ಸುಬ್ರಹ್ಮಣ್ಯ:ಸಿಡಿಲು ಬಡಿದು ನವವಿವಾಹಿತ ಯುವಕನ ದಾರುಣ ಸಾವು-15 ದಿನಗಳ ಹಿಂದೆಯಷ್ಟೆ ವೈವಾಹಿಕ ಬದುಕಿಗೆ ಕಾಲಿರಿಸಿದ್ದ ಸೋಮಸುಂದರ್

0

ಪುತ್ತೂರು:ಹದಿನೈದು ದಿನಗಳ ಹಿಂದೆಯಷ್ಟೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ನವವಿವಾಹಿತ ಯುವಕ ಸಿಡಿಲು ಬಡಿದು ಸಾವಿಗೀಡಾದ ದಾರುಣ ಘಟನೆ ಕಡಬ ತಾಲೂಕು ಸುಬ್ರಹ್ಮಣ್ಯದಲ್ಲಿ ನಡೆದಿದೆ.
ಮೇ3ರ ಸಂಜೆ ಘಟನೆ ನಡೆದಿದೆ.ಸುಬ್ರಹ್ಮಣ್ಯ ಗ್ರಾಮದ ಪರ್ವತಮುಖಿ ನಿವಾಸಿ ಸೋಮಸುಂದರ್(34ವ.)ಮೃತ ಪಟ್ಟವರು.ಸಂಜೆ ಸುಬ್ರಹ್ಮಣ್ಯ ಪರಿಸರದಲ್ಲಿ ಮಳೆ ಆರಂಭಕ್ಕೂ ಮೊದಲು ಗಾಳಿ, ಗುಡುಗು ಆರಂಭಗೊಂಡಿತ್ತು.

ಈ ವೇಳೆ, ಮನೆಯಂಗಳದಲ್ಲಿ ಒಣಗಿಸಲು ಹಾಕಲಾಗಿದ್ದ ಅಡಿಕೆಯನ್ನು ಸೋಮಸುಂದರ್ ಅವರು ರಾಶಿ ಮಾಡುತ್ತಿದ್ದ ವೇಳೆ ಸಿಡಿಲು ಬಡಿದಿದೆ.ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು.

ಸುಬ್ರಹ್ಮಣ್ಯ ಗ್ರಾಮದ ಹೊಸೋಳಿಕೆ ಪರ್ವತ ಮುಖಿ ದಿ.ಸಾಂತಪ್ಪ ಗೌಡರ ಮಗ ಸೋಮಸುಂದರ(ಸುಬ್ರಹ್ಮಣ್ಯ)ಅವರು ಪರ್ವತಮುಖಿ ಬಳಿ ದೇವಿಕಾ ಕಾರ್ ವಾಷಿಂಗ್ ಉದ್ಯಮ ನಡೆಸಿಕೊಂಡಿದ್ದರು.ಹರಿಹರಪಲ್ಲತ್ತಡ್ಕ ಗ್ರಾಮದ ಚೂಂತಾರು ಕುಕ್ಕುಂದಡ್ಕ ಧರ್ಮಪಾಲ ಗೌಡರ ಪುತ್ರಿ ಮೋಹಿನಿ(ಪವಿತ್ರ)ಅವರೊಂದಿಗೆ ಏಪ್ರಿಲ್ 18ರಂದು ಕುಕ್ಕೆ ಸುಬ್ರಹ್ಮಣ್ಯದ ಆದಿಸುಬ್ರಹ್ಮಣ್ಯ ಸಭಾಭವನದಲ್ಲಿ ಸೋಮಸುಂದರ್ ಅವರು ವೈವಾಹಿಕ ಬದುಕಿಗೆ ಕಾಲಿರಿಸಿದ್ದರು.ಮೃತರು ತಾಯಿ, ತಂಗಿ ಹಾಗೂ ಪತ್ನಿಯನ್ನು ಅಗಲಿದ್ದಾರೆ.ಮದುವೆ ಮುಗಿದ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೋಮಸುಂದರ್ ಅವರ ಸಾವಿನಿಂದಾಗಿ ದು:ಖದ ವಾತಾವರಣ ಮಡುಗಟ್ಟಿದೆ

LEAVE A REPLY

Please enter your comment!
Please enter your name here