ಕಡಬ: ಸರಸ್ವತೀ ವಿದ್ಯಾಲಯಕ್ಕೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

0

ಕಡಬ: ಇಲ್ಲಿನ ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯಿಂದ ಒಟ್ಟು 28 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 05 ಡಿಸ್ಟಿಂಕ್ಷನ್, 05 ಪ್ರಥಮ ಶ್ರೇಣಿ, 18 ದ್ವಿತೀಯ ಶ್ರೇಣಿಯೊಂದಿಗೆ ಉತ್ತೀರ್ಣಗೊಂಡು ಶೇ 100% ದಾಖಲಾಗಿದೆ.

ಕುಟ್ರುಪ್ಪಾಡಿ ಗ್ರಾಮದ ಮೈಲೇರಿ ಶಿವಪ್ರಸಾದ್ ರೈ ಹಾಗೂ ಚಂದ್ರರೇಖಾ ದಂಪತಿಗಳ ಪುತ್ರಿ ಪೂರ್ವಿ ರೈ 592(94.72%) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾಳೆ, ಕೋಡಿಂಬಾಳ ಗ್ರಾಮದ ಪೊಸವಳಿಕೆ ಮನೆ ಚೆನ್ನಪ್ಪ ಗೌಡ ಹಾಗೂ ಮೀನಾಕ್ಷಿ ದಂಪತಿಗಳ ಪುತ್ರಿ ಧೃತಿ ಪಿ ಸಿ 589(94.24%) ಅಂಕ ಪಡೆದು ವಿಶಿಷ್ಟ ಶ್ರೇಣಿಯೊಂದಿಗೆ ಶಾಲೆಗೆ ದ್ವಿತೀಯ ಸ್ಥಾನಿಯಾಗಿದ್ದು, ಬಳ್ಪ ಗ್ರಾಮದ ಕಟ್ಟಮನೆ ಬಾಲಚಂದ್ರ ಕೆ ಹಾಗೂ ಸಂಧ್ಯಾ ಕೆ ದಂಪತಿಗಳ ಪುತ್ರಿ ರಕ್ಷಾ ಕೆ ಬಿ 572(91.52%) ಅಂಕ ಪಡೆದು ವಿಶಿಷ್ಟ ಶ್ರೇಣಿಯೊಂದಿಗೆ ಶಾಲೆಗೆ ತೃತೀಯ ಸ್ಥಾನಿಯಾಗಿರುತ್ತಾಳೆ. ಬಾಳುಗೋಡು ಗ್ರಾಮದ ಪದ್ಮನಾಭ ಬಿ ಹಾಗೂ ನಾಗವೇಣಿ ದಂಪತಿಗಳ ಪುತ್ರ ಶ್ರೇಯಸ್ ಬಿ 546(87.36%), ಬಲ್ಯ ಗ್ರಾಮದ ಬೆದ್ರಾಡಿ ಮನೆ ಶಾಂತರಾಮ ರೈ ಹಾಗೂ ಶಕುಂತಳಾ ರೈ ಇವರ ಪುತ್ರಿ ಮಧುರಾ ರೈ ಬಿ 540(86.40%) ಅಂಕಗಳನ್ನು ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here