ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಸಿಸ್ಟರ್ ಟೆಸ್ಸಾ ಗೆ ಸನ್ಮಾನ

0

ನೆಲ್ಯಾಡಿ: ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಸನ್ಯಾಸ ವೃತ ಸ್ವೀಕರಿಸಿದ ವಂದನೀಯ ಭಗಿನಿ ಸಿಸ್ಟರ್ ಟೆಸ್ಸಾ ಇವರನ್ನು ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಸನ್ಮಾನಿಸಲಾಯಿತು.

ನೆಲ್ಯಾಡಿ, ಸನ್ನಂಪಾಡಿಯ ವಾಯಯಿಲ್ ಸಣ್ಣಿ ಮತ್ತು ಚಿನ್ನಮ್ಮ ದಂಪತಿಗಳ ಹಿರಿಯ ಪುತ್ರಿಯಾಗಿರುವ ಇವರು ಎಂಟು ವರ್ಷಗಳ ತರಬೇತಿಯನ್ನು ಮುಗಿಸಿ ಕೇರಳದ ಪೇರಾವೂರ್ ನ
ತೊಂಡಿಯ ಮಾತೃ ಆಶ್ರಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ ದಲ್ಲಿ ಪವಿತ್ರ ಹೃದಯದ ಸನ್ಯಾಸ ಬದುಕಿನ ದೀಕ್ಷೆಯನ್ನು ತಲಶೇರಿ ಮಹಾಧರ್ಮ ಪ್ರಾಂತ್ಯದ ಆರ್ಚ್ ಬಿಷಪ್ ಜೋಸೆಫ್ ಪಾಂಪ್ಲಾನಿ ನೀಡಿದ್ದರು. ಇಂದು ನೆಲ್ಯಾಡಿ ಅಲ್ಫೋನ್ಸ ಚರ್ಚ್ ವತಿಯಿಂದ ಸನ್ಮಾನ ಮಾಡಲಾಯಿತು. ಕಾಲವನ್ನು ಮೆಟ್ಟಿ ನಿಲ್ಲುವ ಆದ್ಯಾತ್ಮ ಶಕ್ತಿಯನ್ನು ಪಡೆದರೆ ಮಾತ್ರ ಸನ್ಯಾಸ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಂದನೀಯ ಫಾ. ಶಾಜಿ ಮ್ಯಾಥ್ಯೂ ತಮ್ಮ ಅಭಿನಂದನಾ ಸಂದೇಶದಲ್ಲಿ ತಿಳಿಸಿದರು. ಟ್ರಸ್ಟಿ ಗಳಾದ ಈಪನ್ ವರ್ಗೀಸ್, ಬಿಜು ಪೆರುoಪಲ್ಲಿ, ಜೋಬಿನ್ ಪರ ಪರಾಗತ್, ಸಿಸ್ಟೆರ್ ಲಿಸ್ ಮ್ಯಾಥ್ಯೂ ಎಸ್ ಎಚ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಜೆಸ್ಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here