ಕಾಣಿಯೂರು: ಹಳೆಯ ಮನೆಯಲ್ಲಿ ವಾಸ ಮಾಡುತ್ತಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಳಂದೂರು ಗ್ರಾಮದ ಅಗರಿಮೂಲೆ ಎಂಬಲ್ಲಿ ಚೂರಿಯಿಂದ ಇರಿದು ದೊಣ್ಣೆಯಿಂದ ಹಲ್ಲೆ ನಡೆಸಿರುವ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಗರಿ ಮೂಲೆ ನಿವಾಸಿ ಜಮೀಳಾ(40), ಆಕೆಯ ಪತಿ ಮಹಮ್ಮದ್(45) ಹಾಗೂ ಪುತ್ರಿ ಮುರ್ಶಿದಾ ಹಲ್ಲಗೆ ಒಳಗಾದವರು. ಹಳೆ ಮನೆಯಲ್ಲಿ ವಾಸವಾಗಿರುವುದನ್ನು ಆಕ್ಷೇಪಿಸಿ ಹೊರ ನಡೆಯುವಂತೆ ಬೆದರಿಸಿ ಜಮೀಳಾ ಅವರ ಸಹೋದರ ಹಮೀದ್ ಹಾಗೂ ಅತ್ತಿಗೆ ತಾಹಿರ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಜಮೀಳಾರವರ ತನ್ನ ಸಂಸಾರದೊಂದಿಗೆ ಕಳೆದ ಆರು ತಿಂಗಳಿಂದ ಆಕೆಯ ತಾಯಿ ಕುನ್ಯಾಲಿಯಮ್ಮ ಅವರ ಹಳೆಯ ಮನೆಯಲ್ಲಿ ವಾಸವಾಗಿದ್ದು , ಇದಕ್ಕೆ ಹಮೀದ್ ಹಾಗೂ ಆತನ ಪತ್ನಿ ತಾಹಿರಾ ಆಗಾಗ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಶುಕ್ರವಾರ ಸಂಜೆ ಜಮೀಳಾ ಹಾಗೂ ಆಕೆಯ ಪತಿ ಹಾಗೂ ಮಗಳನ್ನು ತಾಹಿರ ಅವರು ಹಳೆ ಮನೆಯಿಂದ ಬೇರೆ ಕಡೆಗೆ ಹೋಗುವಂತೆ ಹೇಳಿ ಜಮಿಳಾ ಅವರಿಗೆ ಚೂರಿಯಿಂದ ಎಡ ಕೈಗೆ ಇರಿದಿರುವುದಲ್ಲದೆ. ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಬಂದ ಮುರ್ಶಿದಳಿಗೂ ಹಲ್ಲೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ನೆರೆಕೆರೆಯವರು , ಕುನ್ಯಾಲಿಯಮ್ಮ ಹಾಗೂ ಅಪ್ಸ ಎಂಬುವರು ಹಲ್ಲೆ ಮಾಡಿದಂತೆ ತಡೆದಿರುತ್ತಾರೆ. ಇದೇ ವೇಳೆ ಮನೆಯ ಛಾವಣಿಯ ಸಿಮೆಂಟ್ ಶೀಟಿಗೆ ಕಲ್ಲು ಹೊಡದ ಪರಿಣಾಮ ಸಿಮೆಂಟ್ ಶೀಟ್ ಹಾನಿಯಾಗಿ ನಷ್ಟ ಉಂಟಾಗಿರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.