ವಿದೇಶದಿಂದ ಕುಟುಂಬದೊಂದಿಗೆ ಬಂದು ಮತದಾನ ಮಾಡಿದ ಅಮ್ಜದ್ ಖಾನ್ ಪೋಳ್ಯ

0

ಪುತ್ತೂರು: ಕಮ್ಯೂನಿಟಿ ರೀಸರ್ಚ್ ಆಂಡ್ ಡೆವಲಪ್‌ಮೆಂಟ್ ಸೆಂಟರ್‌ನ ಚೇರ್‌ಮೆನ್ ಅಮ್ಜದ್ ಖಾನ್ ಪೋಳ್ಯ ಅವರು ಸೌದಿ ಅರೇಬಿಯಾದ ದಮ್ಮಾಮ್‌ನಿಂದ ಮತದಾನ ಮಾಡಲೇಂದೇ ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸುವ ಮೂಲಕ ಮಾದರಿಯಾಗಿದ್ದಾರೆ. ಮುರ ಸರಕಾರಿ ಶಾಲೆಯ ಬೂತ್ ಸಂಖ್ಯೆ 206ಕ್ಕೆ ತೆರಳಿ ಅವರು ಮತ ಚಲಾಯಿಸಿದ್ದಾರೆ.


ಅಮ್ಜದ್ ಖಾನ್ ಅವರು ತನ್ನ ತಾಯಿ, ಪತ್ನಿ ಹಾಗೂ ಕುಟುಂಬದ ಇತರ ಸದಸ್ಯರೊಂದಿಗೆ ಊರಿಗೆ ಆಗಮಿಸಿ ಮತದಾನ ಮಾಡಿದ್ದಾರೆ. ಒಟ್ಟು ಏಳು ಮಂದಿ ಮತದಾನ ಮಾಡಿದ್ದು ಅದರಲ್ಲಿ ಅಮ್ಜದ್ ಖಾನ್ ಅವರ ಪುತ್ರ ಮುಹಮ್ಮದ್ ನೆಹಾನ್ ಅವರು ತಮ್ಮ ಪ್ರಥಮ ಮತವನ್ನು ಚಲಾಯಿಸಿದರು.

ಮತದಾನ ಪ್ರತಿಯೊಬ್ಬರ ಹಕ್ಕಾಗಿದ್ದು ಅದನ್ನು ಚಲಾಯಿಸುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಅದರ ಮಹತ್ವ ಅರಿತು ವಿದೇಶದಿಂದ ಬಂದು ಮತ ಚಲಾಯಿಸಿದ್ದೇವೆ ಎಂದು ಅಮ್ಜದ್ ಖಾನ್ ಪೋಳ್ಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here