ಬೈಲುಗುತ್ತು ಸುಬ್ಬಣ್ಣ ರೈ ಖಂಡಿಗ- ಬೆಳಿಯೂರುಬೀಡು ಶ್ರೀಮಂತಿ ಎಸ್ ರೈಯವರ ವೈವಾಹಿಕ ಜೀವನದ ಸುವರ್ಣ ಮಹೋತ್ಸವ

0

ಸುಬ್ಬಣ್ಣ ರೈ-ಶ್ರೀಮಂತಿ ರೈಯವರ ಬದುಕು ಯುವ ಪೀಳಿಗೆಗೆ ಮಾದರಿ- ಕುಂಬ್ರ ದುರ್ಗಾಪ್ರಸಾದ್ ರೈ

ಚಿತ್ರ- ಎಸ್.ಕೆ.ಡಿಜಿಟಲ್ ಭಕ್ತಕೋಡಿ

ಪುತ್ತೂರು: ಸವಣೂರು ಗ್ರಾಮದ ಖಂಡಿಗ, ಬೈಲುಗುತ್ತು ಸುಬ್ಬಣ್ಣ ರೈ – ಬೆಳಿಯೂರುಬೀಡು ಶ್ರೀಮಂತಿ ಎಸ್ ರೈಯವರ ವೈವಾಹಿಕ ಜೀವನದ 50 ನೇ ವರ್ಷದ “ಸುವರ್ಣ ಮಹೋತ್ಸವ” ಸಮಾರಂಭವು ಅದ್ದೂರಿಯಾಗಿ ಮೇ.6 ರಂದು ಪುತ್ತೂರು ಕೊಂಬೆಟ್ಟು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು.

ಬೆಳಿಯೂರು ಬೀಡು ವಸಂತಿ ಕೆ.ರೈ ಮತ್ತು ಡಿಂಬ್ರಿಗುತ್ತು ಕೊರಗಪ್ಪ ರೈಯವರು ದೀಪ ಬೆಳಗಿಸಿ, ಕಾರ್‍ಯಕ್ರಮಕ್ಕೆ ಚಾಲನೆಗೈದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ ಬೈಲುಗುತ್ತು ಸುಬ್ಬಣ್ಣ ರೈ ಖಂಡಿಗ- ಬೆಳಿಯೂರುಬೀಡು ಶ್ರೀಮಂತಿ ಎಸ್ ರೈಯವರ ದಾಂಪತ್ಯ ಜೀವನದ 50 ವರ್ಷಗಳ ಸಂಭ್ರಮಾಚರಣೆಯನ್ನು ನೋಡುವ ಸೌಭಾಗ್ಯ ದೊರೆತಿರುವುದು ನಮಗೆ ತುಂಬಾ ಸಂತೋಷ ತಂದಿದೆ. 50 ವರ್ಷಗಳ ದಾಂಪತ್ಯ ಜೀವನವನ್ನು ಅರ್ಥಪೂರ್ಣವಾಗಿ ನಡೆಸಿಕೊಂಡು ಬಂದು, ಸಮಾಜಕ್ಕೆ ಮಾದರಿಯಾಗಿರುವ ಸುಬ್ಬಣ್ಣ ರೈ -ಶ್ರೀಮಂತಿ ರೈಯವರು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.


ಭಾರತ ದೇಶದಲ್ಲಿ ಮಾತ್ರ ವೈವಾಹಿಕ ಜೀವನದ ಸುವರ್ಣ ಮಹೋತ್ಸವವನ್ನು ಕಾಣಲು ಸಾಧ್ಯವಾಗಿದ್ದು, ಖುಷಿ ಮತ್ತು ಸಂತೋಷದಿಂದ 50 ವರ್ಷಗಳಿಂದ ದಾಂಪತ್ಯ ಜೀವನವನ್ನು ನಡೆಸುತ್ತಿರುವ ಸುಬ್ಬಣ್ಣ ರೈ ಮತ್ತು ಶ್ರೀಮಂತಿ ರೈಯವರು ಸದಾ ಸಂತೋಷದಿಂದ ತಮ್ಮ ಬದುಕು ಸಾಗಿಸಲಿ. ಪುತ್ತೂರು ತಾಲೂಕು ಬಂಟರ ಸಂಘದ ಉಪಾಧ್ಯಕ್ಷರಾಗಿ ಕಾರ್‍ಯನಿರ್ವಹಿಸುತ್ತಿರುವ ಸುಬ್ಬಣ್ಣ ರೈಯವರು ಕಂದಾಯ ಇಲಾಖೆಯಲ್ಲಿ ಅಧಿಕಾರಿಯಾಗಿ ನಿವೃತ್ತಿಗೊಂಡು, ಇದೀಗ ಪ್ರಗತಿಪರ ಕೃಷಿಕರಾಗಿ, ಸಾಮಾಜಿಕ ಕ್ಷೇತ್ರದಲ್ಲೂ ಕೆಲಸವನ್ನು ನಿರ್ವಹಿಸಿದ್ದಾರೆ. ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಹೈನುಗಾರಿಕೆ ಕ್ಷೇತ್ರದಲ್ಲೂ ದುಡಿದಿದ್ದಾರೆ, ಸಹಕಾರ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಸುಬ್ಬಣ್ಣ ರೈಯವರಲ್ಲಿ ನಾವು ಸದಾ ಪ್ರೀತಿ-ಸ್ನೇಹದ ವ್ಯಕ್ತಿತ್ವವನ್ನು ಕಾಣಬಹುದು ಹಾಗೆಯೇ ಶ್ರೀಮಂತಿ ಎಸ್ ರೈಯವರು ಉತ್ತಮ ಗೃಹಣಿಯಾಗಿ, ಕುಟುಂಬ ಮತ್ತು ಸಮಾಜದಲ್ಲಿ ಗೌರವವನ್ನು ಪಡೆದಿದ್ದಾರೆ ಎಂದು ಕುಂಬ್ರ ದುರ್ಗಾಪ್ರಸಾದ್ ರೈ ಹೇಳಿದರು.


ಸುಬ್ಬಣ್ಣ ರೈ-ಶ್ರೀಮಂತಿ ರೈಯವರ ಮಕ್ಕಳಾದ ಬಿ.ಸುಪ್ರೀತ್ ರೈ ಖಂಡಿಗ, ಶಿಲ್ಪ ಎಸ್.ಶೆಟ್ಟಿ, ಸುಶಾಂತ್ ರೈ ಖಂಡಿಗ, ಅಳಿಯ ಸಂದೀಪ್ ಪಿ.ಶೆಟ್ಟಿ, ಸೊಸೆಯಂದಿರಾದ ಅಚಲ ಎಸ್.ರೈ, ಚೈತ್ರಾ ಎಸ್ ರೈ, ಮೊಮ್ಮಕ್ಕಳಾದ ಧ್ರುವ ಶೆಟ್ಟಿ, ಸುಧನ್ವ ರೈ, ಸಾಧ್ವಿಕ ರೈ ಹಾಗೂ ಶಾರ್ವರಿ ರೈರವರುಗಳು ವಿವಿಧ ಕಾರ್‍ಯಕ್ರಮಗಳನ್ನು ನಿರ್ವಹಿಸಿದರು.
ಸಮಾರಂಭದಲ್ಲಿ ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮುಖಂಡರುಗಳು ಸೇರಿದಂತೆ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಆರುನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದರು.

ರಸ ಮಂಜರಿ ಕಾರ್‍ಯಕ್ರಮ
ಸುಮಾರು 2 ತಾಸುಗಳಷ್ಟು ಸಮಯ ಗಾಯಕಿ ಗುರುಪ್ರಿಯಾ ನಾಯಕ್ ಬಳಗದವರಿಂದ ಸಂಗೀತ ರಸಮಂಜರಿ ನಡೆಯಿತು.

LEAVE A REPLY

Please enter your comment!
Please enter your name here