ಕೊಣಾಜೆ : ಸ್ಮೋಕ್ ಹೌಸ್ ಗೆ ಬೆಂಕಿ – ಒಣ ಅಡಿಕೆ, ರಬ್ಬರ್ ಶೀಟ್ ಬೆಂಕಿಗಾಹುತಿ

0

ನೆಲ್ಯಾಡಿ: ಮನೆ ತಾರಸಿಯ ಮೇಲಿನ ಸ್ಮೋಕ್ ಹೌಸ್ ಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಒಣ ಅಡಿಕೆ ಹಾಗೂ ರಬ್ಬರ್ ಶೀಟ್ ಬೆಂಕಿಗಾಹುತಿ ಆಗಿರುವ ಘಟನೆ ಕೊಣಾಜೆ ಗ್ರಾಮದ ಮಾಳ ಎಂಬಲ್ಲಿ ಮೇ.7ರಂದು ಸಂಜೆ ನಡೆದಿದೆ.

ಸ್ಯಾಮುವೆಲ್ ಎಂಬವರು ತಮ್ಮ ಮನೆಯ ಮೇಲಿನ ತಾರಸಿಯಲ್ಲಿ ಸ್ಮೋಕ್ ಹೌಸ್ ಮಾಡಿದ್ದು ಅಲ್ಲೇ ರಬ್ಬರ್ ಶೀಟ್ ಹಾಗೂ ಒಣ ಅಡಿಕೆ ಸಂಗ್ರಹಿಸಿಟ್ಟಿದ್ದರು. ಸ್ಮೋಕ್ ಹೌಸ್ ನ ಬೆಂಕಿಯ ಕಿಡಿ ಹರಡಿ ಸಂಭವಿಸಿದ ಬೆಂಕಿಯ ಕೆನ್ನಾಲಿಗೆಗೆ ಸುಮಾರು 15 ಕ್ವಿಂಟಾಲ್ ಒಣ ಅಡಿಕೆ ಹಾಗೂ 8 ಕ್ವಿಂಟಾಲ್ ರಬ್ಬರ್ ಶೀಟ್ ಸುಟ್ಟು ಹೋಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ. ಸ್ಯಾಮುವೆಲ್ ಅವರು ಹೊರ ರಾಜ್ಯದಲ್ಲಿ ಉದ್ಯೋಗ ದಲ್ಲಿದ್ದು ತೋಟ ನೋಡಿಕೊಳ್ಳಲು ಮೇಲ್ವಿಚಾರಕರ ನೇಮಕ ಮಾಡಿದ್ದರು. ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಲಾಗಿದೆ.

LEAVE A REPLY

Please enter your comment!
Please enter your name here