ಮಹಾತ್ಮಗಾಂಧಿಯವರ ಗ್ರಾಮ ಸ್ವರಾಜ್ಯದ ಆಶಯದ ಪ್ರಚಾರಕ್ಕಾಗಿ,ಮತದಾರರ ಜಾಗೃತಿಯ ಆಂದೋಲನಕ್ಕಾಗಿ ಮತದಾರರ ‘ಮನ್ ಕಿ ಬಾತ್’ಗಾಗಿ ಪ್ರಧಾನಿ ಮೋದೀಜಿಯವರ ಕ್ಷೇತ್ರ ವಾರಣಾಸಿಗೆ ಭೇಟಿ

0

ಮೋದೀಜಿಯವರು ವಾರಣಾಸಿ ಕ್ಷೇತ್ರಕ್ಕೆ ಮಾಡಿರುವ ಕೆಲಸಗಳಿಗಾಗಿ ಅವರಿಗೆ ಮತ -ಗೆಲುವು ಎಂಬ ಜನಾಭಿಪ್ರಾಯ

ಮಹಾತ್ಮ ಗಾಂಧಿಯವರ ಆಶಯದ ಗ್ರಾಮ ಸ್ವರಾಜ್ಯದ ಚಿಂತನೆಯನ್ನು ದೇಶದಾದ್ಯಂತ ಆಚರಣೆಗೆ ತರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದೀಜಿ ಯವರ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಿ ಅಲ್ಲಿಯ ಜನರನ್ನು ಮಾತನಾಡಿಸಿದ್ದೇವೆ. ಹಲವಾರು ಜನರ ಮನ್ ಕಿ ಬಾತ್ ಕೇಳಿದ್ದೇವೆ. ಮತದಾರರು ರಾಜರು, ಜನ ಪ್ರತಿನಿಧಿಗಳು ಜನಸೇವಕರು ಎಂಬ ಜಾಗೃತಿಯ ಬಗ್ಗೆ ವಿವರಣೆ ನೀಡಿದ್ದೇನೆ. ವಾರಣಾಸಿಯಲ್ಲಿ ಹೆಚ್ಚಿನವರು ಮೋದೀಜಿಯವರು ಆ ಕ್ಷೇತ್ರಕ್ಕೆ ಸಂಸದರಾಗಿ ಆಯ್ಕೆಯಾದ ಮೇಲೆ ಅವರು ಮಾಡಿರುವ ಕೆಲಸ ಕಾರ್ಯಗಳಿಗೆ ಮತ ಎಂದು ಹೇಳಿದ್ದಾರೆ. ಮುಖ್ಯವಾಗಿ ದಿನಕ್ಕೆ ನಾಲೈದು ಗಂಟೆ ಮಾತ್ರ ಇರುತ್ತಿದ್ದ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಿ ದಿನದ 24 ಗಂಟೆ ವಿದ್ಯುತ್ ದೊರೆಯುವಂತೆ ಮಾಡಿದ್ದಾರೆ ಎಂದು ಎಲ್ಲರೂ ಹೇಳಿದ್ದಾರೆ. ರಸ್ತೆಗಳ ಅಗಲೀಕರಣ, ಏರ್‌ಪೋರ್ಟ್‌ಗೆ ಸುಗಮ ಸಂಚಾರ, ಹೊಸ ರೈಲ್ವೇ ಸ್ಟೇಷನ್, ಮೆಡಿಕಲ್‌ ಕಾಲೇಜು ಆಸ್ಪತ್ರೆ, ಐಐಟಿ ಕಾಲೇಜುಗಳ ಸ್ಥಾಪನೆ, ಕಾಶಿ ಕಾರಿಡಾರ್‌ನ ವಿಸ್ತರಣೆ, ಗಂಗಾ ನದಿಯ ಶುದ್ದೀಕರಣ, ಗೂಂಡಾ ಮತ್ತು ಗಲಭೆಗಳ ನಿವಾರಣೆಯ ಬಗ್ಗೆ ಹೇಳಿದ್ದಾರೆ. ಪ್ರವಾಸೋದ್ಯಮದ ಬಗ್ಗೆ ಹೇಳುತ್ತಾ ನೂರು ಜನರು ಬರುತ್ತಿದ್ದ ವಾರಣಾಸಿಗೆ ಸಾವಿರ ಜನರು ಬರುತ್ತಿದ್ದಾರೆ. ಊರು ಅಭಿವೃದ್ಧಿಯಾಗಿದೆ ಎಂದಿದ್ದಾರೆ. ವಾರಣಾಸಿಯಲ್ಲಿ ಭ್ರಷ್ಟಾಚಾರ ಕಡಿಮೆಯಾಗಿದೆ ಆದರೆ ಪೂರ್ಣ ನಿವಾರಣೆಯಾಗಿಲ್ಲ ತಳ ಮಟ್ಟದಲ್ಲಿ ಇನ್ನೂ ಕೂಡಾ ಉಳಿದಿದೆ ಎಂದೂ ಹೇಳಿದ್ದಾರೆ. ವಕೀಲರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಹಾಗೆಯೇ ಮೋದೀಜಿಯವರನ್ನು ವಿರೋಧಿಸಿದ ಕೆಲವರು ಅವರಿಂದ ಕೆಲಸಗಳು ಆಗಿಲ್ಲ, ನಿರುದ್ಯೋಗದ ಸಮಸ್ಯೆ ತುಂಬಾ ಇದೆ, ಅಗ್ನಿ ವೀರದಿಂದಾಗಿ ಮಿಲಿಟರಿಗೆ ಶಿಕ್ಷಣ, ಆರೋಗ್ಯ ಅಭಿವೃದ್ಧಿ ಸಾಕಾಗಿಲ್ಲ, ಭ್ರಷ್ಟಾಚಾರ, ಬೆಲೆಯೇರಿಕೆ ಸಮಸ್ಯೆ ತುಂಬಾ ಇದೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ವಾರಣಾಸಿಯ ಕ್ಷೇತ್ರಕ್ಕೆ ಮೋದೀಜಿಯವರು ಮಾಡಿದ ಉತ್ತಮ ಕೆಲಸಗಳಿಗಾಗಿ ಮುಖ್ಯವಾಗಿ ಅವರಿಗೆ ಓಟು ಎಂದಿದ್ದಾರೆ. ಅವರು ಗೆಲ್ಲಬೇಕೆಂದು ಅಲ್ಲಿಯ ಜನರು ಬಯಸಿದ್ದಾರೆ ಎಂದು ಅವರ ವಿರೋಧಿಗಳಿಗೂ ಗೊತ್ತಿದೆ. ಮೋದೀಜಿಯವರು ಆ ಕ್ಷೇತ್ರಕ್ಕೆ ಏನೂ ಕೆಲಸಮಾಡದೇ ಇರುತ್ತಿದ್ದರೆ ಅವರಿಗೆ ವಾರಣಾಸಿಯ ಕ್ಷೇತ್ರದ ಜನರು ಆ ರೀತಿಯ ಬೆಂಬಲ ನೀಡುತ್ತಿರಲಿಲ್ಲ ಎಂಬ ಸತ್ಯದ ಅರಿವು ಮೋದೀಜಿಯವರಿಗೂ ಅವರ ಪಕ್ಷದವರಿಗೂ ಇದೆ, ಜನರಿಗೂ ಇದೆ. ರಾಹುಲ್ ಗಾಂಥಿ ಕಳೆದ ಬಾರಿ ಅಮೇಠಿಯಲ್ಲಿ ಸೋಲಲು ಆ ಕ್ಷೇತ್ರದ ಅಭಿವೃದ್ಧಿ ಆಗದಿರುವುದು ಒಂದು ಕಾರಣ ಎಂದು ಅಲ್ಲಿಯ ಜನರು ಹೇಳಿದ್ದಾರೆ. ನಮ್ಮ ಕ್ಷೇತ್ರದ ಹಾಗೂ ಇತರ ಎಲ್ಲಾ ಕ್ಷೇತ್ರದ ಜನಪ್ರತಿನಿಧಿಗಳು ಅವರವರ ಸಾಧನೆಯ ಆಧಾರದಲ್ಲಿ ಕ್ಷೇತ್ರದಲ್ಲಿ ಗೆಲ್ಲಬೇಕೇ ಹೊರತು ಏನೂ ಕೆಲಸ ಮಾಡದಿದ್ದರೂ ಊರಿಗೆ ಪ್ರಯೋಜಕಾರಿಯಲ್ಲದಿದ್ದರೂ ಮೋದೀಜಿಯವರ, ರಾಹುಲ್ ಗಾಂಧಿಯವರ ಅಥವಾ ಯಾವುದೇ ನಾಯಕರ ಹೆಸರಲ್ಲಿ ಗೆಲ್ಲಬಾರದೆಂದು, ಮತದಾರರು ಅಂತಹವರನ್ನು ಗೆಲ್ಲಿಸಬಾರದೆಂದು ತಿಳಿಸಲಿಕ್ಕಾಗಿ ನಾವು ಈ ಪ್ರಯತ್ನ ಮಾಡುತ್ತಿದ್ದೇವೆ. ವಾರಣಾಸಿಯಲ್ಲಿ ಸಂಗ್ರಹಿಸಿದ ಅಲ್ಲಿಯ ಜನರ ಮನ್ ಕಿ ಬಾತ್ ನ್ನು ಸುದ್ದಿ ಚಾನೆಲ್‌ನಲ್ಲಿ ನಾಳೆ (ಮೇ 14) ಬಿಡುಗಡೆ ಮಾಡಲಿದ್ದೇವೆ. ಡೆಲ್ಲಿ ಮತ್ತು ಇತರ ಕ್ಷೇತ್ರಗಳಲ್ಲೂ ಜನರ ಮನ್ ಕಿ ಬಾತ್ ನ್ನು ಸಂಗ್ರಹಿಸಿ ಜನತೆಗೆ ನೀಡಲಿದ್ದೇವೆ. ನಮ್ಮ ಆಂದೋಲನವನ್ನು ರಾಜ್ಯದಲ್ಲಿಯೂ ಚಾಲನೆ ಮಾಡಲಿದ್ದೇವೆ.

LEAVE A REPLY

Please enter your comment!
Please enter your name here