ಮಳೆಗಾಲವೂ ಬಂತು ಶಾಲಾ-ಕಾಲೇಜುಗಳು ರಿ ಓಪನ್ ಆಗ್ತಿದೆ-ಮಳೆಗಾಲಕ್ಕೆ ಬೇಕಾದ ಸಿದ್ಧತೆ ಮತ್ತು ಶಾಲಾ ಐಟಂಗಳ ಖರೀದಿಗಾಗಿ ನಿಮ್ಮ ಆಯ್ಕೆಯಾಗಿರಲಿ ಶ್ರೀಧರ್ ಭಟ್ ಬ್ರದರ್ಸ್ ಶಾಪ್

0

ಪುತ್ತೂರು: ಬೇಸಿಗೆ ರಜೆ ಮುಗಿದು ಮಕ್ಕಳೆಲ್ಲಾ ಶಾಲಾ-ಕಾಲೇಜುಗಳತ್ತ ಮುಖ ಮಾಡುವ ದಿನ ಇನ್ನೇನು ಸಮೀಪಿಸುತ್ತಿದೆ. ಬಿಸಿಲಿನ ಧಗೆಯಲ್ಲಿ ಬೆಂದು, ಬೆವರಿನಲ್ಲಿ ಮಿಂದು ಸುಸ್ತಾದವರಿಗೆ ಮಳೆ ತಂಪನ್ನೆರೆಯಲು ಸಜ್ಜಾಗುತ್ತಿದೆ.

ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಕೆಲವೊಂದು ಅವಶ್ಯಕ ತಯಾರಿಗಳನ್ನು ನಾವೆಲ್ಲಾ ಮಾಡಿಕೊಳ್ಳಲೇಬೇಕಾಗುತ್ತದೆ. ಅದರಲ್ಲೂ ಮನೆಗಳಲ್ಲಿ ಶಾಲೆ-ಕಾಲೇಜುಗಳಿಗೆ ಹೋಗುತ್ತಿರುವ ಮಕ್ಕಳಿದ್ದರೆ ಅವರಿಗಾಗಿ, ರೈನ್ ಕೋಟ್, ಕೊಡೆ, ಟಿಫಿನ್ ಬಾಕ್ಸ್ ಅದಕ್ಕೊಂದು ಗಟ್ಟಿ ಮತ್ತು ಚೆಂದದ ಟಿಫಿನ್ ಬ್ಯಾಗ್, ಇನ್ನು ಪುಸ್ತಕಗಳನ್ನು ತುಂಬಿಸಿಕೊಂಡು ಹೋಗಲೊಂದು ಬ್ಯಾಗ್.. ಅವಶ್ಯಕ ನೋಟ್ ಬುಕ್, ಪೆನ್ ಮತ್ತು ಇತರೇ ಸ್ಟಡಿ ಮೆಟೀರಿಯಲ್ಸ್.. ಇವುಗಳೆಲ್ಲವನ್ನು ಖರೀದಿಸಿ ಮಕ್ಕಳನ್ನು ಶಾಲೆಗೆ ಸಜ್ಜುಗೊಳಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆಯಬೇಕು!

ಇವೆಲ್ಲ ವಸ್ತುಗಳ ಖರೀದಿಗಾಗಿ ನೀವು ಪೇಟೆ ಅಲೆಯಬೇಕಾಗಿಲ್ಲ! ಕಳೆದ ಎಂಟು ದಶಕಗಳಿಂದ ಪುತ್ತೂರಿನ ಸುತ್ತಮುತ್ತಲಿನ ಗ್ರಾಹಕರಿಗೆ ಗುಣಮಟ್ಟದ ಸೇವೆಗಳನ್ನು ಒದಗಿಸಿಕೊಂಡು ಬರುತ್ತಿರುವ, ಇಲ್ಲಿನ ಮುಖ್ಯರಸ್ತೆಯಲ್ಲಿರುವ ಶ್ರೀಧರ್ ಭಟ್ ಬ್ರದರ್ಸ್ ಗೊಮ್ಮೆ ಭೇಟಿ ಕೊಟ್ಟರೆ ಮುಗಿಯಿತು. ನಿಮ್ಮ ಮಕ್ಕಳಿಗೆ ಮತ್ತು ನಿಮಗೆ ಅಗತ್ಯವಾಗಿರುವ ಮಳೆಗಾಲ ಸಂಬಂಧಿ ಮತ್ತು ಶಾಲಾ ಸಂಬಂಧಿ ಎಲ್ಲಾ ವಸ್ತುಗಳು ಇಲ್ಲಿ ಉತ್ತಮ ಗುಣಮಟ್ಟದಲ್ಲಿ ಮತ್ತು ಕೈಗೆಟಕುವ ದರದಲ್ಲಿ ಲಭ್ಯವಿದೆ.

ಹಾಗಾದ್ರೆ ಇನ್ನೇಕೆ ತಡ, ನಿಮ್ಮ ಮಕ್ಕಳಿಗೆ ಬೇಕಾದ ಶಾಲಾ ವಸ್ತುಗಳು ಮತ್ತು ಮಳೆಗಾಲವನ್ನು ಎದುರಿಸಲು ಬೇಕಾದ ರೈನ್ ಕೋಟ್ – ಕೊಡೆ ಮುಂತಾದವುಗಳನ್ನು ಖರೀದಿಸಲು ಆದಷ್ಟು ಬೇಗ ಶ್ರೀಧರ್ ಭಟ್ ಬ್ರದರ್ಸ್ ಶಾಪ್ ಗೊಮ್ಮೆ ಭೇಟಿಕೊಟ್ಟು ನೋಡಿ.

LEAVE A REPLY

Please enter your comment!
Please enter your name here