ಸರ್ವೆ ಎಸ್‌ಜಿಎಂ ಪ್ರೌಢಶಾಲೆಗೆ ಶೇ.98.24 ಫಲಿತಾಂಶ

0

ಪುತ್ತೂರು: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಸರ್ವೆ ಎಸ್‌ಜಿಎಂ ಪ್ರೌಢಶಾಲೆಗೆ ಶೇ.98.24 ಫಲಿತಾಂಶ ಲಭಿಸಿದೆ.
ಒಟ್ಟು 57 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 56 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. 3 ವಿದ್ಯಾರ್ಥಿಗಳು “ಎ+” ಗ್ರೇಡ್, ೮ ವಿದ್ಯಾರ್ಥಿಗಳು “ಎ” ಗ್ರೇಡ್, ೪ ವಿದ್ಯಾರ್ಥಿಗಳು “ಬಿ+” ಗ್ರೇಡ್, 17 ವಿದ್ಯಾರ್ಥಿಗಳು “ಬಿ” ಗ್ರೇಡ್, 15 ವಿದ್ಯಾರ್ಥಿಗಳು “ಸಿ+” ಗ್ರೇಡ್ ಹಾಗೂ ೯ ವಿದ್ಯಾರ್ಥಿಗಳು “ಸಿ” ಗ್ರೇಡ್‌ನೊಂದಿಗೆ ಉತ್ತೀರ್ಣಗೊಂಡಿರುತ್ತಾರೆ. ಕೃಪಾ ಕೆ. 599 ಅಂಕಗಳೊಂದಿಗೆ ಪ್ರಥಮ ಕೆ. ಭವಿಷ್ಯ 576 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ಶ್ರೇಯ 565 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

LEAVE A REPLY

Please enter your comment!
Please enter your name here