ಪುತ್ತೂರು: ಕಬಕ ಗ್ರಾಮದ ಪದ್ನಡ್ಕದಲ್ಲಿ ಬಿಜೆಪಿ ಕಾರ್ಯಕರ್ತರು ಸಾಮೂಹಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರ ಪಕ್ಷದ ಧ್ವಜ ನೀಡಿ, ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು. ಕಾಂಗ್ರೆಸ್ ಮುಖಂಡೆ ಜಾನಕಿಯವರ ನೇತೃತ್ವದಲ್ಲಿ ಆಪರೇಷನ್ ಹಸ್ತ ನಡೆದಿತ್ತು. ಈ ಭಾಗದ ಜನರು ಅನೇಕ ವರ್ಷಗಳಿಂದ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದರೂ ಯಾವೊಬ್ಬ ಜನಪ್ರತಿನಿಧಿಯೂ ಅವರ ಸಮಸ್ಯೆಯನ್ನು ಆಲಿಸಲು ಬಂದಿರಲಿಲ್ಲ. ಶಾಸಕ ಅಶೋಕ್ ರೈ ಅವರು ಇಲ್ಲಿನ ನಿವಾಸಿಗಳನ್ನು ಭೇಟಿಯಾಗಿ ಸಮಸ್ಯೆ ಪರಿಹರಿಸುವ ಭರವಸೆಯನ್ನು ನೀಡಿದ್ದರು. ಶಾಸಕರ ಕಾರ್ಯವೈಖರಿಯನ್ನು ಮೆಚ್ಚಿ ಸುಮಾರು 15 ಮನೆಗಳ ಎಲ್ಲಾ ಸದಸ್ಯರು ಪಕ್ಷಕ್ಕೆ ಸೇರ್ಪಡೆಯಾದರು. ಸ್ಥಳೀಯರಾದ ರಾಮಕ್ಕ, ಜಾನಕಿ, ವಸಂತಿ, ಕಮಲ, ತುಕುರು, ರಕ್ಷಿತಾ, ಬಾಬು ಗೌಡ, ಲಿಖಿತ್, ಪೂವಪ್ಪ, ಮಾಂಕು, ರೋಹಿಣಿ, ಕಾಂತು, ತಿಮ್ಮಪ್ಪ, ಬಾಗಿ, ಮೋಹಿನಿ, ರಮೇಶ, ಚಂದ್ರಶೇಖರ, ತುಕ್ರಮೊಗೇರ, ಸೇರಿದಂತೆ ಸುಮಾರು 25 ಮಂದಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ವಲಯ ಅಧ್ಯಕ್ಷ ದಾಮೋದರ, ಬೂತ್ ಅಧ್ಯಕ್ಷ ಆದಂ ಕೆದುವಡ್ಕ, ರಶೀದ್ ಮುರ, ಗ್ರಾಪಂ ಸದಸ್ಯ ಸಾಬ, ನಳಿನಿ ನಗರ , ಉಷಾ, ಸುಮಯ್ಯ ಕಬಕ, ಜಿನ್ನಪ್ಪ ಪೂಜಾರಿ ಮುರ, ಅನ್ವರ್ ಕಬಕ, ಖಾದರ್ ಕಬಕ, ಶರೀಫ್ ಪೋಳ್ಯ, ಅಣ್ಣುಪೋಳ್ಯ,ಶೋಭಾ ಮತ್ತಿತರರು ಉಪಸ್ಥಿತರಿದ್ದರು.