ಎ.24ಕ್ಕೆ ಕಲ್ಲಾರೆ ಶಿವಬ್ರಾಹ್ಮಣ ಸಮಾಜ ಸೇವಾ ಸಂಘದ “ಶಿವಕೃಪಾ ಸಭಾಭವನ” ಲೋಕಾರ್ಪಣೆ

0

ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರಿಂದ ಲೋಕಾರ್ಪಣೆ


ಪುತ್ತೂರು: ಶಿವಬ್ರಾಹ್ಮಣ (ಸ್ಥಾನಿಕ) ಸಮಾಜ ಸೇವಾ ಸಂಘ ಕಲ್ಲಾರೆ ಇದರ ಸುಸಜ್ಜಿತ ’ಶಿವಕೃಪಾ ಸಭಾಭವನ’ ಲೋಕಾರ್ಪಣೆಯು ಎ.24ರಂದು ನಡೆಯಲಿದ್ದು ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ನೂತನ ಸಭಾಭವನವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಶಿವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್.ಕೆ.ಜಗನ್ನಿವಾಸ ರಾವ್ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ಸುಮಾರು 800 ಆಸನಗಳ ಸೌಲಭ್ಯ ಇರುವ ಸುಸಜ್ಜಿತ ಸಭಾಭವನವನ್ನು ಸುಮಾರು ರೂ. ಒಂದೂವರೆ ಕೋಟಿ ವೆಚ್ಚದಲ್ಲಿ ಕಲ್ಲಾರೆಯ ಶಿವಬ್ರಾಹ್ಮಣ ಸಮಾಜ ಸೇವಾ ಸಂಘದ ನಿವೇಶನದಲ್ಲಿ ನಿರ್ಮಾಣ ಮಾಡಲಾಗಿದೆ. ಮದುವೆ, ಶುಭಾ ಕಾರ್ಯಗಳಿಗೆ ಸಭಾಭವನದ ಪ್ರಯೋಜವನ್ನು ಪಡೆಯಬಹುದು ಎಂದ ಅವರು ಶ್ರೀಗಳು ಎ.24ರಂದು ಸಂಜೆ ಗಂಟೆ 6.30ಕ್ಕೆ ಆಗಮಿಸಿ ಅವರ ಉಪಸ್ಥಿತಿಯಲ್ಲಿ ಧೂಳೀ ಪೂಜೆ ನಡೆಯಲಿದೆ. ಕಟ್ಟಡ ನಿರ್ಮಾಣ ಕರ್ತೃಗಳಿಗೆ ಸನ್ಮಾನ ನಡೆಯಲಿದೆ. ಬಳಿಕ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ಕೊನೆಗೆ ಭಕ್ತರಿಗೆ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಪಿ, ಕಾರ್ಯದರ್ಶಿ ಬಾಲಕೃಷ್ಣ ರಾವ್, ಕೋಶಾಧಿಕಾರಿ ಎನ್.ಎಸ್ ನಟರಾಜ, ಕಟ್ಟಡ ನಿರ್ಮಾಣ ಸಮಿತಿ ಸಂಚಾಲಕ ಅಶೋಕ ಕುಮಾರ ಉಪಸ್ಥಿತರಿದ್ದರು.

1936ರಲ್ಲಿ ಪುತ್ತೂರಿನಲ್ಲಿ ನಮ್ಮ ಸಮಾಜದ ಹಿರಿಯರಿಂದ ಸ್ಥಾಪನೆಗೊಂಡು ಸಮಾಜದ ಹಲವಾರು ವಿದ್ಯಾರ್ಥಿಗಳಿಗೆ ಸಮಾಜದ ಬಂಧುಗಳಿಗೆ ಸೇವೆ ಸಲ್ಲಿಸುತ್ತಾ ಬಂದಿದೆ. ಕಳೆದ 88 ವರ್ಷಗಳಲ್ಲಿ ಹಲವು ಹಿರಿಯರು ಸೇವೆ ಸಲ್ಲಿಸಿದ್ದಾರೆ. ದತ್ತಿ ವಿದ್ಯಾನಿಧಿ ಸ್ಥಾಪಿಸಿ ಅರ್ಹ ವಿದ್ಯಾರ್ಥಿಗಳಿಗೆ ಸಹಾಯ, ಪುತ್ತೂರಿನ ಕಲ್ಲಾರೆಯಲ್ಲಿರುವ ಒಂದು ಎಕ್ರೆ ಜಮೀನಿನಲ್ಲಿ ಅಂಗಡಿ ಕಟ್ಟಡವಿದೆ. ಇದೀಗ ಕಲ್ಲಾರೆಯ ನಿವೇಶನದಲ್ಲಿ ನೂತನ ಸಭಾಭವನ ಸಜ್ಜುಗೊಂಡಿದೆ. ಈ ಸಭಾಭವನಕ್ಕೆ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸನ್ನಿದಾನಂಗಳವರು ಶಿವಕೃಪಾ ಹೆಸರನ್ನು ಸೂಚಿಸಿದ್ದಾರೆ.
ಎನ್.ಕೆ ಜಗನ್ನಿವಾಸ ರಾವ್ ,ಅಧ್ಯಕ್ಷರು

LEAVE A REPLY

Please enter your comment!
Please enter your name here