ಕೌಡಿಚ್ಚಾರ್- ಮಾಡಾವು ಕೈಕಂಬ ಸಂಪರ್ಕ ರಸ್ತೆಗೆ ಮುಕ್ತಿ ಯಾವಾಗ?

0

ಬಡಗನ್ನೂರು: ಅರಿಯಡ್ಕ ಗ್ರಾ.ಪಂ ವ್ಯಾಪ್ತಿಯ ಕೌಡಿಚ್ಚಾರ್- ಮಾಡಾವು ಕೈಕಂಬ  ಸಂಪರ್ಕ ರಸ್ತೆ ತೀರಾ ಹದಗೆಟ್ಟಿದ್ದು ವಾಹನ ಚಲಾಯಿಸಲು ಕಷ್ಟಕರ ಪರಿಸ್ಥಿತಿ ಉಂಟಾಗಿದೆ. ಆಟೋ ರಿಕ್ಷಾ ಚಾಲಕರು ಹರಸಾಹಸ ಪಡುತ್ತಿದ್ದಾರೆ .ಸುಮಾರು 30 ವರ್ಷಗಳ ಮೊದಲು ಈ ರಸ್ತೆ ಡಾಮಾರೀಕರಣ ಮಾಡಲಾಗಿತ್ತು. ಸುಮಾರು 3 ,4 ವರ್ಷಗಳಿಂದ ರಸ್ತೆ ಹೊಂಡ ಬಿದ್ದು ವಾಹನ ಸಂಚಾರಕ್ಕೆ ಕಷ್ಟಕರವಾಗಿದೆ. ಈ ಬಗ್ಗೆ ಅನೇಕ ಬಾರಿ  ಶಾಸಕರಿಗೆ ,ಸಂಸದರಿಗೆ ಹಾಗೂ ,ಸಂಬಂಧ  ಪಟ್ಟ ಅಧಿಕಾರಿ ವರ್ಗದವರಿಗೆ ಮನವಿ ಸಲ್ಲಿಸಿದರೂ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಸಮಸ್ಯೆಗೆ ಸ್ಪಂದನೆ ಸಿಕ್ಕಿಲ್ಲ. ಶಾಸಕ ಸಂಜೀವ ಮಠಂದೂರು ಅವಧಿಯಲ್ಲಿ ಜಿಲ್ಲಾ ಪಂಚಾಯತ್ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ ಲೋಕೋಪಯೋಗಿ ಪರಿವರ್ತಿಸಲಾಗಿದೆ. ಎಂದು ಹೇಳಿಕೊಳ್ಳುತ್ತಾರೆ ಆದರೆ ಲೋಕೋಪಯೋಗಿ ಇಲಾಖೆ ಇನ್ನೂ ಎಚ್ಚೆತ್ತುಕೊಂಡಿಲ್ಲ.ರಸ್ತೆ ಕೆಟ್ಟುಹೋಗಿ ವಾಹನ ಸಂಚಾರಕ್ಕೆ ತೀರಾ ಕಷ್ಟಕರವಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.  

ಸುತ್ತುವರಿದು ವಾಹನ ಸಂಚಾರ:-
ಕೌಡಿಚ್ಚಾರ್ ಭಾಗದಿಂದ ಮಾಡಾವು ಕೈಕಂಬ ಮೂಲಕ  ಅಥವಾ ಇತರ ಭಾಗಗಳಿಗೆ ಪ್ರಯಾಣಿಸಲು ಅತೀ ಹತ್ತಿರದ ಸಂಪರ್ಕ ರಸ್ತೆಯಾಗಿದೆ. ಆದರೆ ರಸ್ತೆ  ಜಲ್ಲಿ ಎದ್ದು  ಹೊಂಡ ಬಿದ್ದು ವಾಹನ ಚಲಾಯಿಸಲು ಕಷ್ಟಕರವಾಗಿದುದರಿಂದ  ವಾಹನ ಚಾಲಕರು  ಸುಮಾರು 10-12 ಕಿ ಮೀ ಸುತ್ತುವರಿದು ಕೌಡಿಚ್ಚಾರ್- ಕುಂಬ್ರ ತಿಂಗಳಾಡಿ ಮೂಲಕ ಮಾಡಾವು ಕೈಕಂಬ  ಭಾಗಕ್ಕೆ ಸಂಚಾರಿಸುತ್ತಿದ್ದಾರೆ.ಇದರಿಂದ ಬಾಡಿಗೆದಾರರಿಗೆ ದುಬಾರಿಯೂ ಜತೆಗೆಸಮಯವು ವ್ಯರ್ಥ .

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ ಹತ್ತಿರದ ರಸ್ತೆ:-
ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿ ಹಾಗೂ ಸುಬ್ರಹ್ಮಣ್ಯ- ಪೆರ್ಲ ರಾಜ್ಯ ಹೆದ್ದಾರಿ ಸಂಪರ್ಕ ಕಲ್ಪಿಸುವ ಹತ್ತಿರದ ರಸ್ತೆ ಇದಾಗಿದೆ. ಸುಬ್ರಹ್ಮಣ್ಯ, ಬೆಳ್ಳಾರೆ ಮೂಲಕ ಕುಂಬ್ರ ಭಾಗಕ್ಕೆ ಬಂದು ಪುನಃ ಕೌಡಿಚ್ಚಾರ್ ಭಾಗಕ್ಕೆ ಬರುವ ಬದಲಾಗಿ ಸುಬ್ರಹ್ಮಣ್ಯ, ಬೆಳ್ಳಾರೆ -ಮಾಡಾವು  ಸಂಪರ್ಕ ರಸ್ತೆಯ  ಕೈಕಂಬ ಪ್ರದೇಶದಿಂದ ನೇರವಾಗಿ  ಕೌಡಿಚ್ಚಾರ್ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಹಾಗೂ ಪೆರ್ಲ ರಾಜ್ಯ ಹೆದ್ದಾರಿ ಸಂಪರ್ಕ ಕಲ್ಪಿಸುವ ಅತೀ ಹತ್ತಿರ ರಸ್ತೆ ಇದಾಗಿದೆ .ಅದುದರಿಂದ ಕೌಡಿಚ್ಚಾರ್ ಮಾಡಾವು ಕೈಕಂಬ ರಸ್ತೆ ಮೇಲ್ದರ್ಜೆಗೆ ಏರಿಸಿ ರಸ್ತೆ ಅಭಿವೃದ್ಧಿ ಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here