ಕಲ್ಲಾರೆ: ಕಿಡ್ಸ್ ಸಮ್ಮರ್ ಗ್ರೋ ಸೀಸನ್ ಸೆಕೆಂಡ್ ಏ.25 ರಿಂದ ಪ್ರಾರಂಭ

0

ಪುತ್ತೂರು: ಕಲ್ಲಾರೆ ಜೆ ಕೆ ಸಂಕೀರ್ಣ ಇದರ ಮಹಡಿಯಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಟಿ ಡಿ ಎಸ್ ಸ್ಟುಡಿಯೋ ಇದರ ನೇತೃತ್ವದಲ್ಲಿ, ಡೋಮಿನೇಟರ್ಸ್ ಸ್ಟುಡಿಯೋ ಮತ್ತು ರಾಜ್ ಡ್ಯಾನ್ಸ್ ಕ್ರಿಯೇಷನ್ಸ್ ಅರ್ಪಿಸುವ ಪುಟಾಣಿ ಮಕ್ಕಳ ಕಾರ್ಯಕ್ರಮ ಕಿಡ್ಸ್ ಸಮ್ಮರ್ ಗ್ರೋ ಸೀಸನ್ ಸೆಕೆಂಡ್ ಮಕ್ಕಳ ಮತ್ತು ಪೋಷಕ ಒತ್ತಾಯದ ಮೇರೆಗೆ ಪುನರಾರಂಭವಾಗಲಿದೆ. ಏ. 25ರಿಂದ ಪ್ರಾರಂಭವಾಗಲಿರೋ ಮಕ್ಕಳ ಈ ಶಿಬಿರದಲ್ಲಿ ನುರಿತ ತಂಡದಿಂದ ಡಾನ್ಸ್, ಥಿಯೇಟರ್ ಡ್ರಾಮಾ, ಸಿಮ್ಮಿಂಗ್, ಸಿಂಗಿಂಗ್ ಅಂಡ್ ಮ್ಯೂಸಿಕ್, ಫಿಸಿಕಲ್ ಗೇಮ್ಸ್ ಮತ್ತು ಆರ್ಟ್ ಅ್ಯಂಡ್ ಕ್ರಾಫ್ಟ್ಸ್ ಬಗ್ಗೆ ತರಬೇತಿ ನಡೆಯಲಿದೆ.



ತರಬೇತಿಯೂ ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ನಡೆಯಲಿದ್ದು, ಮೇ.14 ರಂದು ಕೊನೆಯಾಗಲಿದೆ. ಮೊದಲು ನೋಂದಣಿ ಮಾಡಿಕೊಳ್ಳೋ ಮಕ್ಕಳಿಗೆ ಸುಮಾರು 20 ಶೇಕಡ ರಿಯಾಯಿತಿಯೂ ದೊರಕಲಿದೆ. ಭಾಗವಹಿಸುವ ಮಕ್ಕಳಿಗೆ ಸಂಸ್ಥೆಯಿಂದ ಪ್ರಮಾಣಪತ್ರವು ಕೂಡ ಸಿಗಲಿದ್ದು , 2024ರ ಡ್ಯಾನ್ಸ್ ವರ್ಲ್ಡ್ ಕಪ್ ನಲ್ಲಿ ಭಾಗವಹಿಸಲು ಅವಕಾಶ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ 7760915951 ಅಥವಾ 9740760873 ಸಂಖ್ಯೆ ಸಂಪರ್ಕಿಸುವಂತೆ ಸಂಸ್ಥೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here