ಪುತ್ತೂರು: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ 2024-25ನೇ ಸಾಲಿನಲ್ಲಿ ಶೇ.50ರ ಸಹಾಯದನದಲ್ಲಿ 2ಎಚ್.ಪಿ ಮೇವು ಕತ್ತರಿಸುವ ಯಂತ್ರಗಳ ಸರಬರಾಜಿಗೆ ಹೈನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಮೇ.20 ಕೊನೆ ದಿನಾಂಕವಾಗಿದೆ. ಹೈನುಗಾರರು ಆರ್‌ಟಿಸಿ(ಪಹಣಿಪತ್ರ), ಆಧಾರ್ ಕಾರ್ಡ್, ತಮ್ಮ ಭಾವಚಿತ್ರ, ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಪ್ರತಿಯೊಂದಿಗೆ ಪಶುಪಾಲನಾ ಇಲಾಖೆಯನ್ನು ಸಂಪರ್ಕಿಸುವುದು. ಹೆಚ್ಚಿನ ಮಾಹಿತಿಗಾಗಿ ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ) ಪಶು ಆಸ್ಪತ್ರೆ ಅಥವಾ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.