ನೆಲ್ಯಾಡಿ: ಕಡಬ ತಾಲೂಕಿನ ಶಿರಾಡಿ ಗ್ರಾಮದ ಗುಂಡ್ಯ ನಿವಾಸಿ, ಗುಂಡ್ಯದಲ್ಲಿ ಉದ್ಯಮಿಯಾಗಿದ್ದ ಪ್ರೀತಿಕುಮಾರ್ (48ವ.)ಅವರು ಅಲ್ಪಕಾಲದ ಅನಾರೋಗ್ಯದಿಂದ ಮೇ 3ರಂದು ಮುಂಜಾನೆ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪ್ರೀತಿಕುಮಾರ್ ಅವರು ಗುಂಡ್ಯದಲ್ಲಿ ಹೋಟೆಲ್ ಸಂತೋಷ್, ಸಂತೋಷ್ ಚಿಕನ್‌ಸೆಂಟರ್, ಸಂತೋಷ್ ಜನರಲ್ ಸ್ಟೋರ್ ಹಾಗೂ ವೆಜಿಟೇಬಲ್ಸ್ ಹಾಗೂ ಸಾನಿಯಾ ಫ್ಯಾನ್ಸಿ ಹೊಂದಿದ್ದರು.
6 ತಿಂಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಪ್ರೀತಿಕುಮಾರ್ ಅವರು ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದರು. ವಾರದ ಹಿಂದೆ ಅವರಿಗೆ ವಾಂತಿ ಕಾಣಿಸಿಕೊಂಡಿದ್ದು ಉಜಿರೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೂ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮೇ 1ರಂದು ವೆನ್‌ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೇ 3ರಂದು ಮುಂಜಾನೆ 2 ಗಂಟೆ ವೇಳೆಗೆ ನಿಧನರಾದರು ಎಂದು ತಿಳಿದುಬಂದಿದೆ.
ಪ್ರೀತಿಕುಮಾರ್ ಅವರು ಸಾಮಾಜಿಕ, ಧಾರ್ಮಿಕ ಸೇವೆಯಲ್ಲೂ ತೊಡಗಿಕೊಂಡಿದ್ದು ಎಲ್ಲರೊಂದಿಗೂ ಒಡನಾಟ ಬೆಳೆಸಿಕೊಂಡಿದ್ದರು. ಗುಂಡ್ಯ ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಆಡಳಿತ ಸಮಿತಿಯಲ್ಲಿ ಸದಸ್ಯರಾಗಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳಲ್ಲೂ ತೊಡಗಿಕೊಂಡಿದ್ದರು. ಈ ಹಿಂದೆ ಗುಂಡ್ಯದಲ್ಲಿ ಸುದ್ದಿ ಬಿಡುಗಡೆ ಹಾಗೂ ಇತರೇ ಪತ್ರಿಕೆ ವಿತರಕರೂ ಆಗಿದ್ದರು. ಮಧ್ಯಾಹ್ನ ಮೃತದೇಹವನ್ನು ಗುಂಡ್ಯದ ಮನೆಗೆ ತಂದು ಸಂಜೆ ವೇಳೆಗೆ ಅಂತ್ಯಕ್ರಿಯೆ ನಡೆಯಿತು.
ಮೃತರು ತಾಯಿ ಶ್ಯಾಮಲಾ, ಪತ್ನಿ ಶಯನ, ಪುತ್ರಿಯರಾದ ಸಾನಿಯಾ, ಸಾಯುಜ್ಯ, ಸಹೋದರ ರೈಲ್ವೆ ಗುತ್ತಿಗೆದಾರ ಸಂತೋಷ್, ಸಹೋದರಿಯರಾದ ಸ್ನೇಹಾಕಾಂತ್, ತಾ.ಪಂ.ಮಾಜಿ ಸದಸ್ಯೆ ಆಶಾ ಲಕ್ಷ್ಮಣ್ ಅವರನ್ನು ಅಗಲಿದ್ದಾರೆ. ಜಿ.ಪಂ.ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಕುಮಾರಿ ವಾಸುದೇವನ್, ತಾ.ಪಂ.ಮಾಜಿ ಅಧ್ಯಕ್ಷೆ ಕೆ.ಟಿ.ವಲ್ಸಮ್ಮ, ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್, ಡಿಸಿಸಿ ಸದಸ್ಯರಾದ ಸೈಮನ್ ಕಡಬ, ವಿಜಯಕುಮಾರ್ ಕೆರ್ಮಾಯಿ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್‌ಕುಮಾರ್ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಶಾರದಾದಿನೇಶ್, ಶಿರಾಡಿ ಗ್ರಾ.ಪಂ.ಅಧ್ಯಕ್ಷ ಕಾರ್ತಿಕೇಯನ್, ಉಪಾಧ್ಯಕ್ಷೆ ವಿನುತಾ, ನೆಲ್ಯಾಡಿ ಗ್ರಾ.ಪಂ.ಉಪಾಧ್ಯಕ್ಷೆ ರೇಷ್ಮಾಶಶಿ, ಬಿಳಿನೆಲೆ ಗ್ರಾ.ಪಂ.ಉಪಾಧ್ಯಕ್ಷ ಶಿವಶಂಕರ್ ಸೇರಿದಂತೆ ನೂರಾರು ಮಂದಿ ಮೃತರ ಅಂತಿಮದರ್ಶನ ಪಡೆದುಕೊಂಡು ಸಂತಾಪ ಸೂಚಿಸಿದ್ದಾರೆ. ಮೃತರ ಗೌರವಾರ್ಥ ಗುಂಡ್ಯದಲ್ಲಿ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸಂತಾಪ ಸೂಚಿಸಿದ್ದಾರೆ.