ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ವತಿಯಿಂದ ಜಾಗೃತಿ 2024 ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

0

ಪುತ್ತೂರು: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ವತಿಯಿಂದ ಜಾಗೃತಿ 2024 ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯು ಮದ್ಯಪಾನ-ಧೂಮಪಾನ ಮಾದಕ ವ್ಯಸನ ಮುಕ್ತ ಸಮಾಜ ವಿಷಯದ ಕುರಿತಾಗಿ ಆಯೋಜಿಸಲಾಗಿದೆ. ಸ್ಪರ್ಧಾಳುಗಳು ಕಲರ್ ಪೆನ್ಸಿಲ್ಸ್, ವಾಟರ್ ಕಲರ್, ಯಾವುದೇ ಮಾಧ್ಯಮಗಳನ್ನು ಬಳಸಬಹುದು. ವಿದ್ಯಾರ್ಥಿಗಳು ಹಾಗೂ ಆಸಕ್ತ ಎಲ್ಲಾ ವಯೋಮಾನದವರು ಭಾಗವಹಿಸಬಹುದು.

ಕಲಾಕೃತಿಗಳನ್ನು ಅಂಚೆ ಮೂಲಕ ಕಳುಹಿಸಿ ಕೊಡುವ ಕೊನೆಯ ದಿನಾಂಕ: 10-06-2024
ಕಲಾಕೃತಿಯ ಹಿಂಭಾಗದಲ್ಲಿ ಬರೆಯಬೇಕಾದ ಮಾಹಿತಿ : ಹೆಸರು, ಹುಟ್ಟಿದ ದಿನಾಂಕ, ಮನೆ ವಿಳಾಸ, ತಾಲೂಕು, ಜಿಲ್ಲೆ, ಪಿನ್‌ ಕೋಡ್, ವಾಟ್ಸಾಪ್ ನಂಬರ್.
ಕಲಾಕೃತಿಗಳನ್ನು ಅಂಚೆ ಮೂಲಕ ಕಳುಹಿಸಿಕೊಡಬೇಕಾದ ವಿಳಾಸ: ಮಹೇಶ್ ಕೆ ಸವಣೂರು, ಅಧ್ಯಕ್ಷರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಅಶ್ವಿನಿ ಕಾಂಪ್ಲೆಕ್ಸ್, ಸವಣೂರು ಗ್ರಾಮ ಮತ್ತು ಅಂಚೆ, ಕಡಬ ತಾಲೂಕು, ದ.ಕ 574202

ಸ್ಪರ್ಧೆಗಳ ವಿವರ:
30 ಸೆಂ.ಮೀ X 20 ಸೆಂ.ಮೀ (A4- size) ಡ್ರಾಯಿಂಗ್ ಹಾಳೆಯಲ್ಲಿ ಯಾವುದೇ ಮಾಧ್ಯಮದಲ್ಲಿ ಚಿತ್ರ ಬಿಡಿಸುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ವಯಸ್ಸಿನ ಮಿತಿ ಇರುವುದಿಲ್ಲ. ಕಲಾಕೃತಿಯು ನಾವು ನೀಡಿರುವ ವಿಷಯ ವಸ್ತುವನ್ನು ಪ್ರಸ್ತುತಪಡಿಸಿರಬೇಕು, ಕಲಾಕೃತಿಯನ್ನು ಹಿಂದಿರುಗಿಸಲಾಗುವುದಿಲ್ಲ, ತೀರ್ಪುಗಾರರ ತೀರ್ಮಾನವೇ ಅಂತಿಮ, ಭಾಗವಹಿಸಿದವರೆಲ್ಲರಿಗೂ ಅಭಿನಂದನಾಪತ್ರ ನೀಡಿ ಗೌರವಿಸಲಾಗುವುದು, ಅತ್ಯುತ್ತಮ ಕಲಾಕೃತಿಗೆ ಪ್ರಥಮ ನಗದು ರೂ.5,000/-, ದ್ವಿತೀಯ ನಗದು 3,000/- ಮತ್ತು ತೃತೀಯ ನಗದು ರೂ.2,000/- ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದಿಸಲಾಗುವುದು ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಕೆ.ಸವಣೂರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here