ಪುತ್ತೂರು: ಮುಂಡೂರು ಗ್ರಾಮದ ಮುಹ್ಯುದ್ದೀನ್ ಜುಮ್ಮಾ ಮಸೀದಿ ಇದರ ಆಡಳಿತ ಸಮಿತಿ ಕುವ್ವತ್ತುಲ್ ಇಸ್ಲಾಂ ಜಮಾಹತ್ ಕಮಿಟಿಯ ಮಹಾಸಭೆಯು ಮೇ.13 ರಂದು ನಡೆಯಿತು. ಮಹಾಸಭೆಯ ಅಧ್ಯಕ್ಷತೆಯನ್ನು ಜಮಾಹತ್ ಗೌರವಾಧ್ಯಕ್ಷ ಮುಹಮ್ಮದ್ ಹಾಜಿ ಶೇಖಮಲೆಯವರು ವಹಿಸಿದ್ದರು. ಖತೀಬ್ ಉಸ್ತಾದ್ ಯೂಸುಫ್ ಫೈಝಿಯವರು ದುಆ ನೆರವೇರಿಸಿ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಉಮ್ಮರ್ ಶಾಫಿ ಪಾಪೆತ್ತಡ್ಕ ವರದಿ ಮಂಡಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕೊಂಬಾಳಿ, ಉಪಾಧ್ಯಕ್ಷ ಇಬ್ರಾಹಿಂ ಬೊಳ್ಳಮೆ, ಮುಹಲ್ಲಿಂ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಇಂಜಿನಿಯರ್ ಉಮ್ಮರ್ ಶಾಫಿ ಪಾಪೆತ್ತಡ್ಕ, ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಜೆ ಪಾಪೆತ್ತಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಉಮ್ಮರ್ ಕೆ.ಪಿ ಕಾಳಿಂಗಹಿತ್ಲು, ಕಾರ್ಯದರ್ಶಿಯಾಗಿ ಅಶ್ರಫ್ ಆನಾಜೆ, ಕೋಶಾಧಿಕಾರಿಯಾಗಿ ಮಹಮ್ಮದ್ ಹಾಜಿ ದರ್ಕಾಸ್ ಹಾಗೂ ಕಾರ್ಯಾಕಾರಿ ಸಮಿತಿ ಸದಸ್ಯರಾಗಿ ಇಸ್ಮಾಯಿಲ್ ಹಾಜಿ ಕೊಂಬಾಳಿ, ಹನೀಫ್ ಐಡಿ ನರಿಮೊಗರು, ಇಬ್ರಾಹಿಂ ಬೊಳ್ಳಮೆ, ಉಸ್ಮಾನ್ ನೆಕ್ಕಿಲ್, ಇಬ್ರಾಹಿಂ ಪಾಪೆತ್ತಡ್ಕ, ಯಾಕೂಬ್ ಪಾಪೆತ್ತಡ್ಕ, ಸುಲೈಮಾನ್ ಪರಮಾರ್ಗ, ಶಮ್ಮೂನ್ ಪಾಪೆತ್ತಡ್ಕ, ಇಬ್ರಾಹಿಂ ಹಿಂದಾರ್, ರಮ್ಲಕುಂಞ ನಾಡಾಜೆ, ಉಸ್ಮಾನ್ ಪಾಪೆತ್ತಡ್ಕ, ಪುತ್ತು ಕೊಂಬಾಳಿ, ಸಿ.ಕೆ ಅಬ್ದುಲ್ಲ, ಮುಹಮ್ಮದ್ ಕುಂಞಿ ಪಾಪೆತ್ತಡ್ಕ, ಅಬ್ಬಾಸ್ ಚೆಡವು
ಇಸ್ಮಾಯಿಲ್ ಪಾಪೆತ್ತಡ್ಕರನ್ನು ಆಯ್ಕೆ ಮಾಡಲಾಯಿತು. ನೂತನ ಕಾರ್ಯದರ್ಶಿ ಉಮ್ಮರ್ ಕೆ.ಪಿ ಕಾಳಿಂಗಹಿತ್ಲು ವಂದಿಸಿದರು.