
ಪುತ್ತೂರು: ಉತ್ತಮ ಮಳೆ, ಬೆಳೆ ಮತ್ತು ಲೋಕಕಲ್ಯಾಣಾರ್ಥವಾಗಿ ಮೇ.6ರಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರಿಗೆ ಸೀಯಾಳಾಭಿಷೇಕವು ಭಕ್ತರ ಸೇವಾರ್ಥವಾಗಿ ನಡೆಯಿತು.
ಬೆಳಿಗ್ಗೆ ಗಂಟೆ 11ಕ್ಕೆ ಶ್ರೀ ದೇವರ ಸತ್ಯಧರ್ಮ ನಡೆಯಲ್ಲಿ ಸೀಯಾಳಾಭಿಷೇಕ ಸೇವೆಯಲ್ಲಿ ಪಾಲ್ಗೊಂಡ ಭಕ್ತರು ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರ ನೇತೃತ್ವದಲ್ಲಿ ಪ್ರಾರ್ಥನೆ ಮಾಡಿದರು. ಈ ಸಂದರ್ಭ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಭಕ್ತ ವೃಂದ ಸಮಿತಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ತುಳಸಿ ಕ್ಯಾಟರಿಂಗ್ನ ಮಾಲಕ ಹರೀಶ್ ಭಟ್, ಸುದರ್ಶನ್ ಭಟ್, ರವಿಪ್ರಸಾದ್ ಶೆಟ್ಟಿ, ಜೀವನ್ ಕುಮಾರ್, ಕೃಷ್ಣ ಎಂ ಅಳಿಕೆ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಶ್ರೀ ಮಹಾಲಿಂಗೇಶ್ವರ ದೇವರಲ್ಲಿ ಪ್ರಾರ್ಥನೆ ಬಳಿಕ ದೇವಳದ ಹೋರಾಂಗಣದಲ್ಲಿರುವ ರಕ್ತೇಶ್ವರಿ ದೇವಿ ಗುಡಿಯ ನಡೆಯಲ್ಲೂ 5 ಸೀಯಾಳವನ್ನು ಇಟ್ಟು ಪ್ರಾರ್ಥನೆ ಮಾಡಲಾಯಿತು.
