ಅರಿಕ್ಕಿಲ ನೂರುಲ್ ಹುದಾ ಜುಮಾ ಮಸ್ಜಿದ್‌ನಲ್ಲಿ ದರ್ಸ್ ಉದ್ಘಾಟನೆ

0

ಪುತ್ತೂರು: ನೂರುಲ್ ಹುದಾ ಜುಮಾ ಮಸೀದಿ ಅರಿಕ್ಕಿಲ ಇಲ್ಲಿ ನೂತನ ದರ್ಸ್ ಮೇ.೯ರಂದು ಉದ್ಘಾಟನೆಗೊಂಡಿತು. ಜಮಾಅತ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ಕೇರಳ ಜಂಇಯತ್ತುಲ್ ಉಲಮಾ ಕೇಂದ್ರ ಸಮಿತಿ ಕಾರ್ಯದರ್ಶಿ ಶೈಖುನಾ ಮುಹ್ಯಿಸ್ಸುನ್ನ ಪೊನ್ಮಳ ಅಬ್ದುಲ್ ಖಾದರ್ ಮುಸ್ಲಿಯಾರ್ ದರ್ಸ್‌ನ್ನು ಉದ್ಘಾಟಿಸಿ ಹಿತವಚನ ನೀಡಿದರು.

ಅರಿಕ್ಕಿಲ ಮುದರ್ರಿಸ್ ಜುನೈದ್ ಸಖಾಫಿ ಅಲ್ ಹಿಕಮಿ ಜೀರ್ಮುಕ್ಕಿ, ಉಕ್ಕುಡ ಮುದರ್ರಿಸ್ ಹಾಫಿಲ್ ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮೂಡಬಿದ್ರೆ ದ್ಸಿಕ್ರಾ ಮುದರ್ರಿಸ್ ಹಾರಿಸ್ ಅಹ್ಸನಿ ಕಬಕ, ಜಾರಿಗೆಬೈಲು ಮುದರ್ರಿಸ್ ಯಾಸೀನ್ ಸಖಾಫಿ ಕೃಷ್ಣಾಪುರ, ಮದ್ರಸ ಅಧ್ಯಾಪಕರಾದ ಮುಹಮ್ಮದ್ ಮದನಿ ಇರ್ದೆ, ಸಿದ್ದೀಕ್ ಮದನಿ ಕರ್ಪಾಡಿ, ಯುವ ಉದ್ಯಮಿ ಲತೀಫ್ ಹರ್ಲಡ್ಕ, ಜಮಾಅತ್ ಪ್ರಮುಖರಾದ ಅಬ್ದುಲ್ ಖಾದರ್ ಹಾಜಿ ಮೇರ್ಲ, ಇಬ್ರಾಹಿಂ ಹಾಜಿ, ಹನೀಫ್ ಕೆ ಎಂ, ಎಂ ಕೆ ಮುಹಮ್ಮದ್ ಕುಂಞಿ, ಎಂ. ಕೆ ಅಬ್ದುರ್ರಝಾಕ್, ಬಿ.ಕೆ ಯೂಸುಫ್, ಅಬ್ಬಾಸ್ ಡಿ ಎ, ಹಮೀದ್ ಹಾಜಿ ವಿ.ಕೆ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪವಿತ್ರ ಹಜ್ ಯಾತ್ರೆಗೆ ತೆರಳುತ್ತಿರುವ ಜಮಾಅತ್ ಲೆಕ್ಕ ಪರಿಶೋಧಕರಾದ ಹೋನೆಸ್ಟ್ ಇಸ್ಮಾಯಿಲ್‌ರವರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here