ಎಸ್.ಎಸ್. ಎಲ್. ಸಿ ವಾರ್ಷಿಕ ಪರೀಕ್ಷೆಯಲ್ಲಿ ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಗೆ 100% ಫಲಿತಾಂಶ

0

ಪುತ್ತೂರು: ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗೆ ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ 44 ವಿದ್ಯಾರ್ಥಿಗಳು ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಗುಣಮಟ್ಟದ ಫಲಿತಾಂಶ ʼಎʼ ಗ್ರೇಡ್ ನೊಂದಿಗೆ 100 % ಫಲಿತಾಂಶ ಲಭಿಸಿದೆ. ಈ ಪೈಕಿ 6 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 9 ವಿದ್ಯಾರ್ಥಿಗಳು 500 ಕ್ಕಿಂತ ಹೆಚ್ಚು ಅಂಕ ಪಡೆದು ʼಎʼ ಶ್ರೇಣಿಯಲ್ಲಿ, 24 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 4 ವಿದ್ಯಾರ್ಥಿಗಳು ದ್ವಿತೀಯ ಹಾಗೂ ಒಬ್ಬ ವಿದ್ಯಾರ್ಥಿ ತೃತೀಯ ಸ್ಥಾನವನ್ನು ಪಡೆದು ತೇರ್ಗಡೆಯಾಗಿರುತ್ತಾರೆ.

ಆಯಿಷತ್ ಸಹ್‌ಲಾ 587 (93.92%)ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ( ಚೂರಿಪದವಿನ ಅಬ್ದುಲ್ಲಾ ಸಿ.ಎಚ್ ಮತ್ತು ಜೋಹರಾ ಇವರ ಪುತ್ರಿ), ಶ್ರವಣ್ ಎನ್ 585 (93.60%) ಅಂಕಗಳನ್ನು ಪಡೆದು ಶಾಲೆಗೆ ದ್ವಿತೀಯ ಸ್ಥಾನ (ನಾಕಪ್ಪಾಡಿ ಮಂಜಪ್ಪ ಪೂಜಾರಿ ಮತ್ತು ಪವಿತ್ರಾ ಕೆ ಇವರ ಪುತ್ರ),ಶಿಲ್ಪಾ 584 (93.44%) ಅಂಕಗಳೊಂದಿಗೆ ಶಾಲೆಗೆ ತೃತೀಯ ಸ್ಥಾನ (ಡೊಂಬಟೆಬರಿಯ ಚನಿಯಪ್ಪ ಮತ್ತು ಪ್ರೇಮ ಇವರ ಪುತ್ರಿ ), ಅರ್ಫಾನ 579 (92.64%)(ಪೇರಲ್ತಡ್ಕದ ಇಬ್ರಾಹಿಂ ಮತ್ತು ಮೈಮೂನ ಇವರ ಪುತ್ರಿ ), ಮಹಮ್ಮದ್ ಅಫ್ನಾನ್ 551(88.16%)(ಕೊಮ್ಮೆಮಾರ್ ಅಬ್ದುಲ್ ಹಮೀದ್ ಮತ್ತು ಅಪ್ಸಾ. ಬಿ ಇವರ ಪುತ್ರ), ಯಶಸ್ವಿ 542 (86.72%)(ಕೋಡಿ ನಾಗೇಶ್ ನಾಯ್ಕ ಕೆ ಮತ್ತು ಜಲಜಾಕ್ಷಿ.ಯನ್ ಇವರ ಪುತ್ರಿ), ಹನ್ನತ್ ಮಸ್ತೂರ 525 (84%)(ಕೊರಿಂಗಿಲದ ಅಬ್ದುಲ್ ಕರೀಂ ಮತ್ತು ಫಾತಿಮತ್ ಜೋಹರಾ ಇವರ ಪುತ್ರಿ), ಶೃತಿ 522 (83.36%) (ಕೋಡಿ ಶಿವಪ್ಪ ನಾಯ್ಕ ಮತ್ತು ಲಕ್ಷ್ಮೀ ಇವರ ಪುತ್ರಿ ), ಹರ್ಷ 519 (83.04%)( ಬಳ್ಳೂರು ಉಮೇಶ ಮತ್ತು ವಿನುತಾ ಇವರ ಪುತ್ರಿ), ಹರ್ಷಿತಾ 513(82.08%)(ಮುಂಡಕೊಚ್ಚಿ ವೆಂಕಪ್ಪ ನಾಯ್ಕ ಮತ್ತು ಹೇಮಾವತಿ ಇವರ ಪುತ್ರಿ), ಮೊಹಮ್ಮದ್ ಅಲಿ ಅನ್ಸಾದ್ 511(81.76%) (ಕೂಟತ್ತಾನದ ಇಸುಬು.ಕೆ ಮತ್ತು ಅಪ್ಸಾ ಇವರ ಪುತ್ರ ), ಮಾನಸ್ 510 (81.60%)(ಬದಂತಡ್ಕದ ಗೋವಿಂದ ನಾಯ್ಕ ಮತ್ತು ಯಶೋದ ಇವರು ಪುತ್ರ), ಚೈತನ್ಯ 506 (80.96%) (ಕುಂಞಿ ಮೂಲೆಯ ಪರಮೇಶ್ವರ ನಾಯ್ಕ ಕೆ ಮತ್ತು ನಳಿನಾಕ್ಷಿ ಇವರ ಪುತ್ರಿ ), ತೇಜಸ್ ಕೆ ವಿ 501(80.16%)(ಕೋನಡ್ಕದ ವಸಂತ ಮತ್ತು ಕುಸುಮ ಇವರ ಪುತ್ರ ), ಮಹಮ್ಮದ್ ಆದಿಲ್ ಶಾ 500 (80%) (ರೆಂಜದ ಉಮ್ಮರ್ ಫಾರೂಕ್ ಮತ್ತು ಫಾತಿಮತ್ ಸಾಜಿದಾ ಇವರ ಪುತ್ರ) ಅಂಕಗಳೊಂದಿಗೆ ಉತ್ತಮ ಸಾಧನೆ ಮಾಡಿರುತ್ತಾರೆ ಎಂದು ಮುಖ್ಯಗುರು ಪುಷ್ಪಾವತಿ ಎಸ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


LEAVE A REPLY

Please enter your comment!
Please enter your name here