ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್ ವತಿಯಿಂದ ಸಿ| ಟೆಸ್ಸಾಗೆ ಸನ್ಮಾನ

0

ನೆಲ್ಯಾಡಿ: ಸನ್ಯಾಸ ವೃತ ಸ್ವೀಕರಿಸಿದ ಸಿ| ಟೆಸ್ಸಾ ಅವರನ್ನು ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್ ವತಿಯಿಂದ ಸನ್ಮಾನಿಸಲಾಯಿತು.
ಸಣ್ಣಂಪಾಡಿಯ ವಾಯಯಿಲ್ ಸಣ್ಣಿ ಮತ್ತು ಚಿನ್ನಮ್ಮ ದಂಪತಿಯ ಪುತ್ರಿಯಾಗಿರುವ ಟೆಸ್ಸಾ ಅವರು ಎಂಟು ವರ್ಷಗಳ ತರಬೇತಿಯನ್ನು ಮುಗಿಸಿ ಕೇರಳದ ಪೇರಾವೂರ್ ನತೊಂಡಿಯ ಮಾತೃ ಆಶ್ರಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪವಿತ್ರ ಹೃದಯದ ಸನ್ಯಾಸ ಬದುಕಿನ ದೀಕ್ಷೆಯನ್ನು ತಲಶೇರಿ ಮಹಾ ಧರ್ಮ ಪ್ರಾಂತ್ಯದ ಆರ್ಚ್ ಬಿಷಪ್ ಜೋಸೆಫ್ ಪಾ೦ಪ್ಲಾನಿ ಅವರಿಂದ ಸ್ವೀಕರಿಸಿದ್ದರು. ನೆಲ್ಯಾಡಿ ಅಲ್ಫೋನ್ಸಾ ಚರ್ಚ್‌ನಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಧರ್ಮಗುರುಗಳಾದ ಫಾ.ಶಾಜಿ ಮ್ಯಾಥ್ಯು ಅವರು, ಕಾಲವನ್ನು ಮೆಟ್ಟಿ ನಿಲ್ಲುವ ಆಧ್ಯಾತ್ಮ ಶಕ್ತಿಯನ್ನು ಪಡೆದರೆ ಮಾತ್ರ ಸನ್ಯಾಸ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಹೇಳಿದರು. ಟ್ರಸ್ಟಿಗಳಾದ ಈಪನ್ ವರ್ಗೀಸ್, ಬಿಜು ಪೆರುಪಲ್ಲಿ, ಜೋಬಿನ್ ಪರ ಪರಾಗತ್, ಸಿ| ಲಿಸ್ ಮಾಥ್ಯು ಎಸ್.ಎಚ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಜೆಸ್ಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here