ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘಕ್ಕೆ ರೂ. 1.50 ಕೋಟಿ ಲಾಭ

0

ಪುತ್ತೂರು: ಸತತ 2ನೇ ಭಾರಿ ದ.ಕ.ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಸಾಧನಾ ಪ್ರಶಸ್ತಿ ಪುರಸ್ಕೃತಗೊಂಡ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು ರೂ. 542 ಕೋಟಿ ವ್ಯವಹಾರ ಮಾಡಿ ಶೆ.99.12 ಸಾಲ ವಸೂಲಾತಿ ಮಾಡಿಕೊಂಡು ರೂ. 1.50 ಕೋಟಿ ನಿವ್ವಳ ಲಾಭ ಗಳಿಸಿದೆ.


ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ 2002ರಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು ಪ್ರಾರಂಭಗೊಂಡು ಎಪಿಎಂಸಿ ರಸ್ತೆ ಬಳಿಯ ಮಣಾಯಾರ್ಚ್ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪುತ್ತೂರು ಎಪಿಎಂಸಿ ರಸ್ತೆ ಶಾಖೆ, ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಆಲಂಕಾರು, ಪುತ್ತೂರು ಎಸ್‌ಎಮ್‌ಟಿ ಕಾಣಿಯೂರು ಮತ್ತು ಬೆಳ್ಳಾರೆ ಶಾಖೆಯನ್ನು ಹೊಂದಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಗ್ರಗಣ್ಯ ಕ್ರೆಡಿಟ್ ಸೊಸೈಟಿಗಳಲ್ಲೊಂದಾಗ ಸಂಘವು 2023-24ನೇ ಸಾಲಿನಲ್ಲಿ 542 ಕೋಟಿ ವ್ಯವಹಾರ ಮಾಡಿ 2022 -23ನೇ ಸಾಲಿಗಿಂತ 142 ಕೋಟಿ ಪ್ರಗತಿಯನ್ನು ಸಾಧಿಸಿದೆ. ಪ್ರಸ್ತುತ ಸಾಲಿನಲ್ಲಿ ಸುಮಾರು ರೂ. 77 ಕೋಟಿ ಸಾಲವನ್ನು ನೀಡಿ ಶೇ.99.12 ಸಾಲ ವಸೂಲಾತಿಯನ್ನು ಮಾಡಿದೆ. ಸಂಘವು ವರ್ಷಾಂತ್ಯಕ್ಕೆ ರೂ. 1,50,00,000 ಲಾಭಾಂಶವನ್ನು ಪಡೆದು ತನ್ನ ಎಲ್ಲಾ ಕಾರ್ಯ ವೈಖರಿಯಲ್ಲಿ ಗುರಿ ಮೀರಿದ ಪ್ರಗತಿಯನ್ನು ಮಾಡಿದೆ. ಠೇವಣಾತಿ ಮತ್ತು ಸಾಲದಲ್ಲಿ 22-23ನೇ ಸಾಲಿಗಿಂತ 23-24ನೇ ಸಾಲಿಲ್ಲಿ ಶೇ.36 ರಷ್ಟು ಪ್ರಗತಿಯನ್ನು ಸಾಧಿಸಿದೆ. ಸಂಘವು ಒಟ್ಟು ಸುಮಾರು 7ಸಾವಿರ ಸದಸ್ಯರನ್ನು ಹೊಂದಿದ್ದು, ಒಟ್ಟು ವರ್ಷಾಂತ್ಯಕ್ಕೆ 104 ಕೋಟಿ ಠೇವಣಿಗಳನ್ನು ಮತ್ತು 99 ಕೋಟಿ ಸಾಲವನ್ನು ಹೊಂದಿದೆ. ಸಮಾಜದ ಎಲ್ಲಾ ವರ್ಗದ ಜನರನ್ನು ಹೊಂದಿಸುವ ದೃಷ್ಟಿಯಿಂದ 10ನೇ ಶಾಖೆಯನ್ನು ವಿಟ್ಲದಲ್ಲಿ ಶೀಘ್ರದಲ್ಲಿ ತೆರೆಯುವುದಾಗಿ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.

ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ

ಸಂಘದ ಎಲ್ಲಾ ಶಾಖೆಗಳಲ್ಲಿ ಹವಾನಿಯಂತ್ರಿಣ ಮತ್ತು ಸಿಸಿ ಕ್ಯಾಮರ ಅಳವಡಿಸಲಾಗಿದೆ. ಶಾಖೆಗಳಲ್ಲಿ ಸಿಬ್ಬಂದಿಗಳ ನಗುಮುಖದ ಮತ್ತು ಶೀಘ್ರ ಸೇವೆಗಳನ್ನು ನೀಡಲಾಗಿದ್ದು, ವಿವಿಧ ರೀತಿಯ ಸಾಲಗಳನ್ನು ಗ್ರಾಹಕರಿಗೆ ನೀಡಾಗುತ್ತದೆ. ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆಯನ್ನು ಮಾಡಲು ಸಾಲಗಾರ ಸದಸ್ಯರುಗಳ ಸಹಕಾರ ಆಡಳಿತ ಮಂಡಳಿಯ ಸೂಕ್ತ ಮಾರ್ಗದರ್ಶನ, ಸಲಹಾ ಸಮಿತಿ ಸದಸ್ಯರ ಸಹಕಾರ ಮತ್ತು ಸಿಬ್ಬಂದಿಗಳ ಪ್ರಾಮಾಣಿಕತೆ, ಕಾರ್ಯಧಕ್ಷತೆಯಿಂದ ಸಾಧನೆಯನ್ನು ಮಾಡಿದೆ. ಮುಂದೆಯೂ ಇನ್ನಷ್ಟು ಪ್ರಗತಿ ಪಥದಲ್ಲಿ ಮುನ್ನಡೆಸಲು ಸಹಕಾರ ಬೇಕಾಗಿದೆ. ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ ಜೊತೆಗಿದ್ದರು.

LEAVE A REPLY

Please enter your comment!
Please enter your name here