ನಿಡ್ಪಳ್ಳಿ ಗ್ರಾ.ಪಂ.‌ವಠಾರದಲ್ಲಿ ಡೆಂಗ್ಯೂ ದಿನಾಚರಣೆ

0

ನಿಡ್ಪಳ್ಳಿ;ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದ.ಕ.ಮಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಪಾಣಾಜೆ ಇವುಗಳ ಜಂಟಿ ಆಶ್ರಯದಲ್ಲಿ ಡೆಂಗ್ಯೂ ದಿನಾಚರಣೆ ಕಾರ್ಯಕ್ರಮ ನಿಡ್ಪಳ್ಳಿ  ಪಂಚಾಯತ್ ವಠಾರದಲ್ಲಿ ಮೆ.16 ರಂದು ನಡೆಯಿತು.

  ಮಾರಕ ರೋಗ ಡೆಂಗ್ಯೂ ಹಾಗೂ ಮಲೇರಿಯಾ ಒಂದು ಸಾಂಕ್ರಾಮಿಕ ರೋಗ.ಈ ರೋಗ ಒಂದು ಸೊಳ್ಳೆಯಿಂದ ಹರಡುತ್ತಿದ್ದು ರೋಗ ಹರಡದಂತೆ  ತಡೆಗಟ್ಟಲು  ಅನುಸರಿಸ ಬೇಕಾದ ಕ್ರಮಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ತಿಳುವಳಿಕೆ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಮನೆ ಮತ್ತು ಕಟ್ಟಡಗಳ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕೆಂದು ಹಿರಿಯ  ಆರೋಗ್ಯ ಸಹಾಯಕಿ ಕುಸುಮಾವತಿ ಎ.ವಿ ಮಾಹಿತಿ ನೀಡಿದರು.

  ಸಿ.ಹೆಚ್.ಒ ಲಕ್ಷ್ಮೀ, ಪಂಚಾಯತ್ ಸಿಬ್ಬಂದಿಗಳಾದ ರೇವತಿ, ಸಂಶೀನಾ, ವಿನೀತ್ ಕುಮಾರ್, ಜಯ ಕುಮಾರಿ, ಆಶಾ ಕಾರ್ಯಕರ್ತೆಯರಾದ ಪವಿತ್ರ.ಎಂ, ಗೀತಾ, ಸುಮತಿ, ಗ್ರಂಥ ಪಾಲಕಿ ಪವಿತ್ರ, ಅಂಗವಿಕಲರ ಕಲ್ಯಾಣ ಇಲಾಖೆಯ ರಾಮಣ್ಣ, ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡರು.

LEAVE A REPLY

Please enter your comment!
Please enter your name here