ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ನಿಧನಕ್ಕೆ ಶಾಸಕ ಅಶೋಕ್ ರೈ ಸಂತಾಪ

0

ಪುತ್ತೂರು: ಹಿರಿಯ ತುಳು ಜಾನಪದ ವಿದ್ವಾಂಸರೂ, ನಿವೃತ್ತ  ಮುಖ್ಯ ಶಿಕ್ಷಕರೂ, ಸಾಹಿತಿಯೂ ಆದ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ನಿಧನಕ್ಕೆ ಶಾಸಕ ಅಶೋಕ್ ರೈ ಸಂತಾಪ ವ್ಯಕ್ತಪಡಿಸಿದ್ದಾರೆ.
ಉತ್ತಮ ಶಿಕ್ಷಕರಾಗಿದ್ದು ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದಿದ್ದ ಡಾ.ಆಚಾರ್ ಅವರು ಅನೇಕ ಕನ್ನಡ ಮತ್ತು ತುಳು ಕೃತಿಗಳ ಮೂಲಕ ಜಾನಪದ, ದೈವಾರಾಧನಾ ಕ್ಷೇತ್ರಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಪರಿಷತ್‌ನ ಮೊದಲ ರಿಜಿಸ್ಟಾರ್ ಆಗಿದ್ದುಕೊಂಡು ಅಕಾಡೆಮಿಯ  ಕೆಲಸ ಕಾರ್ಯಗಳಿಗೆ ಚೌಕಟ್ಟು ಹಾಕಿಕೊಟ್ಟಿದ್ದ ಅವರು, ಬಳಿಕ ಅಕಾಡೆಮಿಯ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದರು. ಜನಪದ ಕುಣಿತಗಳ ಬಗ್ಗೆ ಆಳವಾದ ಅಧ್ಯಯನ ಮಾಡಿ ಪಿಎಚ್‌ಡಿ ಮಾಡಿದ್ದರು. ತುಳು ಭಾಷೆ, ಸಂಸ್ಕೃತಿ, ಜನಪದ ಲೋಕಕ್ಕೆ ಅಪಾರ ಸೇವೆ ಸಲ್ಲಿಸಿದ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು, ಶಿಕ್ಷಣ ಕ್ಷೇತ್ರದಲ್ಲೂ ಅತ್ಯುತ್ತಮ ಸೇವೆ ಸಲ್ಲಿಸಿ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸಿದ್ದರು. ಡಾ.ಪಾಲ್ತಾಡಿಯವರ ನಿಧನ ತುಳು ಜಾನಪದ ಸಂಶೋಧನಾ ಲೋಕಕ್ಕೆ ತುಂಬಲಾರದ ನಷ್ಟ ಎಂದು ಶಾಸಕರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here