





ನೆಲ್ಯಾಡಿ: ಗ್ರಾಮ ಸುಭಿಕ್ಷೆ ಹಾಗೂ ವರುಣಾಗಮನಕ್ಕಾಗಿ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ಮೇ.16ರಂದು ಬೆಳಿಗ್ಗೆ ಸೀಯಾಳಾಭಿಷೇಕ ನಡೆಯಿತು.



ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ ಬಡೆಕ್ಕಿಲ್ಲಾಯ ಹಾಗೂ ಅರ್ಚಕರಾದ ಪ್ರಜ್ವಲ್ ಬನ್ನಿಂತಾಯ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆಯಿತು. ದೇವಸ್ಥಾನದ ಟ್ರಸ್ಟ್‌ನ ಕಾರ್ಯದರ್ಶಿ ರಮೇಶ್ ಬಿ.ಜಿ., ಪ್ರಮುಖರಾದ ಅಜಿತ್‌ಕುಮಾರ್ ಪಾಲೇರಿ, ಜನಾರ್ದನ ಗೌಡ ಬರಮೇಲು, ಸಂತೋಷ್ ಭಟ್ ಪಾಲೇರಿ, ಶ್ರೀವತ್ಸ ಅರ್ತಿಗುಳಿ, ಬಾಲಕೃಷ್ಣ ಗೌಡ ಆರಕರೆ, ಕುಶಾಲಪ್ಪ ಗೌಡ ಆರಕರೆ, ವೇದಕುಮಾರ್ ಪುಳಾರ, ಪವನ್ ರೈ ಕುದುಮಾರುಗುತ್ತು, ಅಚ್ಚುತ ನಾಯ್ಕ ನಕ್ಕುರಡ್ಕ, ಸಾಂತಪ್ಪ ನಾಯ್ಕ್ ಶಿವಾರು, ರವಿ ಪೆರ್ಲ ಮತ್ತಿತರ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
















