ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ಪ್ರೌಢಶಾಲೆಗೆ ಶೇ.97 ಫಲಿತಾಂಶ

0

ಪುತ್ತೂರು: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ಪ್ರೌಢಶಾಲೆಗೆ ಶೇ.97 ಫಲಿತಾಂಶ ಲಭಿಸಿದೆ.
ಒಟ್ಟು 63 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 61 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ವಿದ್ಯಾರ್ಥಿಗಳಾದ ನಮಿತಾ ಕೆ.(ನಾರಾಯಣ ಕೆ. ಮತ್ತು ಜಾನಕಿ ಕೊನೆತೋಟ ದಂಪತಿ ಪುತ್ರಿ) 576 ಅಂಕ, ಸಹನಾ ಎಂ. (ಎಸ್. ವಾಸು ನಾಯ್ಕ ಮತ್ತು ಸುಂದರಿ ಇ. ದಂಪತಿ ಪುತ್ರಿ) 575 ಅಂಕ ಹಾಗೂ ಫಾತಿಮತ್ ತಸ್ನೀಮಾ(ಟಿ. ಅಬ್ದುಲ್ ರಝಾಕ್ ಮತ್ತು ನೆಬಿಸತ್ ಪಿಸ್ರಿಯಾ ದಂಪತಿ ಪುತ್ರಿ) 542 ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here