





ನಿಡ್ಪಳ್ಳಿ: 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆ ಸತತ ಎರಡನೇ ಬಾರಿಗೆ ಶೇ.100 ಫಲಿತಾಂಶ ದಾಖಲಿಸಿದೆ.


ಶಾಲೆಯಿಂದ ಒಟ್ಟು 13 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅವರಲ್ಲಿ 550 ಅಂಕಗ ಪಡೆದು ಪ್ರಥಮ್ ಸಿ.ಎಚ್ ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾನೆ. ಉಳಿದಂತೆ ಮೂರು ವಿಶಿಷ್ಟ ಶ್ರೇಣಿ, ಏಳು ಪ್ರಥಮ ಸ್ಥಾನ ಎರಡು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದಿರುತ್ತಾರೆ ಎಂದು ಶಾಲಾ ಮುಖ್ಯ ಗುರು ವಿಜಯಕುಮಾರ್.ಎಂ ತಿಳಿಸಿರುತ್ತಾರೆ.













