾವಂತರು ಅಂತಹ ಕರೆಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಕರೆಯನ್ನು ಕಡಿತಗೊಳಿಸುತ್ತಾರೆ. ವಾಸ್ತವದಲ್ಲಿ ಮೋಸ ಮಾಡುವವರೂ ಮೋಸ ಹೋಗುವವರೂ ಹೆಚ್ಚಿನವರು ವಿದ್ಯಾಭ್ಯಾಸವುಳ್ಳವರೇ ಆಗಿರುತ್ತಾರೆ.

ಪೊಲೀಸ್ ಇಲಾಖೆ ಎಚ್ಚರಿಸಿದೆ:
ಪೊಲೀಸ್ ಇಲಾಖೆ ಕೂಡಾ ಆನ್‌ಲೈನ್ ವಂಚನಾ ಕರೆಗಳ ಬಗ್ಗೆ ಜನರು ಜಾಗೃತರಾಗುವಂತೆ ಅನೇಕ ಬಾರಿ ಮನವಿ ಮಾಡಿದೆ. ಆನ್‌ಲೈನ್ ವಂಚಕರ ಬಗ್ಗೆ ಎಚ್ಚರದಿಂದಿರುವಂತೆ ಪೊಲೀಸರು ಜನರಲ್ಲಿ ಮನವಿ ಮಾಡಿದ್ದಾರೆ. ಅಂತಹ ಕರೆಗಳು ಬಂದಲ್ಲಿ ಅದನ್ನು ರಿಜೆಕ್ಟ್ ಮಾಡಬೇಕು ಅಥವಾ ಪೊಲೀಸ್ ಠಾಣೆಗೆ ದೂರು ನೀಡಬೇಕಾಗಿದೆ.

ಜಾಗೃತರಾಗುವುದೊಂದೇ ದಾರಿ:
ನಕಲಿ ಕರೆಗಳು ಬಂದು ಅದೆಷ್ಟೋ ಮಂದಿ ಹಣ ಕಳೆದುಕೊಂಡ ಘಟನೆಗಳು ಸಾಕಷ್ಟು ನಡೆಯುತ್ತಿದೆ. ಅಂತಹ ಕರೆ ಮಾಡಿದವರನ್ನು ಪತ್ತೆ ಹಚ್ಚುವುದೂ ಅಷ್ಟು ಸುಲಭದ ಮಾತಲ್ಲ, ಪೊಲೀಸರು ಪ್ರಯತ್ನಪಟ್ಟರೂ ಅದು ಹೆಚ್ಚಾಗಿ ಎಲ್ಲಿಯೋ ಹೊರ ರಾಜ್ಯಗಳಲ್ಲೋ, ಹೊರ ದೇಶಗಳಲ್ಲೋ ಕುಳಿತು ಮಾಡುವ ಕರೆಗಳಾಗಿರುವುದರಿಂದ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅಂತಹ ನೂರಾರು ಪ್ರಕರಣಗಳು ದಾಖಲಾಗುತ್ತದೆಯಾದರೂ ಅದನ್ನು ಪತ್ತೆ ಹಚ್ಚುವುದು ಪೊಲೀಸರಿಗೂ ಸುಲಭದ ಮಾತಲ್ಲ. ಹಾಗಾಗಿ ಇಂತಹ ವಂಚಕರ ಬಗ್ಗೆ ಜನರೇ ಜಾಗೃತರಾಗುವುದು ಅತ್ಯಗತ್ಯವಾಗಿದೆ.

ನಿಮ್ಮ ಮೊಬೈಲ್‌ಗೆ ಬರುವ ಕರೆಗಳ ಬಗ್ಗೆ ಜಾಗೃತರಾಗಿರಿ
ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಮೂಲಕ ವಿವಿಧ ರೀತಿಯಲ್ಲಿ ವಂಚನೆ ಮಾಡುವವರ ಸಂಖ್ಯೆ ಜಾಸ್ತಿಯಾಗುತ್ತಿದ್ದು ಇದಕ್ಕೆ ನಾವು ಸ್ವಯಂ ಜಾಗೃತರಾಗುವುದು ಅತೀ ಅಗತ್ಯ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸಂದೇಶಗಳನ್ನು ನಂಬಿ ಅನೇಕ ಮಂದಿ ಮೋಸ ಹೋದ ಉದಾಹರಣೆಗಳಿವೆ. ಇನ್‌ಸ್ಟಾಗ್ರಾಂ, -ಸ್‌ಬುಕ್ ಮೊದಲಾದವುಗಳಲ್ಲಿ ಹೆಚ್ಚಿನ ಮೋಸ ನಡೆಯುತ್ತಿದ್ದು ಅದರಲ್ಲಿ ಬರುವ ಯಾವುದೋ ಲಿಂಕ್‌ನ್ನು ದುಡ್ಡಿನ ಆಸೆಗೆ ಬೇಕಾಗಿ ಒತ್ತಿದರೆ ನಮ್ಮ ಹಣ ನಮಗೆ ಗೊತ್ತಿಲ್ಲದೇ ವಂಚಕರ ಪಾಲಾಗುತ್ತದೆ.

ಬೇರೆ ರಾಜ್ಯದಲ್ಲೋ, ದೇಶದಲ್ಲೋ ಕುಳಿತು ವಂಚಕರು ಈ ರೀತಿಯ ವಂಚನೆ ನಡೆಸುತ್ತಿದ್ದು ವೀಡಿಯೋ ಕಾಲ್ ಮಾಡಿ ಬಳಿಕ ಬ್ಲ್ಯಾಕ್‌ಮೇಲ್ ಮಾಡಿ ದುಡ್ಡು ಪೀಕಿಸುವ ಘಟನೆಗಳೂ ನಡೆಯುತ್ತಿದೆ, ನಮ್ಮ ಜಿಲ್ಲೆಯಲ್ಲಿ ಕೊನೆಯ ವರ್ಷದಲ್ಲಿ ಸೈಬರ್ ಕ್ರೈಂಗೆ ಸಂಬಂಽಸಿದ ೫೮ ಪ್ರಕರಣಗಳಲ್ಲಿ ಹೆಚ್ಚಿನವುಗಳು ಆನ್‌ಲೈನ್ ಮೂಲಕ ಇನ್‌ವೆಸ್ಟ್‌ಮೆಂಟ್ ಮಾಡಿ ಮೋಸ ಹೋದ ಪ್ರಕರಣಗಳಾಗಿದೆ. ನಾವು ಜಾಗೃತರಾಗಿದ್ದರೆ ನಮ್ಮ ಅಕೌಂಟಿನಿಂದ ಒಂದು ರೂಪಾಯಿ ಕೂಡಾ ಇನ್ನೊಬ್ಬರಿಗೆ ತೆಗೆಯಲು ಸಾಧ್ಯವಿಲ್ಲ. ಹಾಗಾಗಿ ಸ್ವಯಂ ಜಾಗೃತರಾಗಿರುವುದರಿಂದ ಮಾತ್ರ ಇಂತಹ ವಂಚನೆಗೊಳಗಾಗುವುದರಿಂದ ತಪ್ಪಿಸಿಕೊಳ್ಳಬಹುದಾಗಿದೆ.
-ರಿಷ್ಯಂತ್ ಸಿ.ಬಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

1930 ಕ್ಕೆ ಕರೆ ಮಾಡಿ
ಆನ್‌ಲೈನ್ ವಂಚಕರಿಗೆ ನೀವೇನಾದರೂ ಅಪ್ಪಿತಪ್ಪಿ ನಿಮ್ಮ ಬ್ಯಾಂಕ್ ಡಿಟೇಲ್ಸ್, ಒಟಿಪಿ ಅಥವಾ ಇನ್ಯಾವುದೇ ಮಾಹಿತಿ ನೀಡಿದ್ದೇ ಆದಲ್ಲಿ ತಕ್ಷಣವೇ 1930 ನಂಬರ್‌ಗೆ ಕರೆ ಮಾಡಬಹುದಾಗಿದೆ. ಕೂಡಲೇ ಕರೆ ಮಾಡುವುದರಿಂದ ಅಕೌಂಟ್ ಬ್ಲಾಕ್ ಮಾಡಲು ಸಾಧ್ಯವಾಗುತ್ತದೆ.

LEAVE A REPLY

Please enter your comment!
Please enter your name here