ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕರಾಗಿ ಸಂತೋಷ್ ಕುಮಾರ್ ನೇಮಕ

0

ಪುತ್ತೂರು: ಸುದ್ದಿ ಸಮೂಹ ಸಂಸ್ಥೆಗಳ ಅಂಗವಾಗಿರುವ ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ನೂತನ ಸಂಪಾದಕರಾಗಿ ಸಂತೋಷ್ ಕುಮಾರ್ ಶಾಂತಿನಗರ ನೇಮಕಗೊಂಡಿದ್ದಾರೆ. ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಸುದ್ದಿ ನ್ಯೂಸ್ ಚಾನೆಲ್ ಮುಖ್ಯ ವರದಿಗಾರರಾಗಿರುವ ಸಂತೋಷ್ ಕುಮಾರ್ ಅವರು ಕಳೆದ ಒಂದು ವರ್ಷದಿಂದ ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಸ್ಥಾನೀಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರಿಗೆ ಇದೀಗ ಮುಂಭಡ್ತಿ ನೀಡಲಾಗಿದ್ದು ಸಂಪಾದಕರಾಗಿ ನೇಮಕ ಮಾಡಲಾಗಿದೆ. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ. ಯು.ಪಿ. ಶಿವಾನಂದರವರು ಈ ನೇಮಕ ಮಾಡಿದ್ದಾರೆ. ಕೋಡಿಂಬಾಡಿ ಗ್ರಾಮದ ಶಾಂತಿನಗರ ನಿವಾಸಿಯಾಗಿರುವ ಸಂತೋಷ್ ಕುಮಾರ್ ಅವರು 2024ರ ಮೇ.9ರಿಂದ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here