ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಪುತ್ತೂರು ಝೋನ್ ವಾರ್ಷಿಕ ಕೌನ್ಸಿಲ್ ಸಭೆಯು ಅಧ್ಯಕ್ಷ ಅಬೂ ಶಝ ಅಬ್ದುಲ್ ರಝಾಕ್ ಖಾಸಿಮಿ ಕೂರ್ನಡ್ಕ ರವರ ಅಧ್ಯಕ್ಷತೆಯಲ್ಲಿ ಬನ್ನೂರು ಸುನ್ನೀ ಸೆಂಟರ್ ನಲ್ಲಿ ನಡೆಯಿತು. ಎಸ್ ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಮುರ ಅವರು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಮೀದ್ ಕೊಯಿಲ ಶುಭ ಹಾರೈಸಿದರು. ಸೋಷಿಯಲ್ ಕಾರ್ಯದರ್ಶಿ ಅಬ್ದುಲ್ ಅಝೀಝ್ ಚೆನ್ನಾರ್ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಲ ಸಾಂಘಿಕ ತರಬೇತಿ ನೀಡಿದರು. ಜಿಲ್ಲಾ ದುವಾ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಸಾಂಘಿಕ ಚುನಾವನಾ ಪ್ರಕ್ರಿಯೆ ನಡೆಸಿದರು.
ಝೋನ್ ಸಮಿತಿಯಲ್ಲಿ ಕೆಲವೊಂದು ಬದಲಾವಣೆ ತರುವುದರೊಂದಿಗೆ ಹಾಲಿ ಸಮಿತಿಯನ್ನು ಮುಂದುವರಿಸಲಾಗಿದೆ. ನೂತನ ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಚೆನ್ನಾರ್ ಹಾಗೂ ಸೋಷಿಯಲ್ ಕಾರ್ಯದರ್ಶಿಯಾಗಿ ನೌಷಾದ್ ಸಅದಿ ಗಟ್ಟಮನೆ ಅವರನ್ನು ಆಯ್ಕೆಮಾಡಲಾಯಿತು. ತೆರವಾದ ಕೆಲವು ಸದಸ್ಯರ ಸ್ಥಾನಕ್ಕೆ ಶಾಹುಲ್ ಹಮೀದ್ ಕಬಕ, ಸಮೀರ್ ಕೊಡಿಪ್ಪಾಡಿ, ಅಬ್ದುಲ್ಲಾ ಕಾವು, ಶಮೀರ್ ಬನ್ನೂರು, ಮುನೀರ್ ಹನೀಫಿ ಅರಿಕ್ಕಿಲ, ಖಾಸಿಮ್ ರೆಂಜ, ಉಮರ್ ಕೆಪಿ ನರಿಮೊಗರು, ತ್ವಹಾ ಸಅದಿ ಈಶ್ವರಮಂಗಲ ರವರನ್ನು ಆಯ್ಕೆಮಾಡಲಾಯಿತು. ಅಧ್ಯಕ್ಷರು ಪವಿತ್ರ ಹಜ್ ಯಾತ್ರೆಗೆ ಹೋಗುವುದರಿಂದ ಪ್ರಭಾರ ಅಧ್ಯಕ್ಷರಾಗಿ ಉಪಾಧ್ಯಕ್ಷ ಸುಲೈಮಾನ್ ಸಅದಿ ಪಾಟ್ರಕೋಡಿ ರವರಿಗೆ ಜವಾಬ್ದಾರಿಯನ್ನು ವಹಿಸಿಕೊಡಲಾಗಿದೆ.
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಸಖಾಫಿ ಕರ್ನೂರು ರವರು ಸ್ವಾಗತಿಸಿ ದುವಾ ಕಾರ್ಯದರ್ಶಿ ಹೈದರ್ ಸಖಾಫಿ ಬುಡೋಳಿ ವಂದಿಸಿದರು