ಮೇ.10ರಿಂದ 10 ದಿನ ಈಶ್ವರಮಂಗಲದಲ್ಲಿ ’ಈಶ್ವರಮಂಗಲ ಟ್ರೇಡ್ ಫೆಸ್ಟ್’ – ಪ್ರಖ್ಯಾತ ವಿವಿಧ ಕಂಪೆನಿಗಳ ಮಳಿಗೆಗಳು, ವಿನೋದಾವಳಿಗಳು, ಮನೋರಂಜನೆಗಳು

0

ಪುತ್ತೂರು: ಗ್ರಾಮೀಣ ಪ್ರದೇಶಗಳಲ್ಲೂ ವಿವಿಧ ರೀತಿಯಲ್ಲಿ ಗ್ರಾಹಕರಿಗೆ ಸೌಲಭ್ಯಗಳು, ಮನೋರಂಜನೆಳು ಸಿಗಬೇಕೆನ್ನುವ ನಿಟ್ಟಿನಲ್ಲಿ ಈಶ್ವರಮಂಗಲದಲ್ಲಿ 10 ದಿನಗಳ ಈಶ್ವರಮಂಗಲ ಟ್ರೇಡ್ ಫೆಸ್ಟ್ ಮೇ.10ರಿಂದ ಆರಂಭಗೊಳ್ಳಲಿದ ಎಂದು ಟ್ರೇಡ್ ಫೆಸ್ಟ್ ಸಂಚಾಲಕ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.

ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬೆಡಿಗದ್ದೆಯಲ್ಲಿ ಟ್ರೇಡ್ ಫೆಸ್ಟ್ ನಡೆಯಲಿದ್ದು, ಮೇ.10ಕ್ಕೆ ಉದ್ಘಾಟನೆ ನಡೆಯಲಿದೆ. ಶಾಸಕ ಅಶೋಕ್ ಕುಮಾರ್ ರೈ ಟ್ರೇಡ್‌ಫೆಸ್ಟ್ ಅನ್ನು ಉದ್ಘಾಟಿಸಲಿದ್ದಾರೆ. ನೆಟ್ಟಣಿಗೆಮುಡ್ನೂರು ಗ್ರಾ.ಪಂ ಅಧ್ಯಕ್ಷೆ ಪೌಝಿಯಾ ಇಬ್ರಾಹಿಂ ಅಧ್ಯಕ್ಷತೆ ವಹಿಸಲಿದ್ದಾರೆ. ತಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು, ಡಿವೈಎಸ್ಪಿ ಅರುಣ್‌ನಾಗೇಗೌಡ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸಹಿತ ಹಲವಾರು ಮಂದಿ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಟ್ರೇಡ್ ಫೆಸ್ಟ್ ಮೇ.19ರ ತನಕ ನಡೆಯಲಿದೆ ಎಂದವರು ಹೇಳಿದರು.

ವಿವಿಧ ಕಂಪೆನಿಗಳ ಮಳಿಗೆಗಳು, ವಿನೋದಾವಳಿಗಳು, ಮನೋರಂಜನೆಗಳು:
ಈಶ್ವರಮಂಗಲ ಟ್ರೇಡ್ ಫೆಸ್ಟ್ ಪ್ರಥಮ ಬಾರಿಗೆ ಆಯೋಜಿಸಲಾಗಿದ್ದು, ಈಗಾಗಲೇ ಸುಮಾರು 50 ಮಳಿಗೆಳಲ್ಲಿ ವಿವಿಧ ಕಂಪೆನಿಗಳು ನೋಂದಾವಣೆ ಮಾಡಿದೆ. ಫೆಸ್ಟ್‌ನಲ್ಲಿ ಮ್ಯೂಸಿಕಲ್ ನೈಟ್, ಡ್ಯಾನ್ಸ್, ಮ್ಯಾಜಿಕ್ ಶೋ, ಕಾಮಿಡಿ ಶೋ, ತುಳು ನಾಟಕ, ಫುಡ್ ಕೌಂಟರ್ ಸಹಿತ ಹಲವಾರು ಪ್ರದರ್ಶನಗಳಿವೆ. ಮನೋರಂಜನ ಕಾರ್ಯಕ್ರಮ ಪ್ರತಿ ದಿನ ಗಂಟೆ 7ಕ್ಕೆ ಆರಂಭಗೊಳ್ಳಲಿದೆ. ಮೇ 10ಕ್ಕೆ ನಂದನ ವಿಶ್ಮಯ, ಮೇ.11ಕ್ಕೆ ಕಾಮಿಡಿ ಶೋ, ಮೇ.12ಕ್ಕೆ ಮ್ಯೂಸಿಕ್ ಸ್ಟಾರ್ ನೈಟ್ಸ್, ಮೇ.13ಕ್ಕೆ ಜಿಮಿನಾಸ್ಟಿಕ್ ಡ್ಯಾನ್ಸ್, ಮೇ.14ಕ್ಕೆ ನೃತ್ಯ ಸಂಗೀತ, ಮೇ.15ಕ್ಕೆ ಗಾನಮೇಳ, ಮೇ.16ಕ್ಕೆ ಡ್ಯಾನ್ಸ್, ಮೇ.17ಕ್ಕೆ ತುಳು ನಾಟಕ, ಮೇ.18ಕ್ಕೆ ಮ್ಯೂಸಿಕಲ್ ನೈಟ್ಸ್, ಮೇ.19ಕ್ಕೆ ಸ್ಟಾರ್ ನೈಟ್ಸ್ ಕಾರ್ಯಕ್ರಮ ನಡೆಯಲಿದೆ ಎಂದು ಈಶ್ವರಮಂಲ ಟ್ರೇಡ್ ಫೆಸ್ಟ್ ಸಂಚಾಲಕ ಸಂಚಾಲಕ ಅಬ್ದುಲ್ ರಹಿಮಾನ್ ಹಾಜಿ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಟ್ರೇಡ್ ಫೆಸ್ಟ್‌ನ ಸಂಚಾಲಕರಾದ ರಾಮಣ್ಣ ನಾಯ್ಕ, ಗಿರೀಶ್ ಕುಮಾರ್ ರೈ, ಸಂಘಟಕ ಆಶ್ರಫ್ ಗಾಳಿಮುಖ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here