ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ ಬಂದಿರುವ ಹಿನ್ನಲೆಯಲ್ಲಿ ಪರೀಕ್ಷೆ ಬರೆದಂತಹ ವಿದ್ಯಾರ್ಥಿಗಳ ಸಭೆ ನಡೆಸಲಾಯಿತು. ಈ ಸಂದರ್ಭ ಪ್ರಥಮ ಸ್ಥಾನಿಯಾದ ಕವನ ಇವರಿಗೆ ಶಾಲಾ ಸಂಚಾಲಕ ವಸಂತ ಸುವರ್ಣ ಶಾಲು ಹೊದಿಸಿ ಅಭಿನಂದಿಸಿದರು.
ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ಚಂದ್ರ ಶುಭ ಹಾರೈಸಿದರು. ಪದವಿ ಪೂರ್ವ ವಿಭಾಗದ ಶೈಕ್ಷಣಿಕ ಸ್ವರೂಪ ಹಾಗೂ ಸಾಂದರ್ಭಿಕ ಕೋರ್ಸ್ ಆಯ್ಕೆಗಳ ಬಗ್ಗೆ ಶಾಲಾ ಮುಖ್ಯ ಗುರುಗಳಾದ ಆಶಾ ಬೆಳ್ಳಾರೆ ಮಾಹಿತಿ ನೀಡಿದರು. ನರೇಂದ್ರ ಪದವಿಪೂರ್ವ ಕಾಲೇಜಿನ ಸಂಚಾಲಕ ಸಂತೋಷ್ ಮಕ್ಕಳಿಗೆ ಸಿಹಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಇವರು ಪದವಿ ಪೂರ್ವ ಕಲಿಕಾ ಹಂತದ ಆಯ್ಕೆಯ ಆಲೋಚನೆ ಇರಬೇಕಾದ ಅಗತ್ಯತೆಯನ್ನು ತಿಳಿಸಿದರು. ಸಹ ಶಿಕ್ಷಕರಾದ ರಾಮನಾಯ್ಕ್ ಹಾಗೂ ಗಣೇಶ್ ಉಪಸ್ಥಿತರಿದ್ದರು.