ಪುತ್ತೂರಿನ ಶೈಕ್ಷಣಿಕ ಕ್ಷೇತ್ರದಲ್ಲೊಂದು ಮೈಲಿಗಲ್ಲು – ಸುದಾನ ಪದವಿ ಪೂರ್ವ ಕಾಲೇಜು ಆರಂಭ

0

ಪುತ್ತೂರು: ಪುತ್ತೂರನ್ನು ಒಳಗೊಂಡಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ(ಕರಾವಳಿ ಕರ್ನಾಟಕ)ಯಲ್ಲಿ 1836ರಲ್ಲಿ ಆಧುನಿಕ ಶಿಕ್ಷಣದ ಮೊದಲ ಬೀಜವನ್ನು ಭಿತ್ತಿದವರು ಬಾಸೆಲ್ ಮಿಷನ್ ಸಂಸ್ಥೆ. 1889ರಲ್ಲಿ ಪುತ್ತೂರಲ್ಲಿ ತನ್ನ ಕೇಂದ್ರವನ್ನು ತೆರೆದ ಈ ಸಂಸ್ಥೆ ಪುತ್ತೂರು, ಬೆಳ್ತಂಗಡಿ ಮತ್ತು ಸುಳ್ಯದಲ್ಲಿ 7 ಪ್ರಾಥಮಿಕ ಶಾಲೆಗಳನ್ನು ನಡೆಸುತ್ತಿತ್ತು. ಪ್ರಸ್ತುತ . ಸುದಾನ ಶಿಕ್ಷಣ ಸಂಸ್ಥೆಗಳಿರುವ ಕ್ಯಾಂಪಸಿನೊಳಗೆ 1900ರ ಹೊತ್ತಿಗೆ ಒಂದು ಪ್ರಾಥಮಿಕ ಶಾಲೆ ಮತ್ತು ಒಂದು ಕೌಶಲ್ಯ ತರಬೇತಿ ಕೇಂದ್ರವನ್ನು ನಡೆಸುತ್ತಿತ್ತು. ಅಂದರೆ, 137 ವರ್ಷಗಳ ಹಿಂದೆಯೇ ನಾಡಿನ ಶೈಕ್ಷಣಿಕ ಕ್ರಾಂತಿಗೆ ನಾಂದಿಯನ್ನು ಹಾಡಿದ ಬಾಸೆಲ್ ಮಿಷನ್ ಸಂಸ್ಥೆಯ ಮೂಲದಿಂದ “ಸುದಾನ ವಿದ್ಯಾ ಸಂಸ್ಥೆ”ಗಳ ಉದಯವಾಗಿದೆ.

ವಿಸ್ತರಿತ ಶೈಕ್ಷಣಿಕ ಸೇವೆಯಲ್ಲೊಂದು ಹೊಸ ಹೆಜ್ಜೆ:
1989ರಲ್ಲಿ ಪುತ್ತೂರಿನಲ್ಲಿ ಬಾಸೆಲ್ ಮಿಷನ್‌ನ ಸುದಾನ ಕೇಂದ್ರವು ಶತಮಾನೋತ್ಸವನ್ನು ಆಚರಿಸಿದ್ದು, ಆ ಸಂದರ್ಭದಲ್ಲಿ ಅದರ ನೆನಪಿನಲ್ಲಿ “ಸುದಾನ ಬಾಲವಾಡಿ” ಮತ್ತು ನಂತರ “ಸುದಾನ ವಸತಿ ಶಾಲೆ”ಯನ್ನು ಆರಂಭಿಸಲಾಯಿತು. ಕಳೆದ 33 ವರ್ಷಗಳಲ್ಲಿ “ಸುದಾನ ರೆಸಿಡೆನ್ಸಿಯಲ್ ಶಾಲೆ”ಯು ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದೆ. ಪ್ರಸ್ತುತ ಇದೇ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆಯನ್ನಿಟ್ಟು, ಅದೇ ಕ್ಯಾಂಪಸ್ಸಿನೊಳಗೆ 2024-25ರ ಶೈಕ್ಷಣಿಕ ವರ್ಷದಿಂದಲೇ ಹೊಸ “ಸುದಾನ ಪದವಿ ಪೂರ್ವ” ಕಾಲೇಜನ್ನು ಆರಂಭಿಸಿದೆ. ಇದೀಗ ಪುತ್ತೂರಿನ ಬಹು ನಿರೀಕ್ಷಿತ ಪದವಿ ಪೂರ್ವ ಕಾಲೇಜು ಆರಂಭದೊಂದಿಗೆ ವಿಸ್ತರಿತ ಶೈಕ್ಷಣಿಕ ಸೇವೆಯಲ್ಲೊಂದು ಸುದಾನ ವಿದ್ಯಾಸಂಸ್ಥೆಯು ಹೊಸ ಹೆಜ್ಜೆಯನ್ನು ಇಡುತ್ತಿದೆ.

ವೃತ್ತಿಪರ ಶಿಕ್ಷಣದೊಂದಿಗೆ ದಾಖಲಾತಿ ಆರಂಭ:
ಈ ಶೈಕ್ಷಣಿಕ ವರ್ಷದ(2024-25) ತರಗತಿಗಳು ಜೂನ್ ತಿಂಗಳಲ್ಲಿ ಆರಂಭಗೊಳ್ಳಲಿದ್ದು, ಈಗಾಗಲೇ ದಾಖಲಾತಿ ಆರಂಭಗೊಂಡಿದೆ. ಪ್ರಸ್ತುತ ವಿಜ್ಞಾನ ವಿಭಾಗದಲ್ಲಿ PCMB ಮತ್ತು PCMC ಹಾಗೂ ವಾಣಿಜ್ಯ ವಿಭಾಗದಲ್ಲಿ SCBA ಸಂಯೋಜನೆಗಳನ್ನು ಹೊಂದಿರುತ್ತದೆ. ಇದರೊಂದಿಗೆ ವೃತ್ತಿಪರ ಶಿಕ್ಷಣಕ್ಕೆ ಅಗತ್ಯವಿರುವ ಎಇಇ JEE mains Advanced/NEET/KCET/NATA/JEE ARCA/C.A. Foundation/CS/IBPS ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿರಂತರ ತರಬೇತಿಯನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ.

ಸುಮಾರು 1200 ವಿದ್ಯಾರ್ಥಿಗಳು:
ಈಗಾಗಲೇ ಸುದಾನ ವಿದ್ಯಾಸಂಸ್ಥೆಯು ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಪುತ್ತೂರಿನ ಪ್ರಧಾನ ವಿದ್ಯಾಸಂಸ್ಥೆಯಾಗಿ ಹೊರ ಹೊಮ್ಮಿದೆ. ಸಂಸ್ಥೆಯು ಕೆ.ಜಿ ವಿಭಾಗದಿಂದ ಎಸೆಸ್ಸೆಲ್ಸಿ ವಿಭಾಗದವರೆಗೆ ಶಿಕ್ಷಣವನ್ನು ನೀಡುತ್ತಿದ್ದು ಕ್ಯಾಂಪಸ್ ತುಂಬಾ ಪುಟಾಣಿಗಳ ಕಲರವದ ಜೊತೆಗೆ ಹಿರಿಯ ವಿದ್ಯಾರ್ಥಿಗಳ ಬೆರೆಯುವಿಕೆಯೊಂದಿಗೆ ತುಂಬಿ ತುಳುಕುತ್ತಿದೆ. ಇದೀಗ ಸುದಾನ ಕ್ಯಾಂಪಸ್ಸಿನಲ್ಲಿ ಸುಮಾರು 1200 ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದು ಇದೀಗ ಇದಕ್ಕೆ ಪೂರಕವೆಂಬಂತೆ ಪದವಿ ಪೂರ್ವ ಶಿಕ್ಷಣವನ್ನು ಒಂದೇ ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿಗಳಿಗೆ ನೀಡುವತ್ತ ಹೆಜ್ಜೆಯಿಟ್ಟಿದ್ದು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರುವಲ್ಲಿ ಸಫಲವಾಗುವುದರ ಜೊತೆಗೆ ಪುತ್ತೂರಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ನಾಂದಿಯಾಡುತ್ತಿದೆ.
ಈ ಶಿಕ್ಷಣ ಸಂಸ್ಥೆಯ ಕ್ಯಾಂಪಸ್ ಪೂರ್ಣವಾಗಿ ಗಿಡಮರಗಳ ಹಸಿರು ಹೊದಿಕೆಯೊಳಗಿದ್ದು, ಪರಿಸರ ಸ್ನೇಹಿ ಪರಿಕಲ್ಪನೆಯನ್ನು ವಾಸ್ತವದಲ್ಲಿ ಕಾಣುವುದು ಸುದಾನದ ಹೆಗ್ಗಳಿಕೆ. ಇದಕ್ಕಾಗಿಯೇ ಸುದಾನ ಶಿಕ್ಷಣ ಸಂಸ್ಥೆಗಳು ದಕ್ಷಿಣ ಕನ್ನಡ ಜಿಲ್ಲಾ ಮಟ್ಟ ಮಾತ್ರವಲ್ಲದೇ, ಕರ್ನಾಟಕ ರಾಜ್ಯ ಮಟ್ಟದ ಅತ್ಯಂತ ಒಳ್ಳೆಯ ಪರಿಸರ ಸ್ನೇಹಿ ಕ್ಯಾಂಪಸನ್ನು ಹೊಂದಿರುವ ಸಂಸ್ಥೆ ಎಂಬ ಪ್ರಶಸ್ತಿಯನ್ನು ಗಳಿಸಿದೆ. ಇದರೊಂದಿಗೆ ಈ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳ ಬೌಧಿಕ ಬೆಳವಣಿಗೆಗಾಗಿ ಶಿಕ್ಷಣ ನೀಡುವ ಉದ್ದೇಶ ಹೊಂದಿದ್ದು, ಅದರೊಂದಿಗೆ ನಿರಂತರ ಕಲಿಕೆ, ಶಿಸ್ತು, ಮಾನವೀಯ ಮೌಲ್ಯಗಳೊಂದಿಗೆ, ಬದುಕನ್ನು ಕಟ್ಟಿಕೊಳ್ಳಲು ಪೂರಕವಾದ ಸಮಗ್ರ ವ್ಯಕ್ತಿತ್ವ ವಿಕಸನವನ್ನು ದೃಷ್ಟಿಯಲ್ಲಿಟ್ಟುಕೊಂಡು ವಿದ್ಯಾರ್ಥಿ ಸ್ನೇಹಿ ಪರಿಕಲ್ಪನೆಯನ್ನು ವಾಸ್ತವ ರೂಪದಲ್ಲಿ ಕಾಣಬೇಕೆಂಬ ಕನಸನ್ನು ನನಸಾಗಿ ಮಾಡಬೇಕೆಂಬ ಉದ್ದೇಶವನ್ನಿಟ್ಟುಕೊಂಡಿದೆ. ಸಂಸ್ಥೆಯಲ್ಲಿ ಅನುಭವಿ ಉಪನ್ಯಾಸಕರ ಬೋಧನೆ ಮತ್ತು ಮಾರ್ಗದರ್ಶನದೊಂದಿಗೆ, ಕಾಲೇಜು ವಾಹನ, ವಸತಿ ವ್ಯವಸ್ಥೆ, ಪ್ರಯೋಗಾಲಯಗಳು, ಗ್ರಂಥಾಲಯ, ಕ್ಯಾಂಟಿನ್ ಹಾಗೂ ವಿಶಾಲ ಕ್ರೀಡಾಂಗಣ ಮತ್ತು ಇತರ ಸೌಕರ್ಯಗಳು ಸುದಾನ ಸಂಸ್ಥೆಯಲ್ಲಿವೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9731640407 ಅಥವಾ 08251-238604 ನ್ನು ಸಂಪರ್ಕಿಸಬಹುದೆAದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

ಕ್ಯಾಂಪಸ್ ವೈಶಿಷ್ಟ್ಯತೆಗಳು..
*ಪರಿಸರಸ್ನೇಹಿ ಹಸಿರು ಹೊದಿಕೆಯ ಕ್ಯಾಂಪಸ್
*ವಿಶಾಲ ಕ್ರೀಡಾಂಗಣ *ಸುಸಜ್ಜಿತ ಕಂಪ್ಯೂಟರ್ ಸೆಂಟರ್
*ಬಸ್ ಸೌಕರ್ಯ *ಆಡಿಟೋರಿಯಂ *ಗ್ರಂಥಾಲಯ
*ಉತ್ತಮ ಮೂಲ ಸೌಕರ್ಯ *ಕ್ಯಾಂಟೀನ್ ವ್ಯವಸ್ಥೆ
*ಹುಡುಗ/ಹುಡುಗಿಯರಿಗೆ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ
*ಕೋ-ಆಪರೇಟಿವ್ ಸೊಸೈಟಿ *ಅಗ್ನಿ ಸುರಕ್ಷತೆ
*24 ಗಂಟೆ ಸಿಸಿ ಕ್ಯಾಮೆರಾ ಕಣ್ಗಾವಲು
*ಅಭಿವೃದ್ಧಿ ಅಧ್ಯಯನ ಕೇಂದ್ರ

ಕೋರ್ಸ್ ಗಳು..
*ವಿಜ್ಞಾನ ವಿಭಾಗ
ಪಿಸಿಎಂಬಿ/ಪಿಸಿಎಂಸಿ(ಫಿಸಿಕ್ಸ್,ಕೆಮಿಸ್ಟ್ರಿ,ಮ್ಯಾಥ್ಸ್,ಬಯೋಲಜಿ,ಕಂಪ್ಯೂಟರ್ ಸೈನ್ಸ್)
*ಕಾಮರ್ಸ್ ವಿಭಾಗ
ಎಸ್‌ಸಿಬಿಎ(ಸ್ಟ್ಯಾಟಿಸ್ಟಿಕ್ಸ್,ಕಂಪ್ಯೂಟರ್ ಸೈನ್ಸ್,ಬಿಸಿನೆಸ್ ಸ್ಟಡೀಸ್,ಎಕೌಂಟೆನ್ಸಿ)
*ಇಂಗ್ಲೀಷ್/ಕನ್ನಡ/ಹಿಂದಿ

LEAVE A REPLY

Please enter your comment!
Please enter your name here