ಉಪ್ಪಿನಂಗಡಿ: ಕಾಂಗ್ರೆಸ್ ಪಕ್ಷವು ರಾಜಕೀಯಕ್ಕಾಗಿ ಧರ್ಮ- ಧರ್ಮಗಳನ್ನ ಒಡೆಯುವ ಕೆಲಸ ಈ ಮೊದಲೇ ಮಾಡಿದೆ. ಈ ಬಾರಿ ಮಂಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ನವರು ಜಾತಿ- ಜಾತಿಗಳನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನೋಡಿದರೂ, ಅದು ಅವರಿಗೆ ಯಾವುದೇ ಫಲಪ್ರದ ನೀಡಿಲ್ಲ. ಬಿಜೆಪಿಯ ಮೇಲೆ, ದೇಶದ ಮೇಲೆ ಅಭಿಮಾನವುಳ್ಳವರು ಬಿಜೆಪಿಗೆ ಓಟು ಹಾಕುವ ಕೆಲಸ ಮಾಡಿದ್ದಾರೆ. ಈಗಿನ ವಾತಾವರಣ ಹೇಗಿದೆಯೆಂದರೆ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಜಯಭೇರಿ ಬಾರಿಸಲಿದ್ದು, ದೇಶದಲ್ಲಿ ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಲಿದ್ದಾರೆ.
ಸುನೀಲ್ ಕುಮಾರ್ ದಡ್ಡು
ಅಧ್ಯಕ್ಷರು, ಬಿಜೆಪಿ ಒಬಿಸಿ ಮೋರ್ಚಾ
ಪುತ್ತೂರು ಗ್ರಾಮಾಂತರ ಮಂಡಲ