ಕಡಬ: ಕ್ಯಾ.ಬ್ರಿಜೇಶ್‌ ಚೌಟ ಪರ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ರೋಡ್ ಶೋ

0

ಕಡಬ: ಬಿಜೆಪಿ ಬಹಿರಂಗ ಚುನಾವಣಾ ಪ್ರಚಾರ ಅಂಗವಾಗಿ ಕಡಬದಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ರೊಡ್ ಶೋ ನಡೆಸಿದರು.

ಕಡಬದ ಎಪಿಎಂಸಿ ಪ್ರಾಂಗಣ ಸಮೀಪದ ಗಣೇಶ್ ಬಿಲ್ಡ್ಂಗ್ ಬಳಿಯಿಂದ ಆರಂಭಗೊಂಡ ರೋಡ್‌ ಶೋ ಪೇಟೆಯಲ್ಲಿ ಸಾಗಿ ಮುಖ್ಯ ಪೇಟೆಯಲ್ಲಿ ಸಮಾಪನಗೊಂಡಿತು. ಹೆಲಿಕಾಪ್ಟರ್ ಮೂಲಕ ಆಗಮಿಸಿದ ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ, ದ.ಕ. ಬಿಜೆಪಿ ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಪರ ಮತಯಾಚನೆ ನಡೆಸಿದರು. ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಸಾಥ್ ನೀಡಿದರು.

LEAVE A REPLY

Please enter your comment!
Please enter your name here