ಕ್ಯಾಂಪ್ಕೋದ ವ್ಯವಸ್ಥಾಪಕ ನಿರ್ದೇಶಕರಾಗಿ ಡಾ| ಬಿ.ವಿ.ಸತ್ಯನಾರಾಯಣ ನೇಮಕ

0

ಮಂಗಳೂರು: ಪ್ರತಿಷ್ಠಿತ ಬಹುರಾಜ್ಯ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೊದ ವ್ಯವಸ್ಥಾಪಕ ನಿರ್ದೇಶಕರಾದ ಹೆಚ್.ಎಮ್.ಕೃಷ್ಣಕುಮಾರ್ ಅವರ ಅಧಿಕಾರ ಅವಧಿ ಏ. 30ಕ್ಕೆ ಕೊನೆಗೊಂಡಿದ್ದು ಮೇ 1 ರಿಂದ ಅನ್ವಯವಾಗುವಂತೆ ಡಾ| ಬಿ.ವಿ. ಸತ್ಯನಾರಾಯಣ ಅವರನ್ನು ನೂತನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.


ಕಳೆದ 50 ವರ್ಷಗಳಿಂದ ರೈತರ ಹಿತರಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವ ಕ್ಯಾಂಪ್ಕೊದ ಆಡಳಿತ ಮಂಡಳಿಯು, 23.04.2024ರಲ್ಲಿ ನಡೆದ ತನ್ನ ಮಂಡಳಿ ಸಭೆಯಲ್ಲಿ ಸಂಸ್ಥೆಯನ್ನು ಮುನ್ನಡೆಸುವ ಮಹತ್ತರ ಜವಾಬ್ದಾರಿಯನ್ನು ಡಾ| ಬಿ.ವಿ.ಸತ್ಯನಾರಾಯಣ ಅವರಿಗೆ ವಹಿಸುವ ನಿರ್ಣಯವನ್ನು ಅವಿರೋಧವಾಗಿ ತೆಗೆದುಕೊಂಡಿದೆ.


ಡಾ| ಸತ್ಯನಾರಾಯಣ ಅವರು ಈ ಮೊದಲು ಕೆ.ಎಮ್.ಎಫ್.ನ ಘಟಕವಾದ ಬೆಂಗಳೂರಿನ ಮದರ್ ಡೈರಿಯ ನಿರ್ದೇಶಕರಾಗಿ,ಕೆ.ಎಮ್.ಎಫ್ ನ ಜಂಟಿ ನಿರ್ದೇಶಕರಾಗಿ,ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತು ಐಡಿಯಲ್ ಐಸ್‌ಕ್ರೀಮ್‌ನ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷರಾಗಿ ಉದ್ಯಮ ಕ್ಷೇತ್ರದಲ್ಲಿ ಅಗಾಧ ಜ್ಞಾನವನ್ನು ಹೊಂದಿರುತ್ತಾರೆ. ಇದೇ ಜನವರಿಯಿಂದ ಅವರನ್ನು ಕ್ಯಾಂಪ್ಕೋದ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಿಸಿಕೊಳ್ಳಲಾಗಿತ್ತು ಎಂದು ಕ್ಯಾಂಪ್ಕೋ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಮತ್ತು ಆಡಳಿತ ಮಂಡಳಿಯವರು ನೂತನವಾಗಿ ಆಯ್ಕೆಯಾದ ವ್ಯವಸ್ಥಾಪಕ ನಿರ್ದೇಶಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಕ್ಯಾಂಪ್ಕೊಗೆ ಸಂಬಂಧಿಸಿದ ಎಲ್ಲಾ ವಿಷಯಗಳಿಗೆ ಡಾ. ಸತ್ಯನಾರಾಯಣ ಅವರನ್ನು ದೂರವಾಣಿ ಸಂಖ್ಯೆ 0824- 2425866/2888220/2888218ಹಾಗೂ ಇಮೇಲ್ ಐಡಿ md@campco.org ಮೂಲಕ ಸಂಪರ್ಕಿಸಬಹುದು ಎಂದು ಅಧ್ಯಕ್ಷ ಎ. ಕಿಶೋರ್ ಕೊಡ್ಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here