ಐಕ್ಯಂ ಅಕಾಡೆಮಿ ಆಫ್ ಆರ್ಟ್ಸ್‌ನಲ್ಲಿ ಕಲಾ ಶಿಬಿರ

0

ಪುತ್ತೂರು:ಇಲ್ಲಿನ ಎಪಿಎಂಸಿ ರಸ್ತೆಯ ಜೆಎಂಜೆ ಕಾಂಪ್ಲೆಕ್ಸ್‌ನ ಎರಡನೇ ಮಹಡಿಯಲ್ಲಿರುವ ಭರತನಾಟ್ಯ ಮತ್ತು ಚಿತ್ರಕಲಾ ತರಬೇತಿ ನೀಡುವ `ಐಕ್ಯಂ ಅಕಾಡೆಮಿ ಆಫ್ ಆರ್ಟ್ಸ್’ನಲ್ಲಿ ಶಿಕ್ಷಕಿ ನಿಖಿತಾ ಪಾಣಾಜೆಯವರ ನೇತೃತ್ವದಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರ ನಡೆಯಿತು.


ಮಕ್ಕಳು ವಿವಿಧ ಕಲಾ ಪ್ರಕಾರಗಳನ್ನು ಒಂದೇ ಶಿಬಿರದಲ್ಲಿ ಕಲಿಯಲು ಅನುಕೂಲವಾಗುವ ನಿಟ್ಟಿನಲ್ಲಿ ಕ್ಲೇ ಮಾಡಲಿಂಗ್, ಪ್ರಿಡ್ಜ್ ಮ್ಯಾಗ್ನೆಟ್, ವಾಟರ್‌ಕಲರ್ ಪೈಂಟಿಂಗ್, ಆಯುಲ್ ಪೇಸ್ಟಲ್ಸ್, ಲಿಪ್ಪನ್ ಆರ್ಟ್ಸ್, ಪೇಪರ್ ಕ್ರಾಫ್ಟ್‌ಗಳನ್ನು ಶಿಬಿರದಲ್ಲಿ ಮಕ್ಕಳಿಗೆ ಕಲಿಸಲಾಯಿತು.


ಕ್ಲೇ ಮಾಡೆಲಿಂಗ್‌ನ್ನು ಕಲಾವಿದ ಪ್ರಭು ಸ್ಟುಡಿಯೂದ ಶ್ರೀನಿವಾಸ್ ಪ್ರಭು, ವಾಟರ್ ಕಲರ್ ಪೈಂಟಿಂಗ್‌ನ್ನು ಗೌತಮ್ ಎಸ್ ಪುತ್ತೂರು, ಮಾಲಾ ಜ್ಯೋತೀಂದ್ರನ್ ಕಣ್ಣೂರು ಹಾಗೂ ಉಳಿದ ಕಲಾ ಪ್ರಕಾರಗಳನ್ನು ಆಶಿತ್ ಜೆ.ಎಸ್ ಹಾಗೂ ನಿಖಿತಾ ಪಾಣಾಜೆ ತರಬೇತಿ ನೀಡಿದರು. ಒಂದು ವಾರಗಳ ತನಕ ನಡೆದ ಶಿಬಿರದಲ್ಲಿ ಹಲವು ಮಂದಿ ವಿದ್ಯಾರ್ಥಿಗಳು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಿ ಸಂಸ್ಥೆಯ ಶಿಕ್ಷಕಿ ನಿಖಿತಾ ಪಾಣಾಜೆ ವಿದ್ಯಾರ್ಥಿಗಳಿಗೆ ಶುಭಕೋರಿ, ವಂದಿಸಿದರು.

LEAVE A REPLY

Please enter your comment!
Please enter your name here