ಪಾರ್ಟ್ ಟೈಮ್ ಜಾಬ್ ಮಾಡುವಂತೆ ಪ್ರೇರೇಪಿಸಿ ಲಕ್ಷಾಂತರ ರೂ. ವಂಚನೆ-ಸವಣೂರಿನ ಮಹಿಳೆಯಿಂದ ಪೊಲೀಸರಿಗೆ ದೂರು

0

ಪುತ್ತೂರು: ಪಾರ್ಟ್ ಟೈಮ್ ಜಾಬ್ ಮಾಡುವಂತೆ ಪ್ರೇರೇಪಿಸಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ.ವಂಚಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಬಗ್ಗೆ ವಂಚನೆಗೊಳಗಾಗಿರುವ ಮಹಿಳೆ ಬೆಳ್ಳಾರೆ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.

  • ಕಡಬ ತಾಲೂಕಿನ ಸವಣೂರು ಗ್ರಾಮದ ನಡುಬೈಲು ನಿವಾಸಿ ಮಹಮ್ಮದ್ ಶರೀಫ್ ಅವರ ಪತ್ನಿ ಫಾತಿಮತ್ ಆಶಿಕಾ(29ವ.)ವಂಚನೆಗೊಳಗಾದವರು. ಫಾತಿಮತ್ ಆಶಿಕಾ ಅವರು ಎ.26ರಂದು ತನ್ನ ಮೊಬೈಲ್‌ನಲ್ಲಿ Instagram ಖಾತೆಯನ್ನು ಪರಿಶೀಲಿಸುತ್ತಿರುವಾಗ ಅದರಲ್ಲಿ ಪಾರ್ಟ್ ಟೈಮ್ ಜಾಬ್‌ಗೆ ಸಂಬಂಧಿಸಿದ ಲಿಂಕ್‌ಗೆ ಕ್ಲಿಕ್ ಮಾಡಿದಾಗ whatsapp App ತೆರೆದುಕೊಂಡಿದ್ದು, ಅದರಲ್ಲಿದ್ದ ವ್ಯಕ್ತಿಯೊಬ್ಬರು ಆಶಿಕಾ ಅವರನ್ನು ಪಾರ್ಟ್ ಟೈಮ್ ಜಾಬ್ ಮಾಡುವಂತೆ ಪ್ರೇರೇಪಿಸಿ ಅವರ ಖಾತೆಗೆ ಹಲವು ಲಿಂಕ್ ಕಳುಹಿಸಿ ಕೊಟ್ಟು ಅದರಲ್ಲಿ ಹಲವು ಟಾಸ್ಕ್ಗಳನ್ನು ನೀಡಿ ಈ ಟಾಸ್ಕ್ಗಳನ್ನು ಪೂರ್ಣಗೊಳಿಸಿದರೆ ನಿಮಗೆ ಹೆಚ್ಚಿನ ಹಣ ನೀಡುವುದಾಗಿ ತಿಳಿಸಿದ್ದರು. ಅದರಂತೆ ಆಶಿಕಾ ಅವರು ಅದರಲ್ಲಿದ್ದ ಒಂದು ಲಿಂಕ್‌ಗೆ ಕ್ಲಿಕ್ ಮಾಡಿದಾಗ ಅಮೋಲಿಯಾ ಎಂಬವರೊಂದಿಗೆ whatsapp App ನಲ್ಲಿ ಸಂಪರ್ಕ ಮಾಡಿ ಅವರು ನೀಡಿದ ಕೆಲವು ಟಾಸ್ಕ್ಗಳನ್ನು ಪೂರ್ಣಗೊಳಿಸಿದ್ದಕ್ಕಾಗಿ 123 ರೂಪಾಯಿ ಪಾವತಿಸಿರುತ್ತಾರೆ. ನಂತರ ಅಮೋಲಿಯಾರವರು ತಿಳಿಸಿದ ಖಾತೆಗಳಿಗೆ ಹಣ ಪಾವತಿ ಮಾಡಿದಲ್ಲಿ ರೂ 1,000ಕ್ಕೆ ರೂ 300 ಸೇರಿಸಿ ಖಾತೆಗೆ ಜಮೆ ಮಾಡಲಾಗುವುದು ಎಂದು ತಿಳಿಸಿದಂತೆ ಅವರು ಕಳುಹಿಸಿದ ಯುಪಿಐ ಲಿಂಕ್‌ಗೆ ರೂ. 3000 ಹಾಕಿದಾಗ ಅವರು ರೂ.5000ವನ್ನು ಆಶಿಕಾ ಅವರ ಖಾತೆಗೆ ಹಾಕಿದ್ದಾರೆ. ನಂತರ ಎ.27ರಂದು ಆಶಿಕಾ ಅವರು ಬೇರೆ ಬೇರೆ ಖಾತೆಗಳಿಗೆ ಒಟ್ಟು ರೂ 35,000ವನ್ನು ಫೋನ್ ಪೇ ಮೂಲಕ ಪಾವತಿ ಮಾಡಿದ್ದು, ಈ ಹಣಕ್ಕೆ ಯಾವುದೇ ಹಣವನ್ನು ಸೇರಿಸದೇ ಮತ್ತಷ್ಟು ಹಣ ಪಾವತಿ ಮಾಡುವಂತೆ ತಿಳಿಸಿದ್ದು ಮೇ 1ರಂದು ರೂ. 1,00,000ವನ್ನು ಆರೋಪಿತರು ನೀಡಿದ ಲಿಂಕ್ ಮೂಲಕ ಆಶಿಕಾ ಅವರು ಫೋನ್ ಪೇ ಮಾಡಿದ್ದಾರೆ.
  • ಬಳಿಕ whatsapp App ನಲ್ಲಿ ಸುಮೇಧ ರಮಣ ಮತ್ತು ಚಂದರ್ ಎಂಬವರು ಆಶಿಕಾ ಅವರನ್ನು ಸಂಪರ್ಕಿಸಿ ಹಣ ಮರುಪಾವತಿ ಮಾಡುವ ಬಗ್ಗೆ ತಿಳಿಸಿ ಆಶಿಕಾ ಅವರ ಖಾತೆಗೆ ರೂ.20,000 ಪಾವತಿ ಮಾಡಿ ಇನ್ನೂ 1,77,450 ರೂ. ಪಾವತಿಸಿದರೆ ನಿಮ್ಮ ಎಲ್ಲಾ ಹಣವನ್ನು ನಿಮಗೆ ಮರುಪಾವತಿ ಮಾಡಲಾಗುವುದು ಎಂದು ತಿಳಿಸಿರುತ್ತಾರೆ. ಅದರಂತೆ ಆಶಿಕಾ ಅವರು ಮೇ 2ರಂದು ಅವರು ನೀಡಿದ ಬ್ಯಾಂಕ್ ಖಾತೆಗೆ 1,77,450 ರೂಪಾಯಿಯನ್ನು ಖಖಿಉS ಮೂಲಕ ಪಾವತಿಸಿದ್ದಾರೆ. ನಂತರವೂ ಹಣ ವಾಪಾಸು ಬಾರದೇ ಇರುವ ಬಗ್ಗೆ ಆಶಿಕಾ ಅವರು ವಿಚಾರಿಸಿದಾಗ ಇನ್ನೂ 3.00.000 ರೂಪಾಯಿ ಪಾವತಿ ಮಾಡುವಂತೆ ತಿಳಿಸಿದ್ದಾರೆ. ಅದರಂತೆ ಆಶಿಕಾ ಅವರು ಮೇ 3ರಂದು 3,00,000 ರೂಪಾಯಿಯನ್ನು RTGS ಮೂಲಕ ಪಾವತಿ ಮಾಡಿದ್ದಾರೆ. ಬಳಿಕವೂ ಆಶಿಕಾ ಅವರನ್ನು ಸಂಪರ್ಕಿಸಿದ ಆರೋಪಿಗಳು ನಿಮ್ಮೆಲ್ಲಾ ಹಣವನ್ನು ವಾಪಾಸು ನೀಡಲು ನೀವು 5,00,000 ರೂ.ಪಾವತಿ ಮಾಡುವಂತೆ ತಿಳಿಸಿದಾಗ ಆಶಿಕಾ ಅವರು 5,00,000 ರೂಪಾಯಿಯನ್ನು ಮೇ 4ರಂದು ಪಾವತಿ ಮಾಡಿದರೂ ಆರೋಪಿತರು ಹಣ ಮರುಪಾವತಿ ಮಾಡಿರುವುದಿಲ್ಲ ಎಂದು ದೂರಲಾಗಿದೆ. ಈ ಬಗ್ಗೆ ಫಾತಿಮತ್ ಆಶಿಕಾ ಅವರು ನೀಡಿರುವ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 44/2024 ಕಲಂ: 419,420, ಡಿ/ತಿ 34 ಐಪಿಸಿ, ಕಲಂ: 66(ಆ) ಐಟಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here