ಪುತ್ತೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿಯವರು ಸುಮಾರು 50 ಸಾವಿರ ಮತಗಳ ಅಂತರದಲ್ಲಿ ಗೆದ್ದೇ ಗೆಲ್ಲುತ್ತಾರೆ ಎಂಬ ಪೂರ್ಣ ವಿಶ್ವಾಸವಿದ್ದು, ಈ ಹಿಂದೆ ನಡೆದ ಚುನಾವಣೆಗಿಂತ ಭಿನ್ನವಾಗಿ ಈ ಬಾರಿ ಚುನಾವಣೆ ನಡೆದಿದೆ ಮತ್ತು ವ್ಯಕ್ತಿ ಪೂಜೆ ಈ ಚುನಾವಣೆಯಲ್ಲಿ ಕೆಲಸ ಮಾಡಲಿಲ್ಲ ಎಂದು ಕೆಪಿಸಿಸಿ ಸಂಯೋಜಕರೂ, ಚುನಾವಣಾ ಪ್ರಚಾರ ಉಸ್ತುವಾರಿ ಸಮಿತಿ ಅಧ್ಯಕ್ಷರೂ ಆದ ಕಾವು ಹೇಮನಾಥ ಶೆಟ್ಟಿ ಅಭಿಪ್ರಾಯಿಸಿದ್ದಾರೆ.
ಪುತ್ತೂರಿನಲ್ಲಿ ಈ ಬಾರಿ ಕಾಂಗ್ರೆಸ್ ಒಂದು ಮತವಾದರೂ ಲೀಡ್ ಪಡೆಯುತ್ತದೆ. ಪುತ್ತೂರು ಶಾಸಕ ಅಶೋಕ್ ರೈ ಅವರ ಅಭಿವೃದ್ದಿ ಕಾರ್ಯ, ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿ ಯೋಜನೆ ಮತ್ತು ಶಾಸಕರ ಬಡವರ ಮೇಲಿನ ಪ್ರೀತಿ, ಸಹಕಾರ ಇದೆಲ್ಲವೂ ಈ ಚುನಾವಣೆಯಲ್ಲಿ ಕೆಲಸ ಮಾಡಿದೆ. ಭ್ರಷ್ಟಾಚಾರ ರಹಿತವಾದ ಶಾಸಕರ ಕಾರ್ಯವೈಖರಿ ಜನರನ್ನು ಸಂತುಷ್ಠರನ್ನಾಗಿಸಿದೆ. ಈ ಕಾರಣಕ್ಕೆ ಈ ಬಾರಿ ಪುತ್ತೂರಿನಲ್ಲಿ ಕಾಂಗ್ರೆಸ್ ಲೀಡ್ ಪಡೆಯುತ್ತದೆ ಎಂಬ ವಿಶ್ವಾಶ ನಮಗಿದೆ.
ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ, ಬಿಜೆಪಿಯಲ್ಲಿ ಬಣ ಹುಟ್ಟಿಕೊಂಡಿದೆ ಇವರೊಳಗಿನ ಕಚ್ಚಾಟವೂ ನಮಗೆ ಲಾಭವಾಗಿದೆ ಮತ್ತು ಕಾಂಗ್ರೆಸ್ನ ಪದ್ಮರಾಜ್ ಅವರ ಪರ ಕಾಂಗ್ರೆಸ್ ಒಗ್ಗಟ್ಟಾಗಿ ಕೆಲಸ ಮಾಡಿರುವುದು ನಮ್ಮ ಅಭ್ಯರ್ಥಿಯ ಗೆಲುವಿಗೆ ಒಂದು ವರದಾನವಾಗಿದೆ. ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ , ರಾಜ್ಯದಲ್ಲಿ 19 ರಿಂದ 24 ಸ್ಥಾನ ಗೆದ್ದೇ ಗೆಲ್ಲುತ್ತೇವೆ.