ನ್ಯೂ ಜೆನ್ ಸ್ವಿಫ್ಟ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಭಾರತ್

0

ಪುತ್ತೂರು : ಕಾರು ಉತ್ಪಾದನೆ ಹಾಗೂ ಮಾರಾಟ ಸೇವೆಯಲ್ಲೂ ಅದ್ವಿತೀಯ ಸ್ಥಾನ ಪಡೆದುಕೊಂಡಿರುವ ಮಾರುತಿ ಸುಝುಕಿ ಅರೆನಾ ನಾಲ್ಕನೇ ತಲೆಮಾರಿನ , ಬಹು ನಿರೀಕ್ಷಿತ ವಿನೂತನ ಸ್ವಿಫ್ಟ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಜಿಲ್ಲೆಯ ಹೆಸರಾಂತ ಡೀಲರ್ ಭಾರತ್ ಅಟೋಕಾರ್ಸ್ ಇದರ ಪುತ್ತೂರು ಶಾಖೆಯಲ್ಲಿ ಮೇ 15ರಂದು ನ್ಯೂ ಜೆನ್ ಸ್ವಿಫ್ಟ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಕಾರ್ಯಕ್ರಮವು ನಡೆಯಿತು.‌


ಮುಖ್ಯ ಅತಿಥಿಗಳಾಗಿ ಆಗಮಿಸಿದ ಪುತ್ತೂರು ಸಂಚಾರಿ ಪೊಲೀಸ್ ಠಾಣಾ ಉಪ ನಿರೀಕ್ಷಕ ಶಾಹಿದ್ ಆಫ್ರಿದಿ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ , ವಿನೂತನ ಕಾರನ್ನು ಅನಾವರಣಗೊಳಿಸಿ ಶುಭಹಾರೈಸಿದರು.
ಇನ್ನೋರ್ವ ಅತಿಥಿ ವಿ.ಜೆ ವಿಖ್ಯಾತ್ ಸುಳ್ಯ ಮಾತನಾಡಿ , ಮಾರುತಿಯು ಎಷ್ಟು ಪ್ರಾಬಲ್ಯ ಹೊಂದಿದೆಯೆಂದರೆ , ಗ್ರಾಮೀಣ ಭಾಗದ ಜನರಿಗೆ ಯಾವ ಕಂಪನಿಯ ಕಾರುಗಳ ಬಗ್ಗೆ ಅರಿವಿಲ್ಲದಿದ್ದರೂ ಮಾರುತಿ ಕಾರುಗಳ ಬಗ್ಗೆ ಸಂಪೂರ್ಣ ಮಾಹಿತಿ ಬಲ್ಲವರಾಗಿದ್ದಾರೆ. ಎಲ್ಲೆಡೆಯೂ ಮಾರುತಿ ಕಾರುಗಳು ಪ್ರಾಬಲ್ಯವನ್ನು ಹೇಗೆ ಮೆರೆದಿದೆ ಎಂಬುವುದಕ್ಕೆ ಗ್ರಾಮೀಣ ಜನರೇ ಸಾಕ್ಷಿ. ಇಲ್ಲಿನ ಸಿಬ್ಬಂದಿಗಳು ಕೂಡ ಗ್ರಾಹಕರಿಗೆ ಅತ್ಯುತ್ತಮ ರೀತಿಯ ಸೇವೆ ನೀಡುವಲ್ಲಿ ಸೈ ಎನಿಸಿಕೊಂಡಿದ್ದು , ಈ ಸಂಸ್ಥೆ ಇನ್ನಷ್ಡೂ ಪ್ರಗತಿ ಪಥದಲ್ಲಿ ಸಾಗಿ ,ನಂಬರ್ ಒನ್ ಸಂಸ್ಥೆಯಾಗಿ ಹೆಸರು ಪಡೆಯಲಿಯೆಂದು ಹಾರೈಸಿದರು.
ವೇದಿಕೆಯಲ್ಲಿ ಭಾರತ್ ಅಟೋಕಾರ್ಸ್ ಪುತ್ತೂರು ಶಾಖೆ ಮ್ಯಾನೇಜರ್ ಪ್ರದೀಪ್ ಶೆಟ್ಟಿ , ವರ್ಕ್ ಶಾಪ್ ಮ್ಯಾನೇಜರ್ ಆನಂದ್ ಮೂಲ್ಯ ಹಾಜರಿದ್ದರು. ಪೃಥ್ವಿ ಪ್ರಾರ್ಥಿಸಿ , ಆಸಿಫ್ ವಿನೂತನ ಕಾರಿನ ವೈಶಿಷ್ಟ್ಯ ಬಗ್ಗೆ ಮಾಹಿತಿ ನೀಡಿದರು. ಜಯರಾಮ್ ಆರ್ಲಪದವು ನಿರೂಪಿಸಿದರು.
ಈ ವೇಳೆ ಸಂಸ್ಥೆಯ ಗ್ರಾಹಕರು ಹಾಗೂ ಭಾರತ್ ಅಟೋಕಾರ್ಸ್ ಸಮೂಹ ಸಂಸ್ಥೆಯ ಎಲ್ಲಾ ಸಿಬಂದಿಗಳು ಇದ್ದರು.

ವಿನೂತನ ಕಾರಿನ ಬಗ್ಗೆ…
ನ್ಯೂ ಫೋರ್ಥ್ ಜೆನ್ ಸ್ವಿಫ್ಟ್ ಅಲ್ ನ್ಯೂ Z ಸಿರೀಸ್ Z12E ಎಂಜಿನ್ ಹೊಂದಿರುವ ಐಕಾನಿಕ್ ಬ್ರ್ಯಾಂಡ್. ಮೈಲೇಜ್ 25.75 per ಲೀ ಇಂಧನ ಕ್ಷಮತೆ ಹೊಂದಿದೆ. ಸಿಗ್ನೆಚರ್ ರ‍್ಯಾಪ್ ಅಲ್ ರೌಂಡ್ ಡಿಸೈನ್ , ಪ್ರತಿ ಮಾಡೆಲ್‌ನಲ್ಲೂ 6 ಏರ್ ಬ್ಯಾಗ್ , ಆರಂಭಿಕ ಬೆಲೆ 6.49 ಲಕ್ಷದಿಂದ 9.64499 ಜೊತೆಗೆ ಸುಝುಕಿ ಕನೆಕ್ಟ್ ಫೀಚರ್ ಕೂಡ ಲಭ್ಯವಿದ್ದು , ಮಾಹಿತಿಗಾಗಿ ಮೊ.9483501730ಅಥವಾ 9538997230 ಸಂಪರ್ಕಿಸಬಹುದು.

10 ಕಾರುಗಳ ಬುಕ್ಕಿಂಗ್ , ಪ್ರಥಮ ಗ್ರಾಹಕರಿಗೆ ಕೀ ಹಸ್ತಾಂತರ…
ವಿನೂತನ ರೀತಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡ ನಾಲ್ಕನೇ ತಲೆಮಾರಿನ ಸ್ವಿಫ್ಟ್ ಕಾರಿನ ಮೊದಲ ಗ್ರಾಹಕ ದಂಪತಿ ಆಶಾ ಮುರಳಿ ಪಡ್ನೂರ್ ಇವರಿಗೆ ಕಾರಿನ ಕೀಲಿಯನ್ನು ನಗರ ಸಂಚಾರಿ ಠಾಣಾ ಉಪ ನಿರೀಕ್ಷಕ ಶಾಹಿದ್ ಆಫ್ರಿದಿ ನೀಡಿ , ಶುಭಹಾರೈಸಿದರು. ಜೊತೆಗೆ ಸ್ಥಳದಲ್ಲೇ ಎರಡು ಕಾರಿನ ಬುಕ್ಕಿಂಗ್ ಸೇರಿ , ಒಟ್ಟಾರೆ 10 ಕಾರುಗಳ ಬಕ್ಕಿಂಗ್ ಕೂಡ ನಡೆಯಿತು.

LEAVE A REPLY

Please enter your comment!
Please enter your name here