ಪುತ್ತೂರು: ಬಾಲವನದ ಈಜುಕೊಳದಲ್ಲಿ ಅಕ್ವಾಟಿಕ್ ಕ್ಲಬ್‌ ನಿಂದ ಈಜು ತರಬೇತಿ ಶಿಬಿರ

0

ಪುತ್ತೂರು: ಪುತ್ತೂರು ಅಕ್ವಾಟಿಕ್ ಕ್ಲಬ್‌ನ ಈಜುಗಾರರು ಮತ್ತು ತರಬೇತುದಾರರಿಂದ ಅತ್ಯಂತ ಮಾಹಿತಿಯುಕ್ತ ಜೀವ ಉಳಿಸುವ ಪ್ರಾತ್ಯಕ್ಷಿಕೆಯೊಂದಿಗೆ ಬಾಲವನದ ಈಜುಕೊಳದಲ್ಲಿ ನಡೆದ ಬೇಸಿಗೆ ಈಜು ಶಿಬಿರವು ಏ.21ರಂದು ಯಶಸ್ವಿಯಾಗಿ ಪೂರ್ಣಗೊಂಡಿತು.

ಪ್ರತಿ ವರ್ಷದಂತೆ ಈ ವರ್ಷವೂ ಡಾ.ಶಿವರಾಮ ಬಾಲವನ ಈಜುಕೊಳದಲ್ಲಿ ಬೇಸಿಗೆ ಈಜು ಶಿಬಿರ ನಡೆಯಿತು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಈಜು ಮತ್ತು ಜಲಸೇವಕ ಪಾಠಗಳನ್ನು ಕಲಿಯಲು ರಾಜ್ಯದ ವಿವಿಧ ಭಾಗದಿಂದ ನೂರಾರು ಆರಂಭಿಕರು ಶಿಬಿರದಲ್ಲಿ ಭಾಗವಹಿಸಿದ್ದರು. ದೇಶದಲ್ಲಿ ಮೊದಲನೆಯದ್ದು ಎನ್ನಲಾದ ದೀರ್ಘಾವಧಿಯ ಅಥ್ಲೀಟ್ ಅಭಿವೃದ್ಧಿ ತರಬೇತಿ ವಿಧಾನದೊಂದಿಗೆ ಈಜು ಕಲಿಕೆ ಮತ್ತು ನೀರಿನ ಸುರಕ್ಷತೆಯ ಪಾಠವನ್ನು ಶಿಬಿರದಲ್ಲಿ ಭೋದಿಸಲಾಯಿತು. 15 ಈಜು ಶಿಕ್ಷಕರೊಂದಿಗೆ ಏ.2 ರಂದು ಆರಂಭಗೊಂಡ ಈಜು ಶಿಬಿರವು ಏ.21ರಂದು ಪೂರ್ಣಗೊಂಡಿತು.

ಭಾಗವಹಿಸಿದ ಎಲ್ಲರಿಗೂ ಮುಳುಗುತ್ತಿರುವ ಸಂತ್ರಸ್ತರನ್ನು ರಕ್ಷಿಸುವ ಜೀವರಕ್ಷಕ ಕೌಶಲ್ಯಗಳ ನೇರ ಪ್ರದರ್ಶನವನ್ನು ನೀಡಲಾಯಿತು. ಹಗ್ಗಗಳು, ತೇಲುವ ಟ್ಯೂಬ್‌ಗಳು ಮತ್ತು ಇತರ ತೇಲುವ ಸಾಧನಗಳನ್ನು ಬಳಸಿಕೊಂಡು ಮುಳುಗುತ್ತಿರುವವರನ್ನು ಹೇಗೆ ರಕ್ಷಿಸಬಹುದು ಎಂಬುದನ್ನು ಈಜುಗಾರರು ತೋರಿಸಿಕೊಟ್ಟರು. ತರಬೇತಿ ಪಡೆದ ಎಲ್ಲರಿಗೂ ಪ್ರಮಾಣಪತ್ರವನ್ನು ನೀಡಲಾಯಿತು. ಮುಂದಿನ ಶಿಬಿರವು ಏ.23 ರಿಂದ 15 ದಿನಗಳ ಕಾಲ ನಡೆಯಲಿದೆ.

LEAVE A REPLY

Please enter your comment!
Please enter your name here