ಪುತ್ತೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಹಲವು ವರ್ಷಗಳಿಂದ ವಿವಿಧ ಉದ್ಯಮ ನಡೆಸುತ್ತಿರುವ ರಾಯಲ್ ಗ್ರೂಪ್ ಬೆಂಗಳೂರು ನಗರದ 20 ನಗರಗಳಲ್ಲಿ ತನ್ನ ಸಹ ಸಂಸ್ಧೆಗಳನ್ನು ಹೊಂದಿದೆ. ಏ.26 ರಂದು ನಡೆಯುವ ಲೊಕಸಭಾ ಚುಣಾವಣೆಯಲ್ಲಿ ಮತದಾನ ಮಾಡಲು ರಾಯಲ್ ಗ್ರೂಪಿನಲ್ಲಿ ಉದ್ಯೊಗದಲ್ಲಿರುವ 400ಕ್ಕೂ ಅಧಿಕ ಸಿಬ್ಬಂದಿಗಳಿಗೆ ಮತದಾನ ಮಾಡುವ ಸಲುವಾಗಿ ರಾಯಲ್ ಗ್ರೂಪ್ ತನ್ನ ಎಲ್ಲಾ ಸಂಸ್ಧೆಗಳಿಗೆ ರಜೆಯನ್ನು ಘೋಷಿಸಿದೆ.

ಇದಲ್ಲದೆ ಮತದಾನಕ್ಕೆ ತೆರಳಲು ಬೆಂಗಳೂರಿನಿಂದ ದ.ಕ, ಉಡುಪಿ, ಕೊಡಗು, ಲೋಕಸಭಾ ಕ್ಷೇತ್ರಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿದ್ದು, ಏ.25ರಂದು ರಾತ್ರಿ ಬೆಂಗಳೂರಿನಿಂದ ಬಸ್ ಹೊರಡಲಿದೆ. ಏ.26ರಂದು ಸಂಜೆ ಬೆಂಗಳೂರಿಗೆ ಹಿಂದಿರುಗಲಿದೆ. ಯಾರೂ ಕೂಡ ಮತದಾನದಿಂದ ದೂರ ಉಳಿಯದೆ ಏ.24 ರ ಒಳಗಾಗಿ ತಮ್ಮ ಹೆಸರು ಮತ್ತು ಮೊಬೈಲ್ ನಂಬರನ್ನು ಸಂಬಂಧಪಟ್ಟವರಿಗೆ ನೀಡುವಂತೆ ರಾಯಲ್ ಗ್ರೂಪ್ ಪ್ರಕಟಣೆಯಲ್ಲಿ ತಿಳಿಸಿದೆ. ಅಶ್ರಫ್ ರಾಯಲ್ 8971112933, ಇರ್ಶಾದ್ ರಾಯಲ್ 9845344958 ಮತ್ತು ಖಲೀಲ್ ರಾಯಲ್ 9743407166 ಈ ನಂಬರ್ ಗೆ ಕರೆ ಮಾಡಿ ಹೆಸರನ್ನು ಮತ್ತು ಮೊಬೈಲ್ ನಂಬರ್ ನೀಡಿ ಸೀಟು ಕಾಯ್ದಿರಿಸಿಕೊಳ್ಳಬಹುದಾಗಿದೆ.