ಎ.23-ಎ.24: ಪಾಲ್ತಾಡಿ ಚಾಕೋಟೆತ್ತಡಿ ದೈವಸ್ಥಾನದ ವರ್ಷಾವಧಿ ಜಾತ್ರೋತ್ಸವ

0

ಎ.23ರಂದು ಮುಗುರು ಮಲ್ಲಿಗೆ ಯಕ್ಷಗಾನ ಬಯಲಾಟ ,ಎ.24ರಂದು ದೈವಗಳ ನೇಮೋತ್ಸವ

ಸವಣೂರು : ಪಾಲ್ತಾಡಿ ಗ್ರಾಮದ ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದಲ್ಲಿ ಎ.22ರಿಂದ ಎ.24ರವರೆಗೆ ಶ್ರೀಧರ್ಮರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ವರ್ಷಾವಧಿ ಜಾತ್ರೋತ್ಸವ ನಡೆಯಲಿದೆ.

ಎ.22ರಂದು ಪೂರ್ವಾಹ್ನ ಮುಂಡ್ಯೆ ಆರೋಹಣ ನಡೆಯಿತು.ಎ.23ರಂದು ಬೆಳಿಗ್ಗೆ ತಳಿರು ತೋರಣ,ರಾತ್ರಿ ದೈವಗಳ ಭಂಡಾರ ತೆಗೆಯುವುದು,ಹೋಮ,ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ 9.30ಕ್ಕೆ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಇದರ  15ನೇ ವಾರ್ಷಿಕೋತ್ಸವದ ಅಂಗವಾಗಿ ಸಸಿಹಿತ್ಲು ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮಂಗಳೂರು ಇವರಿಂದ ಮುಗುರು ಮಲ್ಲಿಗೆ ತುಳು ಯಕ್ಷಗಾನ ಬಯಲಾಟ ನಡೆಯಲಿದೆ. ಈ ಸಂಧರ್ಭದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಅವರಿಗೆ ಸನ್ಮಾನ ನಡೆಯಲಿದೆ.

ಎ.24ರಂದು ಬೆಳಿಗ್ಗೆ 6.30ಕ್ಕೆ ಉಳ್ಳಾಕುಲು ದೈವದ ನೇಮ ನಡೆದು ಸಿರಿಮುಡಿ ಗಂಧಪ್ರಸಾದ,ನಂತರ ಕೊಳ್ಳಿ ಕುಮಾರ ದೈವದ ನೇಮ,ಮಹಿಷಂತಾಯ ದೈವದ ನೇಮ,ಕೊಡಮಣಿತ್ತಾಯ ದೈವದ ಒಲಸರಿ ನೇಮೋತ್ಸವ ನಡೆಯಲಿದೆ.ಮಧ್ಯಾಹ್ನ ಅನ್ನಸಂತರ್ಪಣೆ,ಪುರುಷ ದೈವದ ನೇಮೋತ್ಸವ ,ಪಂಜುರ್ಲಿ ದೈವದ ನೇಮೋತ್ಸವ ,ಸಂಜೆ ವ್ಯಾಘ್ರ ಚಾಮುಂಡಿ ದೈವದ ಒಲಸರಿ ನೇಮೋತ್ಸವ ನಡೆದು ರಾತ್ರಿ ಮುಂಡ್ಯೆ ಅವರೋಹಣ ನಡೆಯಲಿದೆ ಎಂದು ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದ ಗೌರವಾಧ್ಯಕ್ಷ ,ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು,ಅಧ್ಯಕ್ಷ ಸಂಜೀವ ಗೌಡ ಹಾಗೂ ಸಮಿತಿಯ ಪದಾಧಿಕಾರಿಗಳು ,ದೈವಸ್ಥಾನಕ್ಕೆ ಸಂಬಂಧಪಟ್ಟ ಆರುಮನೆಯ ಪ್ರಮುಖರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here