ಕುದ್ಮಾರು:ಟಿಪ್ಪರ್‌ಗಳಲ್ಲಿ ಅಕ್ರಮ ಮರಳು ಸಾಗಾಟ-6 ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು

0

ಕಾಣಿಯೂರು: ಕುಮಾರಧಾರ ನದಿಯಿಂದ ಅಕ್ರಮವಾಗಿ ಮರಳು ಕಳ್ಳತನ ಮಾಡಿ ಟಿಪ್ಪರ್‌ಗಳಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದುದನ್ನು ವಿವಿಧ ಕಡೆಗಳಲ್ಲಿ ಪತ್ತೆ ಮಾಡಿರುವ ಬೆಳ್ಳಾರೆ ಪೊಲೀಸರು ಈ ಸಂಬಂಧ ಆರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು 70 ಲಕ್ಷ ರೂ.ಮೌಲ್ಯದ 6 ಟಿಪ್ಪರ್, 1 ಇಟಾಚಿ ಮತ್ತು 60 ಸಾವಿರ ರೂ.ಮೌಲ್ಯದ ಮರಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

5 ಪ್ರಕರಣಗಳಲ್ಲಿ, ದಿನೇಶ್ ಮೆದು ಮತ್ತು ಚೆನ್ನಪ್ಪ ಗೌಡ ನೂಜಿ ಎಂಬವರು ಮರಳನ್ನು ಕುಮಾರಧಾರ ನದಿಯಿಂದ ಸಂಗ್ರಹಿಸಿ ಟಿಪ್ಪರ್‌ಗಳಲ್ಲಿ ಮಾರಾಟ ಮಾಡುತ್ತಿರುವ ಕುರಿತು ಟಿಪ್ಪರ್ ಚಾಲಕರುಗಳು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಆರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here